ವರ್ಲ್ಡ್ ಮಾಸ್ಟರ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ಗೆ ಭೂಲಕ್ಷ್ಮಿ ಆಯ್ಕೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೧೪: ಎಸ್.ಬಿ.ಕೆ.ಎಫ್. 9ನೇ ಅಂತರಾಷ್ಟ್ರೀಯ ಕ್ರೀಡಾಕೂಟ ಚಾಂಪಿಯನ್ ಶಿಪ್ ಸ್ಪರ್ಧೆ ನೇಪಾಳ ರಾಜ್ಯದ ಪೋಕರದಲ್ಲಿ ಜರುಗಿತು. ಸಂಕೇತ  ಭಾರತೀಯ ಕೀಲ್ ಫೌಂಡೇಶನ್ ಹಾಗೂ ಹಿಂದು  ಶ್ರೀ ಆರ್ಗನೈಸನ್  ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 1ರಿಂದ5ರವರೆಗೆ ರಂಗಸಾಲಾ ಅಂತರಾಷ್ಟ್ರೀಯ ಕ್ರೀಡಾಂಗಣ ನೇಪಾಳದಲ್ಲಿ ಆಯೋಜಿಸಲಾಗಿತ್ತು.ಭಾರತ ದೇಶ ದಿಂದ ಭಾಗವಹಿಸಿದ ದಾವಣಗೆರೆಯ ಜಿಲ್ಲಾ ಹರಿಹರದ ನ್ಯಾಯಾಲಯದಲ್ಲಿ ಆದೇಶ ಜಾರಿಕರಾಗಿ ಸೇವೆ ಸಲ್ಲಿಸುತ್ತಿರುವ ಭೂಲಕ್ಷ್ಮೀಯವರು ಕ್ರೀಡೆಯಲ್ಲಿ ಭಾಗವಹಿಸಿ100, ಮತ್ತು 200, ಮೀಟರ್ ಓಟದ ಸ್ಪರ್ಧೆ,  ಚಕ್ರ ಎಸೆತ, ಪವರ್ ಲಿಫ್ಟಿಂಗ್, ಸ್ಪರ್ಧೆಗಳಲ್ಲಿಪ್ರಥಮ ಬಹುಮಾನ ಹಾಗೂ ಕುಸ್ತಿಯಲ್ಲಿ 55 ಕೆ.ಜಿ ವಿಭಾಗದಲ್ಲಿ ಪ್ರಥಮ ಓಟ್ಟು {5} ಸ್ಥಾನ ಪಡೆದು  ಚಾಂಪಿಯನ್‌ಶಿಪ್ಪ್ರ ಶಸ್ತಿಗಳಿಸಿ ನಂತರ ಗುಟೇನ್‌ಬರ್ಗ್‌ ದೇಶದಲ್ಲಿ ನಡೆಯಲಿರುವ  ವರ್ಲ್ಡ್ಅಥ್ಲೆಟಿಕ್ ಚಾಂಪಿಯನ್‌ಶಿಪ್‌ಗೆ ಆಯ್ಕೆಯಗಿದ್ದಾರೆ.ಅವರಿಗೆ ದಾವಣಗೆರೆಯ ಜಿಲ್ಲಾ ಸತ್ರ ನ್ಯಾಯಾಲಯದ ಗೌರವಾನ್ವಿತ ನ್ಯಾಯಧಿಶರುಗಳು ಹಾಗೂ ಸಿಬ್ಬಂದಿ ವರ್ಗದವರು, ದಾವಣಗೆರೆ ಜಿಲ್ಲಾ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ ವೀರೆಶ್‌.ಎಸ್. ವಡೇನಪುರ ಹಾಗು ನೌಕರ ಸಂಘದ ಎಲ್ಲಾ ಪದಾಧಿಕಾರಿಗಳು  ಇವರ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.