ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ
ಸಂಜೆವಾಣಿ ವಾರ್ತೆ,
ವಿಜಯಪುರ,ಏ.15:ಮಾನವತಾವಾದಿ ಭಾರತರತ್ನ ಡಾ.| ಬಿ.ಆರ್. ಅಂಬೇಡ್ಕರವರ 133ನೇ ಜಯಂತಿಯನ್ನು ಕ.ರಾ.ಸ.ನೌ. ಸಮನ್ವಯ ಸಮಿತಿ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ನೇತೃತ್ವದಲ್ಲಿ ಡಾ.| ಬಾಬಾಸಾಹೇಬ ಅಂಬೇಡ್ಕರವರ ಪುತ್ಥಳಿಗೆ ಪೂಜೆ ನೆರವೇರಿಸಿ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಎಸ್.ಸಿ/ಎಸ್.ಟಿ. ನೌಕರರ ಸಮನ್ವಯ ಸಮಿತಿಯ ಜಿಲ್ಲಾಧ್ಯಕ್ಷ ಬಿ.ಎಚ್. ನಾಡಗೇರಿ ಮಾತನಾಡಿ, 2025ನೇ ಸಾಲಿನಿಂದ ಪ್ರಾಥಮಿಕ ಹಾಗೂ ಪ್ರೌಢ, ಪದವಿಪೂರ್ವ ಕಾಲೇಜುಗಳನ್ನು ಏ. 14 ವರೆಗೆ ಶೈಕ್ಷಣಿಕ ಅವಧಿಯನ್ನು ವಿಸ್ತರಿಸಲು ಸರ್ಕಾರಕ್ಕೆ ಆಗ್ರಹ ಪಡಿಸಲಾಯಿತು.
ಈ ಸಂದರ್ಭದಲ್ಲಿ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುರೇಶ ಶೆಡಶ್ಯಾಳ ಅವರು ಡಾ. ಬಾಬಾಸಾಹೆಬ ಅಂಬೇಡ್ಕರವರ ಬಗ್ಗೆ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಸಯ್ಯದ ಜುಬೇರ ಕೆರೂರ, ನಿಜು ಮೇಲಿನಕೇರಿ, ಬಿ.ಟಿ. ವಾಗ್ಮೋರೆ, ಸೂರ್ಯಕಾಂತ ಹೊಸಮನಿ, ಮಲ್ಲಿಕಾರ್ಜುನ ಮಾದರ, ಸುನೀಲ ರಬಕವಿ, ರವಿ ಯಲ್ಲಡಗಿ, ಭಗವಂತ ಜಿಗಜಿಣಗಿ, ಸಂತೋಷ ರೋಣಿಹಾಳ, ಅಮರಪ್ಪ ಚಲವಾದಿ, ವಿನೋದಕುಮಾರ ರತ್ನಾಕರ, ವಿಜಯಕುಮಾರ ಸೂರ್ಯವಂಶಿ, ಬಸವರಾಜ ನಾಟೀಕಾರ, ರಾಜಶೇಖರ ಯಡಹಳ್ಳಿ ಉಪಸ್ಥಿತರಿದ್ದರು.