ಚಿಂಚೋಳಿಯಲ್ಲಿ ಅದ್ದೂರಿಯಾಗಿ ಪಲ್ಲಕ್ಕಿ ಉತ್ಸವ
ಕಲಬುರಗಿ:ಏ.14:ಅಫಜಲಪೂರ ತಾಲೂಕಿನ ಚಿಂಚೋಳಿ ಗ್ರಾಮದಲ್ಲಿ ನಡೆದ ಶ್ರೀ ಗದ್ದುಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಷ.ಬ್ರ. ಗದ್ದುಗೇಶ್ವರ ಮಲ್ಲಿಕರ್ಜುನ ಶಿವಾಚರ್ಯರ ಅಡ್ಡಪಲ್ಲಕ್ಕಿ ಮಹೋತ್ಸವದ ಅಂಗವಾಗಿ ಶನಿವಾರ ಬೆಳಿಗ್ಗೆ 10ಗಂಟೆಗೆ ಪಲ್ಲಕ್ಕಿ ಉತ್ಸವ ಪ್ರಾರಂಭವಾಗಿ ಊರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಜೆ 4.30ರವರೆಗೆ ನಡೆದ ಜಾತ್ರೆ ಅದ್ದೂರಿಯಾಗಿ ಜರುಗಿತು. ಶನಿವಾರ ಜರುಗಿದ ಪಲ್ಲಕ್ಕಿ ಉತ್ಸವದಲ್ಲಿ ಡೊಳ್ಳು ಕುಣಿತ, ಚಿಟ್ಟ ಹಲಗೆ ಕುಣಿತ, ತಂಬೂರಿ ವಾದ್ಯಗಳು ಸೇರಿದಂತೆ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.
ಸಾವಿರಾರು ಭಕ್ತರನ್ನು ಆರ್ಷಿಸಿದ ಪಲ್ಲಕ್ಕಿ ಉತ್ಸವ ಜಾತ್ರೆಯು ವಿಶೇಷದಲ್ಲಿ ಒಂದಾಗಿದೆ. ಪಲ್ಲಕ್ಕಿಯಲ್ಲಿ ಕುಳಿತು ಭಕ್ತರನ್ನು ಆಶಿವಾ9ದಿಸಿದ ಮಲ್ಲಿಕರ್ಜುನ ಶಿವಾಚರ್ಯರು .ಪಲ್ಲಕ್ಕಿಗೆ ಮಾಡಿದ ಹೂವಿನ ಅಲಂಕಾರ ಬಹುಮುಖ್ಯವಾಗಿತ್ತು. ಪುರವಂತರ ಒಡಪುಗಳು ಅವರ ಕುಣಿತ ಜನರನ್ನು ಆರ್ಷಿಸಿತು. ಮಠದ ರ್ಭಗುಡಿಯಲ್ಲಿನ ಮೂಲ
ಕತ್ರೃಗದ್ದುಗೆಗೆ ಹೂವಿನ ಅಲಂಕಾರ ಭಕ್ತರಲ್ಲಿ ಆನಂದ ತುಂಬಿತ್ತು.
ಉತ್ಸವದಲ್ಲಿ ಸಮಸ್ತ ಗ್ರಾಮಸ್ಥರು, ಬಡದಾಳದ ನಡೆದಾಡುವ ದೇವರು ಎಂದೇ ಪ್ರಸಿದ್ಧಿ ಪಡೆದ ಅಭಿನವ ಚನ್ನಮಲ್ಲ ಶಿವಾಚರ್ಯರು, ಸುತ್ತ ಮುತ್ತಲಿನ ಹಳ್ಳಿಗಳ ಭಕ್ತಿವ್ರೃಂದ ಪಾಲ್ಗೊಂಡಿದ್ದರು.