ಓಣಿಗೊಂದು ಸಂಗೀತ ಶಾಲೆ ಇರಲಿ : ಮಾಸಿಮಾಡೆ
ಬೀದರ್:ಸೆ.20: ಸಂಗೀತ ಎಲ್ಲರಿಗೂ ಹಾಡಲಿಕ್ಕೆ ಬರಲಿಕ್ಕಿಲ್ಲ, ಆದರೆ ಸಂಗೀತಕ್ಕೆ ಸೋಲದವರೇ ಇಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಸಂಗೀತ ತರಬೇತಿಯ ಅವಶ್ಯಕತೆ ಇದೆ ಎಂದು ಭೂಮಿರೆಡ್ಡಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ, ಡಾ, ಪಿ ವಿಠ್ಠಲರೆಡ್ಡಿ ಅವರು ನುಡಿದರು.
ಸಿದ್ದಗಂಗಾ ಶ್ರೀ ಕಲೆ ಮತ್ತು ಸಾoಸ್ಕøತಿಕ ಸಂಘ, ಸಿದ್ದಶ್ರೀ ಸಂಗೀತ ಶಾಲೆಯ ವತಿಯಿಂದ ಆಯೋಜಿಸಿದ ಗುರುವಂದನಾ , ಹಾಗೂ ಸಂಗೀತ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹಿರಿಯ ಸಾಹಿತಿ ಪೆÇ್ರ, ಸಿದ್ರಾಮಪ್ಪ ಮಾಸಿಮಾಡೆ ಮಾತನಾಡುತ್ತಾ ಸಂಗೀತದಿಂದ ಮಕ್ಕಳು ಸದಾ ಕ್ರಿಯಾಶೀಲರಾಗಿರುವರು, ಓಣಿಗೊಂದು ಸಂಗೀತ ಶಾಲೆಯ ಅವಶ್ಯಕತೆ ಇದೆ ಎಂದು ನುಡಿದರು.
ವಿಶೇಷ ಸನ್ಮಾನಿತರಾಗಿ ಮಾತನಾಡಿದ ವಿದ್ವಾನ್ ಗಣೇಶ್ ಅವರು ಶಾಸ್ತ್ರೀಯ ಸಂಗೀತದಿಂದ ಮಕ್ಕಳಲ್ಲಿ ಏಕಾಗ್ರತೆ ಹೆಚ್ಚಾಗುತ್ತದೆ, ಎಂದರು.
ಅತಿಥಿಗಳಾಗಿ ಆಗಮಿಸಿದ ಬಾಬುರಾವ ದಾನಿ ಮಾತನಾಡುತ್ತ ಸಂಗೀತ ಅಭ್ಯಾಸದಿಂದ ಯಾವುದೇ ರೋಗ ವ್ಯಕ್ತಿಯ ಹತ್ತಿರ ಸುಳಿಯುವುದಿಲ್ಲ ಎಂದರು.
ಉಪನ್ಯಾಸಕಿ ಹಾಗೂ ಶಾಲೆಯ ಸಂಗೀತ ಶಿಕ್ಷಕಿ, ರೇಣುಕ ಮಳ್ಳಿ ಸ್ವಾಮಿ ಮಾತನಾಡಿದರು.
ಬೀದರನ ಹಿರಿಯ ಕಲಾವಿದರಾದ ರಾಮುಲು ಗಾದಗಿ, ಸಂಘದ ಅಧ್ಯಕ್ಷರಾದ ಮಾಹಾರುದ್ರಯ್ಯ ಮಳ್ಳಿ ಸ್ವಾಮಿ ಮಾತನಾಡಿದರು,
ಕಲಾವಿದರಾದ ರಾಮುಲು ಗಾದಗಿ ಸಂಗೀತ ಶಿಕ್ಷಕಿ ಅಮೃತ ಗಣೇಶ್ , ವಿನಾಯಕ್, ಚನ್ನಬಸವ ನೌಬಾದೆ , ಪವನ್ , ಗಣೇಶ್ ಗೊರ್ಟ್ , ರೇಣುಕ ಮಳ್ಳಿ ಸ್ವಾಮಿ, ಹಾಗೂ ಸಂಗೀತ ಶಾಲೆಯ ಮಕ್ಕಳ ಗಾಯನ ಗಮನ ಸೆಳೆಯಿತು,,
ಪಾಲಕರಾದ, ಶ್ವೇತ ವಿಜಯಕುಮಾರ ಗಾದಗಿ, ಕಸ್ತೂರಿ ಮಾಲಿ ಪಾಟೀಲ್, ಅಂಬಿಕಾ ಬಿರಾದರ್, ಮಂಗಲ, ರಾಕೇಶ್ ಮಳ್ಳಿ, ರವಿ ಕಾಮನಿ, ಉಪಸ್ಥಿತರಿದ್ದರು ,
ಆಕಾಶ್ ಕೋಟೆ ನಿರೂಪಿಸಿದರು, ವಿದ್ಯಾರ್ಥಿನಿ ಆಶಾ ಕೋಟೆ ಸ್ವಾಗತಿಸಿದರು, ಬಸವರಾಜ್ ಬಿರಾದಾರ್ ವಂದಿಸಿದರು .
ವಿದ್ಯಾರ್ಥಿನಿ ಶ್ರೀನಿಧಿ ಹಾಗೂ ಆರೋಹಿ ತಂಡ ಪ್ರಾರ್ಥನೆಗೆ ನಡೆಸಿಕೊಟ್ಟರು.