ಖರ್ಚು ವೆಚ್ಚಗಳ ಮೇಲೆ ಪ್ರತಿದಿನ ನಿಗಾವಹಿಸಿ
ಧಾರವಾಡ,ಏ14: ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹಾಗೂ ಚುನಾವಣಾ ಅಭ್ಯರ್ಥಿಗಳ ಖರ್ಚುವೆಚ್ಚದ ಮೇಲೆ ಪ್ರತಿ ದಿನವೂ ತೀವ್ರ ನಿಗಾವಹಿಸುವಂತೆ ಚುನಾವಣಾ ವೆಚ್ಚ ವೀಕ್ಷಕರಾದ ಭೂಷಣ ಪಾಟೀಲ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಚುನಾವಣಾ ಅಭ್ಯರ್ಥಿಗಳ ಪ್ರತಿದಿನದ ವಿವಿಧ ಕಾರ್ಯಕ್ರಮಗಳ, ಸಮಾರಂಭಗಳ ಚಟುವಟಿಕೆಗಳನ್ನು ಸರಿಯಾಗಿ ದಾಖಲಿಸಿಕೊಳ್ಳುವಂತೆ ಹಾಗೂ ವಿಡಿಯೋ ರೆಕಾರ್ಡಿಂಗ್ ಸಹ ಮಾಡುವಂತೆ ವಿಎಸ್‍ಟಿ, ಎಸ್‍ಎಸ್‍ಟಿ, ವಿವಿಟಿ ತಂಡಗಳಿಗೆ ಹಾಗೂ ಸಹಾಯಕ ವೆಚ್ಚ ಅಧಿಕಾರಿಗಳಿಗೆ ತಿಳಿಸಿದರು. ಖರ್ಚು ವೆಚ್ಚ ನಿಗಾ ತಂಡವು ಶಾಡೋ ರಜಿಸ್ಟರ್‍ನಲ್ಲಿ ಎಲ್ಲ ಖರ್ಚು ವೆಚ್ಚವನ್ನು ದಾಖಲಿಸುವಂತೆ ಸೂಚಿಸಿದರು.
ಚುನಾವಣಾ ಅವಧಿಯಲ್ಲಿ ಎಲ್ಲ ಬ್ಯಾಂಕಗಳ ಮೂಲಕ ನಡೆಯಬಹುದಾದ ಅನುಮಾನ್ಸಾಪದ ವ್ಯವಹಾರಗಳು ಹಣ ಪಡೆಯುವವರ ಹಾಗೂ ಠೇವಣಿ ಇಡಿವವರ ಬಗ್ಗೆ ಬ್ಯಾಂಕಗಳು ಪ್ರತಿ ನಿತ್ಯ ಮಾಹಿತಿ ಒದಗಿಸುತ್ತಿವೆ. ಒಂದು ಲಕ್ಷ ಮೇಲ್ಪಟ್ಟ ಖಾತೆ ವ್ಯವಹಾರಗಳ ಮೇಲೂ ಸಹ ಕಣ್ಣು ಇಡಲಾಗಿದೆ. ಎಂದು ಲೀಡ್ ಬ್ಯಾಂಕ್ ಅಧಿಕಾರಿ ಪ್ರಭುದೇವ ಅವರು ತಿಳಿಸಿದರು. ಮಹಾನಗರ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಹಾಗೂ ವೆಚ್ಚ ನೋಡಲ್ ಅಧಿಕಾರಿ ವಿಶ್ವನಾಥ ಪಿಬಿ ಅವರು ವೆಚ್ಚ ತಂಡಗಳಿಗೆ ಕೈಗೊಂಡ ತರಬೇತಿಗಳ ಬಗ್ಗೆ ವಿವರಿಸಿದರು.