ಪೂರ್ವಭಾವಿ ಸಭೆ
ಲಕ್ಷ್ಮೇಶ್ವರ,ಏ.14: ಪಟ್ಟಣದ ಎಸ್ ಬಿ ಐ ನ ವರ್ತಕರ ಸಭಾಭವನದಲ್ಲಿ ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಶ್ರೀಗಳವರ 6ನೇ ವರ್ಷದ ಪೀಠಾರೋಹಣ ಕಾರ್ಯಕ್ರಮ ಹಮ್ಮಿಕೊಳ್ಳಲು ಪೂರ್ವಭಾವಿ ಸಭೆ ಜರುಗಿತು.
ಶ್ರೀಗಳು ಈ ಸಮಾಜ ರಾಜ್ಯದಲ್ಲಿ ಶೇಕಡ 80ರಷ್ಟು ಇದ್ದರು ಈ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರೆತಿಲ್ಲ ಸಾಮಾಜಿಕ ಶೈಕ್ಷಣಿಕ ಆರ್ಥಿಕ ರಾಜಕೀಯ ಮತ್ತು ಔದ್ಯೋಗಿಕವಾಗಿ ಸ್ಥಾನ ಲಭಿಸಬೇಕಾದರೆ ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಯಲ್ಲಿ ಸೇರ್ಪಡೆಯಾಗಬೇಕು ಮತ್ತು ಈಗಾಗಲೇ ನೀಡಿರುವ 2ಡಿ ಮೀಸಲಾತಿ ನ್ಯಾಯಾಲಯದಲ್ಲಿ ಇರುವುದರಿಂದ ಈ ಸಮಾಜಕ್ಕೆ ಸೂಕ್ತ ಸ್ಥಾನಮಾನ ದೊರೆತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕ ವೀರಶೈವ ಪಂಚಮಸಾಲಿ ಸಮಾಜದ ಅಧ್ಯಕ್ಷರಾದ ಮಂಜುನಾಥ ಮಾಗಡಿ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಿಂಗಪ್ಪ ಪ್ಯಾಟಿ ರಜನಿಕಾಂತ್ ದೇಸಾಯಿ ರುದ್ರಗೌಡ ಪೆÇಲೀಸ್ ಪಾಟೀಲ್ ಮಾತನಾಡಿದರು. ವೇದಿಕೆ ಮೇಲೆ ಸಮಾಜದ ಮುಖಂಡರಾದ ಶ್ರೀಕಾಂತಗೌಡ ಪಾಟೀಲ್ ಚೆನ್ನಪ್ಪ ಕರೆಯುತ್ತಿನ ವಸಂತಗೌಡ ಪಾಟೀಲಜುಂಜನಗೌಡ ನರಸಮ್ಮನವರ ದೇವೇಂದ್ರಪ್ಪ ಮರಳಿಹಳ್ಳಿ ಮಂಜುನಾಥ್ ಗೌರಿ ಪರಮೇಶ ರಿತ್ತಿ ಶಿವಾನಂದ್ ಬನ್ನಿಮಟ್ಟಿ ಭೀಮಣ್ಣ ಹುಲ್ಲೂರು ಶಂಕರಗೌಡ ದೊಡ್ಡ ಗೌಡರ್ ಇದ್ದರು. ಚಂದ್ರು ಮಾಗಡಿ ಕಾರ್ಯಕ್ರಮ ನಿರ್ವಹಿಸಿದರು.