ವಿಜೃಂಬಣೆಯಿಂದ ಜರುಗಿದ ಶ್ರೀ ನಿಮಿಷಾಂಬಾದೇವಿ ಜಯಂತ್ಯೋತ್ಸವ
ತಾಳಿಕೋಟೆ:ಏ.14: ಪಟ್ಟಣದ ಸೋಮವಂಶ ಆರ್ಯ ಕ್ಷತ್ರೀಯ ಸಮಾಜ ಬಾಂದವರ ಕುಲದೇವತೆಯಾದ ಶ್ರೀ ನಿಮಿಷಾಂಬಾದೇವಿ ದೇವಸ್ಥಾನದ 68ನೇ ಜಯಂತ್ಯೋತ್ಸವವು ಪ್ರತಿವರ್ಷದಂತೆ ಈ ಸಲವು ಶನಿವಾರರಂದು ವಿಜೃಂಬಣೆಯಿಂದ ಜರುಗಿತು.
ಜಯಂತ್ಯೋತ್ಸವ ಅಂಗವಾಗಿ ನಸುಕಿನ ಜಾವ 6 ಗಂಟೆಯಿಂದ 7 ಗಂಟೆಯವರೆಗೆ ಪಂಚಾಮೃತ ಅಭಿಷೇಕ, 7-30 ರಿಂದ 12-30ರವರೆಗೆ ಉತ್ಸವ ಮೂರ್ತಿ ಹಾಗೂ ಕಳಸ, ಗಂಗಸ್ಥಳದೊಂದಿಗೆ ಫಲ್ಲಕ್ಕಿ ಉತ್ಸವದ ಭವ್ಯ ಮೆರವಣಿಗೆ ಜರುಗಿ ನಂತರ ದೇವಸ್ಥಾನದಲ್ಲಿ ನವಗೃಹ ಚಂಡಿ ಹೋಮ, ಮಧುವೆ, ಉಪನಯನ ಕಾರ್ಯಕ್ರಮಗಳು ಜರುಗಿದವು.
ಮಧ್ಯಾಹ್ನ ಸಮಸ್ತ ಭಕ್ತಾಧಿಗಳಿಗೆ ಮಹಾಪ್ರಸಾದ ಜರುಗಿತ್ತಲ್ಲದೇ ಸಾಯಂಕಾಲ 5 ಗಂಟೆಗೆ ಫಲ್ಲಕ್ಕಿ ಉತ್ಸವವು ದೇವಸ್ಥಾನದಿಂದ ಸಕಲ ವಾದ್ಯವೈಭವಗಳೊಂದಿಗೆ ಪ್ರಾರಂಭಗೊಂಡು ರಾಜವಾಡೆಯ ಶ್ರೀ ಮಹಾದೇವರ ದೇವಸ್ಥಾನ ತಲುಪಿ ಮರಳಿ ಅದೇ ಮಾರ್ಗವಾಗಿ ದೇವಸ್ಥಾನಕ್ಕೆ ಆಗಮಿಸಿತು.
ರಾತ್ರಿ 8 ಗಂಟೆಗೆ ಸಹಸ್ರ ದೀಪೋತ್ಸವ, ಎಸ್.ಎಸ್.ಎಲ್.ಸಿ. ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜರುಗಿತು. ನಂತರ ಮಹಾ ಮಂಗಳಾರತಿ ಕಾರ್ಯಕ್ರಮದೊಂದಿಗೆ ಜಯಂತ್ಯೋತ್ಸವವು ಸಂಪನ್ನಗೊಂಡಿತು.
ಈ ಜಯಂತ್ಯೋತ್ಸವದ ನೇತೃತ್ವವನ್ನು ಸಮಾಜದ ಅಧ್ಯಕ್ಷ ಬಾಬುರಾವ್ ಚಿತಾಪೂರ, ಉಪಾಧ್ಯಕ್ಷ ರಮೇಶ ಚವ್ಹಾಣ, ಖಜಾಂಚಿ ಪ್ರಕಾಶ ಉಭಾಳೆ, ಗೌರವ ಕಾರ್ಯದರ್ಶಿ ಪ್ರದೀಪ ಭುಸಾರೆ, ಮಾರುತಿರಾವ್ ಚವ್ಹಾಣ, ಘನಶಾಮ ಚವ್ಹಾಣ, ಗಣಪತಿ ಚವ್ಹಾಣ, ಮೋಹನರಾವ್ ಚವ್ಹಾಣ, ನಾಗೇಶ ಚವ್ಹಾಣ, ಶಂಕರ ಉಭಾಳೆ, ಸಂಜಯ ಭುಸಾರೆ, ಶಂಕರ ಭುಸಾರೆ, ಕಾಶಿನಾಥ ಚಿತಾಪೂರ, ವಿಶ್ವನಾಥ ಉಭಾಳೆ, ಗುಂಡು ಪಿಂಪಳೆ, ಅರವಿಂದ ಚವ್ಹಾಣ, ತುಳಸಿರಾಮ್ ಚವ್ಹಾಣ, ಮಂಜುನಾಥ ಮಿರೆಜಕರ, ರಾಮಚಂದ್ರ ಮಿರೆಜಕರ, ವಿಠ್ಠಲ ಚವ್ಹಾಣ, ದತ್ತಾತ್ರೇಯ ಉಭಾಳೆ, ರಾಘವೇಂದ್ರ ಚವ್ಹಾಣ, ಶೇಷಾರಾಮ ಚವ್ಹಾಣ, ಹಾಗೂ ಸಮಾಜದ ಮಹಿಳಾ ಮಂಡಳದ ಸದಸ್ಯನಿಯರು ಮೊದಲಾದವರು ವಹಿಸಿದ್ದರು.