ವಾಗೇಶ್ ಸ್ವಾಮಿ ಕಾಂಗ್ರೆಸ್ ಸೇರ್ಪಡೆ ಕೇವಲ ಚುನಾವಣೆಗೆ ಸೀಮಿತ ಬೇಡ ಸಂಬಂಧಕ್ಕೂ ಇರಲಿ: ಚಂದ್ರನಾಯ್ಕ್

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೧೪ : ನಕಲಿ ಎಸ್‍ಸಿ ಜಾತಿ ಪ್ರಮಾಣ ಪಡೆದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್ ಸಿ ಮೀಸಲು ಕ್ಷೇತ್ರ ಮಾಯಕೊಂಡದಲ್ಲಿ ಪತ್ನಿಯನ್ನ ಚುನಾವಣೆಗೆ ಸ್ಪರ್ಧೆ ಮಾಡಿಸಿದ್ದ ವಾಗೇಶ್ ಸ್ವಾಮಿ ಕಾಂಗ್ರೆಸ್ ಸೇರ್ಪಡೆಯಾಗಿರುವುದು ನಿಜಕ್ಕೂ ದುರಂತ ಎಂದು ಲಂಬಾಣಿ ಸೇವಾ ಸಂಘ ಜಿಲ್ಲಾಧ್ಯಕ್ಷ ಹಾಲೇಕಲ್ಲು ಚಂದ್ರನಾಯ್ಕ್ ಹಾಗೂ ಭೋವಿ ಸಮಾಜದ ಹಿರಿಯಾ ಮುಖಂಡ ಬಿಟಿ.ಸಿದ್ದಪ್ಪ ತಿಳಿಸಿದ್ದಾರೆ. ಕೇವಲ ಚುನಾವಣೆ ದೃಷ್ಟಿಯಿಂದ ವಾಗೇಶ್ ಸ್ವಾಮಿ ಕಾಂಗ್ರೆಸ್ ಸೇರ್ಪಡೆ ಸೀಮಿತವಾಗಬಾರದು,  ಸಂಬಂಧವನ್ನು ಬೆಳೆಸಿಕೊಳ್ಳಲು ಈ ಬಾಂಧವ್ಯ ಮುಂದುವೆರೆಯಬೇಕು ಎಂದರು. ಈ ಬಗ್ಗೆ ಮಾಯಕೊಂಡ ಕ್ಷೇತ್ರದ ಶಾಸಕರಾದ ಬಸವಂತಪ್ಪ ಸ್ಪಷ್ಟನೆ ನೀಡಬೇಕೆಂದರು. ಕಳೆದ ಚುನಾವಣೆಯಲ್ಲಿ ವಾಗೇಶ್ ಸ್ವಾಮಿ ವಿರುದ್ಧ ಇಡೀ ಶೋಷಿತ ವರ್ಗ ಪರಿಶಿಷ್ಟ ಜಾತಿಯಲ್ಲಿ ಮಾದಿಗ.ಲಂಬಾಣಿ.ಕೊರಚ ಕೊರಮ ಮತ್ತು ಇತರೆ ದಲಿತ ಎಲ್ಲಾ ಸಮುದಾಯದವರು ಹೋರಾಟ ಮಾಡಲಾಗಿತ್ತು. ಇದೀಗ ಅಂತವರನ್ನೇ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ. ವಾಗೇಶ್ ಸ್ವಾಮಿಯವರು ಎಸ್ ಸಿ ಅಥವಾ ಸಾಮಾನ್ಯ ವರ್ಗದವರ ಎಂದು ಶಾಸಕ ಬಸವಂತಪ್ಪ ಅವರೇ ಬಹಿರಂಗವಾಗಿ ಸ್ಪಷ್ಟಪಡಿಸಬೇಕು, ಇಲ್ಲವಾದರೆ ತಾವು ಅವರನ್ನ   ಎಸ್ ಸಿ ಎಂದು ಒಪ್ಪಿಕೊಂಡು ಮಿಸಲು ಕ್ಷೇತ್ರದಲ್ಲಿ ಸಾಮಾನ್ಯ ವರ್ಗಕ್ಕೆ ಸೇರಿದ ವಾಗೇಶ್ ಸ್ವಾಮಿ ಬೇಡ ಜಂಗಮ ಎಂದು ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಚುನಾವಣೆಗೆ ಕಣಕ್ಕಿಳಿದಿದ್ದರು, ನಂತರ ಇವರ ಜಾತಿ ಪ್ರಮಾಣ ಪತ್ರ ನಕಲಿ ಎಂದು ಹೋರಾಟ ಮಾಡಿದ್ದ ಕಾರಣ ಅವರ ಪತ್ನಿಯನ್ನ ಕಣಕ್ಕಿಳಿಸಿದ್ದರು. ಇಡೀ ಎಸ್ ಸಿ ಸಮುದಾಯಕ್ಕೆ ಅನ್ಯಾಯವಾಗುತ್ತಿರುವುದು ಎಲ್ಲರಿಗೂ ಗೊತ್ತಿದೆ, ಇಂಥ ವೇಳೆ ಚುನಾವಣೆ ಹಿನ್ನೆಲೆ ಮತಕ್ಕಾಗಿ ವಾಗೇಶ್ ಸ್ವಾಮಿ ಅವರನ್ನ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿರುವುದು ಎಷ್ಟು ಸರಿ, ಶಾಸಕ ಬಸವಂತಪ್ಪ ಇದನ್ನ ಖಂಡಿಸಬೇಕಿತ್ತು ಎಂದರು. ಶಾಸಕ ಬಸವಂತಪ್ಪ ಅವರನ್ನು ಎಸ್‍ಸಿ ಎಂದು ಒಪ್ಪಿಕೊಂಡಿದ್ದರೆ ಮುಂದಿನ ದಿನಗಳಲ್ಲಿ ಈ ಎಸ್ ಸಿ ಸಮುದಾಯಗಳಿಗೆ ತಿಳಿಸಬೇಕು ಸಂಬಂಧವನ್ನು ಬೆಳೆಸಬೇಕು, ದಲಿತರ ಮನೆಯಲ್ಲಿ ವಾಗೇಶ್ ಸ್ವಾಮಿ ಅವರು ಮುಂದಾಗಬೇಕು ಎಂದು ಹಾಲೇಕಲ್ಲು ಚಂದ್ರನಾಯ್ಕ್ ತಿಳಿಸಿದರು. ವಾಗೇಶ್ ಸ್ವಾಮಿ ಕಾಂಗ್ರೆಸ್ ಸೇರ್ಪಡೆಯಿಂದ ಮತಗಳು ಕಾಂಗ್ರೆಸ್ ಪಕ್ಷಕ್ಕೆ ಹೋಗುತ್ತವೆ ಎಂಬುದು ಸುಳ್ಳು, ಬಿಜೆಪಿ ಮತಗಳು ಹಂಚಿಕೆಯಾಗಿ ವಾಗೇಶ್ ಸ್ವಾಮಿ ಪತ್ನಿಗೆ ಹಾಕಲಾಗಿತ್ತು. ಅವರ ಸ್ವ ಸಾಮಥ್ರ್ಯದ ಮೀಸಲು ಮತಗಳು ಇಲ್ಲ ಎಂದರು. ವಾಗೇಶ್ ಸ್ವಾಮಿಯವರ ಮತವೇ ಮಾಯಕೊಂಡ ಕ್ಷೇತ್ರದಲ್ಲಿ ಇಲ್ಲ, ಇನ್ನೂ ಅವರಿಂದ ಕಾಂಗ್ರೆಸ್ ಪಕ್ಷಕ್ಕೆ ಮತಗಳು ಹಾಕಬಹುದು ಎಂಬುದು ಸುಳ್ಳು ಎಂದರು. ಆದರೆ ವಾಗೇಶ್ ಸ್ವಾಮಿ ಎಸ್ ಸಿ ಜಾತಿಯವರ ಅಥವಾ ಸಾಮಾನ್ಯ ವರ್ಗದವರಾ ಎಂಬುದನ್ನ ಶಾಸಕ ಬಸವಂತಪ್ಪ ಅವರೇ ಹೇಳಬೇಕೆಂದರು.