ಹಿರಿಯೂರಿನ  ಪಿ ಪ್ರಗತಿಗೆ ವೈದ್ಯೆಯಾಗುವ ಕನಸು ನನಸಾಯಿತು.
ಸಂಜೆವಾಣಿ ವಾರ್ತೆ
ಹಿರಿಯೂರು : ಏ. 14 – ಹಿರಿಯೂರು ನಗರದ ವೀರಶೈವ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕರಾದ ವಿ ಪ್ರಸನ್ನ ಕುಮಾರ್ ಹಾಗೂ ಶ್ರೀಮತಿ ಶಾರದ ಇವರ ಸುಪುತ್ರಿ ಪಿ ಪ್ರಗತಿಯವರು  ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಎಂ.ಬಿ.ಬಿ.ಎಸ್ ವ್ಯಾಸಂಗ ಮಾಡಿದ್ದು  ಶುಕ್ರವಾರ ಸಂಜೆ ನಡೆದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪಡೆದಿರುತ್ತಾರೆ. ಪ್ರಾಥಮಿಕ, ಪ್ರೌಢಶಾಲೆಯ ಹಂತಗಳಿಂದಲೂ ಉತ್ತಮ ಅಂಕಗಳನ್ನು ಪಡೆಯುತ್ತಾ ಎಸ್ ಎಸ್ ಎಲ್ ಸಿ  ಮತ್ತು ದ್ವಿತೀಯ ಪಿಯುಸಿ ಯಲ್ಲಿ, ರ‍್ಯಾಂಕ್  ಪಡೆದಿದ್ದ ಪಿ ಪ್ರಗತಿಯವರು ವೈದ್ಯೆಯಾಗುವ ಕನಸು ಕಂಡಿದ್ದರು. ಸಾಕಷ್ಟು ಶ್ರಮವಹಿಸಿ ವ್ಯಾಸಂಗ ಮಾಡಿ ಇದೀಗ ಎಂ ಬಿ ಬಿ ಎಸ್ ಪದವಿಯನ್ನು ಪಡೆದು ವೈದ್ಯರಾಗಿರುತ್ತಾರೆ. ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾರೆ.