34 ವಿಕಲಚೇತನ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಪಕ ಪ್ರಶಸ್ತಿ
ಬೀದರ್:ಸೆ.20: ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ವತಿಯಿಂದ ಇಲ್ಲಿಯ ಐ.ಎಂ.ಎ ಹಾಲನಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ 34 ವಿಕಲಚೇತನ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಪಕ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬಸಯ್ಯ ಸ್ವಾಮಿ, ಅಶೋಕ ಮಾನಶೆಟ್ಟಿ, ಅಬ್ದುಲ್ ಸಲೀಂ, ಈರಮ್ಮ ನೇಳಗೆ, ಚಂದ್ರಕಾಂತ್, ಮೋಯಿಝೋದ್ದೀನ್, ನಾರಾಯಣ, ಸುನೀತಾ, ಶಾಂತಮ್ಮ, ವೆಂಕಟ, ಸನ್ಮುಖಯ್ಯ, ಸನ್ಮುಖ, ಮಾಣಿಕ, ಶಿವರಾಜ ಕಪಲಾಪುರೆ, ಸಂಜುಕುಮಾರ, ಇಮ್ರಾನ್ ಪಾಷಾ, ಪ್ರೇಮಕುಮಾರ, ಅಹಿಲ್ಯ, ಮಂಗಲಾ, ಸಂತೋಷ್, ಮಲ್ಲಿನಾಥ, ದೇವಿಪ್ರಸಾದ್, ಭೀಮರಾವ್, ಶ್ರೀನಿವಾಸ್, ಸತೀಶಕುಮಾರ, ನಂದಕುಮಾರ, ರಂಗುಬಾಯಿ, ಸಯ್ಯದ್ ರಶೀದ್, ರಹೀಮಾ ಬೇಗಂ, ಸುಧಾಕರ, ವಿಜಯಕುಮಾರ, ಅಮೃತರಾವ್ ಹಾಗೂ ಸಂಜು ಅವರಿಗೆ ಪ್ರಶಸ್ತಿ ಪತ್ರ ಹಾಗೂ ಹಲಸಿನ ಹಣ್ಣಿನ ಸಸಿ ನೀಡಿ ಗೌರವಿಸಲಾಯಿತು.
ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಗುರುತರ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದು ಸಮಾರಂಭವನ್ನು ಉದ್ಘಾಟಿಸಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಲೀಂ ಪಾಷಾ ಹೇಳಿದರು.
ದೇಶದ ಅಭಿವೃದ್ಧಿಗೆ ಶಿಕ್ಷಣವೇ ಬುನಾದಿ. ಹೀಗಾಗಿ, ಕ್ಲಬ್ ನಿಂದ ಉತ್ತಮ ಶಿಕ್ಷಕರಿಗೆ ರಾಷ್ಟ್ರ ನಿರ್ಮಾಪಕ ಪ್ರಶಸ್ತಿ ನೀಡಿ ಪೆÇ್ರೀತ್ಸಾಹಿಸಲಾಗುತ್ತಿದೆ ಎಂದು ಕ್ಲಬ್ ಅಧ್ಯಕ್ಷ ಶಿವಕುಮಾರ ಪಾಖಾಲ ತಿಳಿಸಿದರು.
ಕ್ಲಬ್ ಶಿಕ್ಷಣ, ಆರೋಗ್ಯ, ಪರಿಸರ ಜಾಗೃತಿ ಸೇರಿದಂತೆ ಏಳು ಕ್ಷೇತ್ರಗಳಲ್ಲಿ ಸೇವಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿದೆ ಎಂದು ರೋಟರಿ ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ ಹೇಳಿದರು.
ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ರೋಟರಿ ಇಂಡಿಯಾ ಲಿಟರೇಸಿ ಮಿಷನ್ ಅಧ್ಯಕ್ಷ ಡಾ. ರಘು ಕೃಷ್ಣಮೂರ್ತಿ, ಕರ್ನಾಟಕ ಘಟಕದ ಅಧ್ಯಕ್ಷ ಡಾ. ನಿತೇಶಕುಮಾರ ಬಿರಾದಾರ, ಉಪಾಧ್ಯಕ್ಷ ಸಿದ್ರಾಮ ಯನಗುಂದೆ, ರೋಟೇರಿಯನಗಳಾದ ಡಾ. ನಾಗೇಶ ಪಾಟೀಲ, ಜ್ಞಾನಗಂಗಾ ಪಾಟೀಲ, ಡಾ. ಜಗದೀಶ ಪಾಟೀಲ, ಡಾ. ಲೋಕೇಶ ಹಿರೇಮಠ, ಮಹೇಶ ಧೂಳೆ, ಎನ್.ಎಸ್. ಬಿರಾದಾರ, ಡಾ. ಆರತಿ ರಘು, ಡಾ.ಶ್ವೇತಾ ಮೇಗೂರೆ, ಚೇತನ್ ಮೇಗೂರೆ, ವೀರೇಶ್ ಖೇಳಗಿ, ಫರ್ದೀನ್ ಇದ್ದರು. ಕ್ಲಬ್ ಕಾರ್ಯದರ್ಶಿ ಪ್ರಭು ತಟಪಟ್ಟಿ ವಂದಿಸಿದರು.