ಜೆ ಎನ್ ಕೋಟೆ ಆಯುಷ್ ಕೇಂದ್ರದಿಂದ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮ
ಚಿತ್ರದುರ್ಗ: ಸೆ.೨೦; ಇಂದಿನ ಆಧುನಿಕತೆಯ ವೇಗದ ಬದುಕಿನಲ್ಲಿ ಮನುಷ್ಯನ ಆರೋಗ್ಯ ಕೆಡುತ್ತಿರುವ ಜತೆಯಲ್ಲಿ ಪರಿಸರವೂ ಕೆಡುತ್ತಿದೆ. ನಾವಿಂದು ವಿಷಕಾರಿ ಗಾಳಿ, ನೀರು, ಆಹಾರ ಸೇವಿಸುತ್ತಿರುವುದರಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ. ಇದಕ್ಕೆ ಪರಿಸರ ನಾಶವೇ ಮುಖ್ಯ ಕಾರಣವಾಗಿದೆ ಎಂದು ಜೆ ಎನ್ ಕೋಟೆ ಸರ್ಕಾರಿ ಆಯುಷ್ ಆರೋಗ್ಯ ಮಂದಿರದ ಆಡಳಿತ ವೈದ್ಯಾಧಿಕಾರಿ ಡಾ.ವಿಜಯಲಕ್ಷ್ಮಿ ಪಿ. ಅಭಿಪ್ರಾಯ ಪಟ್ಟಿದ್ದಾರೆ.ಅವರು  ಸ್ವಚ್ಚತಾ ಹೀ ಸೇವಾ_2024 ಪಾಕ್ಷಿಕ ಕಾರ್ಯಕ್ರಮದ ಅಂಗವಾಗಿ ಚಿತ್ರದುರ್ಗ ತಾಲ್ಲೂಕು ಜೆ ಎನ್ ಕೋಟೆ ಗ್ರಾಮ ಪಂಚಾಯತಿ , ಜಿಲ್ಲಾ ಆಯುಷ್ ಇಲಾಖೆ ಚಿತ್ರದುರ್ಗ ಇವರುಗಳ  ಸಹಯೋಗದೊಂದಿಗೆ ಸರ್ಕಾರಿ ಆಯುಷ್ ಆಯುರ್ವೇದ ಆರೋಗ್ಯ ಮತ್ತು ಕ್ಷೇಮ ಮಂದಿರ ಜೆ ಎನ್ ಕೋಟೆ ವತಿಯಿಂದ ಸರ್ಕಾರಿ ಆಯುರ್ವೇದ ಕೇಂದ್ರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸ್ವಚ್ಚತಾ ಕಾರ್ಯ ಹಾಗೂ ವೃಕ್ಷಾರೋಹಣ ಕಾರ್ಯಕ್ರಮಕ್ಕೆ ಸಸಿ ನೀಡುವುದರೊಂದಿಗೆ ಚಾಲನೆ ‌ನೀಡಿ ಮಾತನಾಡುತ್ತಾ ಪರಿಶುದ್ಧ ಗಾಳಿ, ನೀರು, ಆಹಾರವನ್ನು ನಾವು ಸದ್ಬಳಕೆ ಮಾಡಿಕೊಂಡು, ಆರೋಗ್ಯವಂತ ಜೀವನ ನಡೆಸಬೇಕಾದರೆ ತಮ್ಮ ಮನೆಯ ಸುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ನೈರ್ಮಲ್ಯ ಕದಡದಂತೆ ನೋಡಿಕೊಂಡು ಗಿಡಮರವನ್ನು ಬೆಳೆಸಿ ಪರಿಸರ ಶುದ್ಧತೆಯನ್ನು ಹೆಚ್ಚಿಸಬೇಕು. ಪ್ರತಿಯೊಬ್ಬರು ಪರಸರದ ಬಗ್ಗೆ ಪ್ರಜ್ಞಾವಂತಿಕೆ ಬೆಳೆಸಿಕೊಂಡರೆ ಮಾತ್ರ ನಶಿಸಿ ಹೋಗುತ್ತಿರುವ ಹಸಿರು ಪ್ರಕೃತಿಯನ್ನು ಮತ್ತೆ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.