ವಾಲ್ಮೀಕಿ ನಿಗಮದ ಪ್ರಕರಣನಾಗೇಂದ್ರಗೆ ನಾಳೆ ಮಧ್ಯಂತರ ಜಾಮೀನು ?
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.20: ರಾಜ್ಯದ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆಯ ಪ್ರಕರಣದಲ್ಲಿ ಈಡಿಯಿಂದ ಬಂಧಿತರಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಗ್ರಾಮೀಣ ಶಾಸಕ, ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ನಾಳೆ ನ್ಯಾಯಾಲಯದಿಂದ ಮಧ್ಯಂತರ ಜಾಮೀನು ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನಾಗೇಂದ್ರ ಪರ ವಕೀಲರು, ನಾಗೇಂದ್ರ ಅವರಿಗೆ ಮಧ್ಯಂತರ ಜಾಮೀನು ಕೋರಿ ಮನವಿ‌ ಮಾಡಿದ್ದಾರೆ. ಮನವಿಯಲ್ಲಿ ಹತ್ತು ದಿನಗಳ ಕಾಲ ಮನೆಯಲ್ಲಿಯೇ ಇರಲಿದ್ದಾರೆಂಬ ಷರತ್ತಿಗೆ ಒಳಪಟ್ಟು ಜಾಮೀನು ನೀಡುವಂತೆ ಕೋರಿದ್ದಾರಂತೆ.  ನ್ಯಾಯಾಲಯ ಈ ವಿಷಯದಲ್ಲಿ ಮಧ್ಯಂತರ ಜಾಮೀನು ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ನ್ಯಾಯಾಧೀಶರು ನಾಳೆ ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಮಧ್ಯಂತರ ಜಾಮೀನು ನೀಡಿದರೂ, ಶಾಶ್ವತ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದು ಅದರ ವಿಚಾರಣೆಯೂ ನಡೆಯುತ್ತಿದೆ.