ಜಗತ್ತು ಕಂಡ ಶ್ರೇಷ್ಠ ಚಿಂತಕರು ಡಾ.ಅಂಬೇಡ್ಕರ್ : ಬಿರಾದಾರ
ಔರಾದ : ಏ.14:ರಾಷ್ಟ್ರದ ಪ್ರಜೆಗಳ ಸಮಾನತೆಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ವಿರಚಿತ ಸಂವಿಧಾನವನ್ನು ಗೌರವಿಸಬೇಕಾದುದ್ದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಜಗತ್ತು ಕಂಡ ಶ್ರೇಷ್ಠ ಚಿಂತಕ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಸಾಮಾಜಿಕ ಚಿಂತಕ ಜಗದೀಶ ಬಿರಾದಾರ್ ಹೇಳಿದರು.
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತ್ಯುತ್ಸವ ಸಮಿತಿ ಹಾಗೂ ಕರ್ನಾಟಕ ರಾಜ್ಯ ಎಸ್‍ಸಿ, ಎಸ್‍ಟಿ ನೌಕರರ ಸಮನ್ವಯ ಸಮಿತಿ ಔರಾದ್ ವತಿಯಿಂದ ಆಯೋಜಿಸಿದ ಡಾ. ಬಿ.ಆರ್ ಅಂಬೇಡ್ಕರ್ ಜಯಂತಿ ಹಿನ್ನೆಲೆ ಉಪನ್ಯಾಸ ಹಾಗೂ ಸಾಧಕರ ಸಮ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು ಬಾಬಾ ಸಾಹೇಬ್‍ರ ದೂರದೃಷ್ಟಿಯ ಫಲವಾಗಿ ರಚಿತವಾದ ಸಂವಿಧಾನವು ರಾಷ್ಟ್ರದ ಕಾನೂನಿಗೆ ಅಡಿಪಾಯವಾಗಿದ್ದು ಸೌಹಾರ್ದತೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಪ್ರಜೆಗಳಿಗೆ ಸಂವಿಧಾನದಡಿ ನೀಡಿರುವ ಹಕ್ಕುಗಳನ್ನು ಪಡೆಯಲು ತೋರುವಷ್ಟೇ ಆಸಕ್ತಿ ಕರ್ತವ್ಯಗಳ ನಿರ್ವಹಣೆಗೂ ನೀಡಬೇಕು.
ಅಂಬೇಡ್ಕರ್ ಈ ಜಗತ್ತು ಕಂಡ ಶ್ರೇಷ್ಠ ಚಿಂತಕರಾಗಿದ್ದಾರೆ. ಅಸ್ಪೃಶ್ಯತೆ, ಅಸಮಾನತೆ, ಅವೈಜ್ಞಾನಿಕ ಸಂಪ್ರದಾಯಗಳು ವಿರೋಧಿಸಿ ದಿನ ದಲಿತರ ಧ್ವನಿಯಾದ ಅವರ ವಿಚಾರಗಳು ನಮಗೆ ಸದಾ ಆದರ್ಶಪ್ರಾಯವಾಗಿವೆ. ಅಂಬೇಡ್ಕರ್ ಆಶಯದಂತೆ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಎಲ್ಲರೂ ಶ್ರಮಿಸಬೇಕು. ಜಾತಿ, ಮತ, ಧರ್ಮ ಬೇಧಭಾವವಿಲ್ಲದೆ ಎಲ್ಲಾ ವರ್ಗದವರಿಗೂ ಸಮಾನ ಹಕ್ಕುಗಳನ್ನು ನೀಡಿ ವಿಶ್ವಕ್ಕೆ ಮಾದರಿಯಾಗಿರುವ ವ್ಯಕ್ತಿತ್ವ ಅಂಬೇಡ್ಕರ್ ಅವರದ್ದು ಎಂದರು.
ನೌಕರರ ಸಂಘದ ಅಧ್ಯಕ್ಷ ರಾಜಕುಮಾರ ಡೊಂಗರೆ ಮಾತನಾಡಿ, ಶೋಷಿತರ, ದಮನಿತರ ಏಳಿಗೆಗಾಗಿ ಅಂಬೇಡ್ಕರ್ ತತ್ವಗಳ ಅಳವಡಿಕೆ ಅಗತ್ಯವಾಗಿದೆ. ವಿದ್ಯಾರ್ಥಿಗಳು ಅಂಬೇಡ್ಕರ್ ಚಿಂತನೆಗಳು ಹಾಗೂ ಸಂವಿಧಾನದಲ್ಲಿ ನೀಡಿರುವ ಹಕ್ಕುಗಳನ್ನು ಪಡೆದು, ಕರ್ತವ್ಯಗಳನ್ನು ಸಹ ಪರಿಣಾಮಕಾರಿಯಾಗಿ ನಿರ್ವಹಿಸಿ ಸತ್ಪ್ರಜೆಗಳಾಗಿ ರೂಪುಗೆuಟಿಜeಜಿiಟಿeಜಳ್ಳಬೇಕು ಎಂದರು.
ತಹಸೀಲ್ದಾರ್ ನಾಗಯ್ಯ ಹಿರೇಮಠ ಕಾರ್ಯಕ್ರಮ ಉದ್ಘಾಟಿಸಿದರು. ಇದೆ ಸಂದರ್ಭದಲ್ಲಿ ಪಿಯುಸಿಯಲ್ಲಿ ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ತಾಪಂ ಇಒ ವೆಂಕಟ ಶಿಂಧೆ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಅನೀಲಕುಮಾರ್ ಮೆಲ್ದೊಡ್ಡಿ, ಡಾ. ಮನ್ಮತ್ ಡೋಳೆ, ವೀರಶೆಟ್ಟಿ ರಾಠೋಡ್, ರವೀಂದ್ರ ಮೇತ್ರೆ, ಪಿಎ??? ಉಪೇಂದ್ರ ಕುಮಾರ್, ನರಸಿಂಗ ಕೊಂಡೆ, ಆನಂದ ಕಾಂಬಳೆ, ಸೂರ್ಯಕಾಂತ ಸಿಂಗೆ, ಪಂಡರಿ ಆಡೆ, ವಿಶ್ವನಾಥ ಬಿರಾದಾರ್, ತುಳಸಿರಾಮ ಬೇಂದ್ರೆ, ಮಹಾದೇವ ಚಿಟಗೀರೆ, ಬಿಎಂ ಅಮರವಾಡಿ, ಪ್ರಕಾಶ ಭಂಗಾರೆ, ಸುನೀಲ ಮಿತ್ರಾ, ಆದರ್ಶ ನಾಗೂರೆ, ಸೈದಪ್ಪ, ಧನರಾಜ ಮಾನೆ ಸೇರಿದಂತೆ ಇನ್ನಿತರರಿದ್ದರು.