ಗೊಬ್ಬೂರ (ಕೆ) ಗ್ರಾಮದಲ್ಲಿ ಮತದಾನದ ಕುರಿತುಜಾಗೃತಿ ಮೂಡಿಸುವ ಚುನಾವಣಾ ಜಾಗೃತಿ ವಾಹಿನಿಗೆ ಚಾಲನೆ
ಕಲಬುರಗಿ:ಏ.14:ಲೋಕಸಭಾ ಸಾರ್ವತ್ರಿಕ ಚುನಾವಣೆ-2024ರ ಹಿನ್ನೆಲೆಯಲ್ಲಿ ಮತದಾನದ ಕುರಿತು ಅರಿವು ಮೂಡಿಸುವ ಚುನಾವಣಾ ಜಾಗೃತಿ ವಾಹಿನಿಗೆ ಅಫಜಲಪೂರ ತಾಲೂಕಿನ ಬಿದನೂರ ಗ್ರಾಮ ಪಂಚಾಯತಿಯ ಗೊಬ್ಬುರ (ಕೆ) ಗ್ರಾಮದಲ್ಲಿ ಅಫಜಲಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಶೇಖರ ಅವರು ಇತ್ತೀಚೆಗೆ ಹಸಿರು ನಿಶಾನೆ ತೋರಿಸುವುದರ ಮೂಲಕ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಕಲಬುರಗಿ ಲೋಕಸಭೆ ಚುನಾವಣೆ-2024ರ ಹಿನ್ನೆಲೆಯಲ್ಲಿ ಪ್ರತಿಯೊಬ್ಬರೂ ಕಡ್ಡಾಯವಾಗಿ 2024ರ ಮೇ 7 ರಂದು ಮತಗಟ್ಟೆಗಳಿಗೆ ತೆರಳಿ ತಪ್ಪದೇ ಮತದಾನ ಮಾಡಬೇಕು. ಮತದಾನವು ನಮ್ಮ ಹಕ್ಕಾಗಿದ್ದು, ಯಾವುದೇ ಕಾರಣಕ್ಕೂ ಮತದಾನದಿಂದ ಯಾರು ದೂರು ಉಳಿಯಬಾರದು ಎಂದರು.
ನಂತರ ಗ್ರಾಮದ ಜನರಿಗೆ ಮತದಾನದ ಕುರಿತು ಅರಿವು ಮೂಡಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು. ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಸಿಬ್ಬಂದಿ ಹಾಗೂ ಗ್ರಾಮದ ಜನರು ಉಪಸ್ಥಿತರಿದ್ದರು.