ಪಿಯುಸಿ: ಸ್ಪಂದನಾಗೆ ಶೇ. 93 ಫಲಿತಾಂಶ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೧೪: 2023-24ನೇ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕ ಟವಾಗಿದ್ದು, ನಗರದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿನ ಅಮೃತ ಪಿ.ಯು. ಕಾಲೇಜಿಗೆ ಶೇ. 100ರಷ್ಟು ಫಲಿತಾಂಶ ಬಂದಿದ್ದು, ವಿಜ್ಞಾನ ವಿಭಾಗದಲ್ಲಿ ಸ್ಪಂದನ ಎಂ. ಒಟ್ಟು 600 ಅಂಕಗಳಿಗೆ 558 ಅಂಕಗಳನ್ನು ಪಡೆಯುವ ಮೂಲಕ ಶೇ. 93ರಷ್ಟ ಫಲಿತಾಂಶ ಪಡೆದಿದ್ದಾರೆ.ಹಿರಿಯ ಪತ್ರಕರ್ತ ಪಿ.ಮಂಜುನಾಥ ಕಾಡಜ್ಜಿ ಮತ್ತು ಸುನಂದ ದಂಪತಿಯ ಪುತ್ರಿಯಾದ ಸ್ಪಂದನ ಅವರಿಗೆ ಅಮೃತ ಪಿ.ಯು. ಕಾಲೇಜಿನ ಪ್ರಾಂಶುಪಾಲರು, ಬೋಧಕರು, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.