ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಬಿ.ಎಸ್ ವೈ ಕ್ಯಾಂಪೇನ್

ಸಂಜೆವಾಣಿ ವಾರ್ತೆ
ಚಿತ್ರದುರ್ಗ,ಏ.14:  ದೇಶದ ಪ್ರಧಾನಿಯಾಗಿ ಮೋದಿ ಅವರು ಮೂರನೇ ಬಾರಿ ಆಯ್ಕೆ ಸೂರ್ಯ ಚಂದ್ರನಷ್ಠೆ ಸತ್ಯ ಎಂದು ಮಾಜಿ ಮುಖ್ಯಮಂತ್ರಿ ಬಿ‌.ಎಸ್.ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಪರ ಕ್ಯಾಂಪೇನ್ ಮಾಡಿದ ಅವರು, ಹಣ, ಹೆಂಡ, ಜಾತಿ, ತೋಳ್ಬಲದ ಕಾಲ ಮರೆಯಾಗಿದೆ. ಜನ ಇಂದು ಜಾಗೃತರಾಗಿ ಮತ ಹಾಕುತ್ತಿದ್ದಾರೆ. ಇದನ್ನ ಕಾಂಗ್ರೆಸ್ ನಾಯಕರು ಅರಿತುಕೊಳ್ಳಬೇಕಿದೆ ಎಂದರು.ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರು ಹಾಗೂ ಪ್ರಧಾನಿ ಮೋದಿ ಒಟ್ಟಿಗೆ ಹೋಗುತ್ತಿದ್ದು, ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಲಾಗುತ್ತಿದೆ. ಸಭೆಯ ಜನಸ್ಥೋಮ ನೋಡಿದ್ರೆ ಕಾಂಗ್ರೆಸ್ ನವರಿಗೆ ನಡುಕ ಉಂಟಾಗಿದೆ. ರಾಜ್ಯದಲ್ಲೇಡೆ ಬಿಜೆಪಿ ಪರ ಇದೇ ರೀತಿಯ ವಾತಾವರಣ ಇದೆ ಎಂದು ಹೇಳಿದ ಅವರು, ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆಯಡಿ 10 ಸಾವಿರ ಕೊಡುತ್ತಿದ್ದೆ. ಆದರೆ ರಾಜ್ಯ ಕಾಂಗ್ರೇಸ್ ಸರ್ಕಾರ ನಾಲ್ಕು ಸಾವಿರ ಹಣ ನಿಲ್ಲಿಸಿದ್ದಾರೆ, ಇದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದರು.ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಆಗಿದೆ‌. ನಿಮ್ಮ ಪ್ರಧಾನಿ ಅಭ್ಯರ್ಥಿ ಯಾರು ಹೆಸರು ಹೇಳಿ ನೋಡೋಣಾ ಎಂದು ಪ್ರಶ್ನಿಸಿದ ಅವರು, ಪ್ರಧಾನಿ ನರೇಂದ್ರ ಮೋದಿ ಮುಂದೆ ಯಾರೂ ಕೂಡಾ ಇಲ್ಲ. ನನಗೆ 78 ವರ್ಷ ನನಗೆ 28 ಕ್ಷೇತ್ರ ಗೆಲ್ಲಬೇಕು ಎಂಬ ಕನಸು ಇದ್ದು, ಮೋದಿ ಪ್ರಧಾನಿಯಾಗಿ ನೋಡಲು 28 ಜನರ ಜೊತೆ ನಾನು ಹೋಗಬೇಕು. ಗೋವಿಂದ ಕಾರಜೋಳ ಅನುಭವಿ ರಾಜಕಾರಣಿ, ಅನೇಕ ಇಲಾಖೆ ಸಚಿವರಾಗಿದ್ದಾರೆ. ಅವರ ಪರ ಎಲ್ಲರೂ ಶ್ರಮವಹಿಸಿ ಕೆಲಸ ಮಾಡಬೇಕು. ಜೊತೆಗೆ ಎಲ್ಲರೂ ಆಶಿರ್ವಾದ ಮಾಡಬೇಕು ಎಂದು ಮನವಿ ಮಾಡಿದರು‌.ಮಾಜಿ ಸಚಿವ ಬೈರತಿ ಬಸವರಾಜ್ ಮಾತನಾಡಿ, ಚಿತ್ರದುರ್ಗ ಕ್ಷೇತ್ರಕ್ಕೆ ಸುಸಂಸ್ಕೃತ ಅಭ್ಯರ್ಥಿಯನ್ನ ನೀಡಿದ್ದು, ದೇಶ ರಕ್ಷಣೆ ಮಾಡುವ ಮೋದಿ ಅವರಿಗೆ ಮತ ಹಾಕಬೇಕಿದೆ. ಅಭಿವೃದ್ಧಿ ಪರ ಚಿಂತನೆ ಮಾಡುವ ನಾಯಕ ಕಾರಜೋಳ ಅವರದು. ಕ್ಷೇತ್ರದ ಜನರ ಬವಣೆ ಅರಿತು ಶ್ರಮಿಸುವ ಕೆಲಸ ಮಾಡುತ್ತಾರೆ. ಪ್ರಧಾನಿ ಮೋದಿ ವ್ಯಾಕ್ಸಿನ್ ದೇಶದ ಪ್ರತಿ ಪ್ರಜೆಗೆ ನೀಡಿದ್ದಾರೆ. ಲಸಿಕೆ ಇಲ್ಲದೆ ಹೋಗಿದ್ದರೆ, ನಾವು ಬದುಕುತ್ತಾ ಇದ್ದೆವಾ ? ಇಲ್ಲವೋ ? ಗೊತ್ತಿಲ್ಲ. ಒಂದು ಮತ ನೀಡಿ ಪ್ರಧಾನಿ ಮೋದಿ ಋಣ ತಿರಿಸಬೇಕಿದೆ ಎಂದರು