ರೋಟರಿ ಕ್ಲಬ್ ವತಿಯಿಂದ ಗೋಶಾಲೆ ಗೋವುಗಳಿಗೆ ನೀರಿನ ಪರಿಕರ ವ್ಯವಸ್ಥೆ
ವಿಜಯಪುರ,ಏ.14:ರೋಟರಿ ಕ್ಲಬ್ ವಿಜಯಪುರ ಉತ್ತರ ವಲಯದ ವತಿಯಿಂದ ಶನಿವಾರ ಭೂತನಾಳ ಟ್ಯಾಂಕ್ ಹತ್ತಿರವಿರುವ ಗೋಶಾಲೆಗೆ ಭೇಟಿ ನೀಡಿ ಗೋವುಗಳಿಗೆ ಕುಡಿಯುವ ನೀರಿನ ಟ್ಯಾಂಕ್‍ಗಳನ್ನು ಒದಗಿಸಲಾಯಿತು.
ರೋಟರಿ ಕ್ಲಬ್ ವತಿಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಕೈಗೊಂಡಿದ್ದು, ರೋಟರಿ ಕ್ಲಬ್ ಪ್ರಾಂತದ ಗವ್ಹರ್ನರ್ ನಾಸೀರ ಬೋರಸನವಾಲಾ ಅವರು ಕ್ಲಬ್ ವೀಕ್ಷಣೆ ಮಾಡಿ ಕ್ಲಬ್ ವತಿಯಿಂದ ಗೋಶಾಲೆಗಳ ಗೋವುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ದಿವಟಗೇರಿ ಗಲ್ಲಿಯಲ್ಲಿರುವ ರಾಯರಮಠಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆರ್.ಓ. ವಾಟರ್ ಟ್ಯಾಂಕ್ ಒದಗಿಸಲಾಯಿತು.
ಈ ಸಂದರ್ಭದಲ್ಲಿ ಕೋ-ಅಧ್ಯಕ್ಷÀ ಮಲ್ಲು ಕಲಾದಗಿ ಅವರು ಮಾತನಾಡಿ, ಗೋವುಗಳ ಸಂರಕ್ಷಣೆ ಅತ್ಯಂತ ಮಹತ್ವದ್ದು ಹಾಗೆಯೇ ಕುಡಿಯುವ ನೀರಿನ ವ್ಯವಸ್ಥೆ ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ವತಿಯಿಂದ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತ ಬಂದಿದ್ದು, ಪ್ರತಿನಿತ್ಯ ವಿವಿಧೆಡೆ ರೋಟರಿ ಕ್ಲಬ್ ವತಿಯಿಂದ ನೀರಿನ ಪ್ಲಾಟ್‍ಗಳನ್ನಿಟ್ಟು ನೀರಿನ ದಾಹ ತೀರಿಸಲು ಪ್ರಯತ್ನಿಸಲಾಗುತ್ತಿದ್ದು, ಸಮಾಜ ಮುಖ್ಯ ಕಾರ್ಯದಲ್ಲಿ ಪ್ರತಿಯೊಬ್ಬರು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಚಾರ್ಟರ್ಡ ಅಕೌಂಟೆಂಟ್ ಡಿ.ಎಸ್.ಪಾಟೀಲ, ರೋಟರಿ ಕ್ಲಬ್‍ನ ಎ.ಜಿ. ಚಿದಾನಂದ ಸಿದ್ದಾಪುರ ಮಠ, ರಾಜ ಶಹಾ ಸೇರಿದಂತೆ ಉತ್ತರ ವಲಯದ ರೋಟರಿ ಕ್ಲಬ್‍ನ ಸದಸ್ಯರು ಉಪಸ್ಥಿತರಿದ್ದರು.