ಕಾರ್ಮಿಕರಿಗೆ ಹಕ್ಕು ನೀಡಿದವರು ಬಾಬಾಸಾಹೇಬರು: ಬಸವರಾಜ ಹೆಳವರ
ಕಲಬುರಗಿ: ಏ.14:ನಗರದ ಆಳಂದ ರಸ್ತೆಯಲ್ಲಿರುವ ಇ.ಪಿ.ಎಫ್ ಕ್ಷೇತ್ರೀಯ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ 133ನೇ ಜಯಂತ್ಯೋತ್ಸವದ ನಿಮಿತ್ತವಾಗಿ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಮಾಡಿ, ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ನೌಕರರ ಮನರಂಜನಾ ಸಂಘದ ಕಾರ್ಯದರ್ಶಿ ಬಸವರಾಜ ಹೆಳವರ ಯಾಳಗಿ, ಜಗದ ಜ್ಯೋತಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ಭಾರತದ ಮೊದಲ ಕಾರ್ಮಿಕ ಮಂತ್ರಿಯಾಗಿದ್ದರು. ದೇಶದ ಕಾರ್ಮಿಕರ ಬದುಕಿನ ಸಂಕಷ್ಟಗಳನ್ನು ಪರಿಹರಿಸುವ ಹಲವು ಕಾನೂನುಗಳನ್ನು ರೂಪಿಸಿ, ಶ್ರಮಿಕರ ಬದುಕಿಗೆ ಬೆಳಕು ತಂದ ಸೂರ್ಯನೇ ಆಗಿದ್ದರು ಹಾಗೂ ಕಾರ್ಮಿಕ ಕಲ್ಯಾಣದ ನಾಯಕರಾಗಿದ್ದರು ಎಂದರು.
ಕಾರ್ಯಕ್ರಮದಲ್ಲಿ ಎಸ್.ಸಿ/ಎಸ್.ಟಿ ನೌಕರರ ಸಂಘದ ಕಾರ್ಯದರ್ಶಿ ಶಿವರಾಜ, ಉಪಾಧ್ಯಕ್ಷ ವಿಠ್ಠಲ, ಸಂಜಯ ಬಿರ್ಜೆ, ಮದನ ಕುಲಕರ್ಣಿ, ಕೇಶವರಾವ್ ಕುಲಕರ್ಣಿ, ಕಿರಣಕುಮಾರ, ಪ್ರತಿಭಾ, ಕಲ್ಪನಾ ಮಧಬಾವಿ, ಶಿವಶರಣಪ್ಪ ಶಿವಕೇರಿ, ಸಿದ್ಧಾರ್ಥ, ಕಾಂತಪ್ಪ ಹಾಗೂ ಇನ್ನಿತರ ಸಿಬ್ಬಂದಿಗಳು ಭಾಗವಹಿಸಿದ್ದರು.