9ನೇ ವಾರ್ಷಿಕೋತ್ಸವ
ಸತ್ತೂರು,ಏ14: ಸುತ್ತೂರಿನ ನಾರಾಯಣ ಪಾರಾಯಣ ಬಳಗದ 9ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಬರುವ ರಾಮನವಮಿಯಂದು ಅಂದರೆ ದಿನಾಂಕ 17ರಂದು ಸಾಯಂಕಾಲ 6 ಗಂಟೆಗೆ ವನಸಿರಿ ನಗರದಲ್ಲಿರುವ ಆನಂದ್ ಬಾಗಲ್ ಇವರು ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದೆ. ತನ್ನಿಮಿತ್ತ ಬಳಗದ ಸದಸ್ಯರಿಂದ ಪಾರಾಯಣ, ವರದಿ ವಾಚನ, ಸ್ಮರಣ ಸಂಚಿಕೆ ಬಿಡುಗಡೆ ಹಾಗೂ 13ನೇ ಅಧ್ಯಾಯದ ಭಗವದ್ಗೀತಾ ಅಭಿಯಾನ, ನಾರಾಯಣಿ ಭಜನಾ ಮಂಡಳಿಯವರಿಂದ ಭಜನೆ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿರುತ್ತದೆ. ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿಯ ವಾಳ್ವೆಕರ ರಾಘವೇಂದ್ರ ಮಠದ ದೇವಸ್ಥಾನದ ಪಂ. ನರಹರಿ ಆಚಾರ ವಾಳ್ವೆಕರ ಆಗಮಿಸಲಿದ್ದಾರೆ ಎಂದು ಬಳಗದ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.