ಶರಣಬಸವ ವಿವಿಯಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 133ನೇ ಜಯಂತಿ ಆಚರಣೆ
ಕಲಬುರಗಿ:ಏ.14: ಶರಣಬಸವ ವಿಶ್ವವಿದ್ಯಾಲಯದ ಅನುಭವ ಮಂಟಪದಲ್ಲಿ ರವಿವಾರದಂದು ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರ ಜಯಂತೋತ್ಸವ ಕಾರ್ಯಕ್ರಮವನ್ನು ಪತ್ರಿಕೋದ್ಯಮ ವಿಭಾಗ, ಕನ್ನಡ ವಿಭಾಗ ಹಾಗೂ ಇಂಗ್ಲೀಷ್ ವಿಭಾಗಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಡೀನ್ ಟಿ. ವಿ. ಶಿವಾನಂದನ್, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಕಲ್ಯಾಣರಾವ್ ಪಾಟೀಲ ಹಾಗೂ ಇಂಗ್ಲೀಷ್ ವಿಭಾಗದ ಮುಖ್ಯಸ್ಥೆ ಪ್ರೊ. ಕಾವೇರಿ ಕಾಮಶೆಟ್ಟಿ ಜೊತೆಗೂಡಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಮೂರು ವಿಭಾಗಗಳ ಪ್ರಾಧ್ಯಾಪಕರು ಸೇರಿದಂತೆ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.