ಕಾಚಾಪೂರದಲ್ಲಿ ಹಾವು ಕಡಿದು ಓರ್ವನ ಸಾವು
ಯಡ್ರಾಮಿ:ಏ.14:ತಾಲೂಕಿನ ಕಾಚಾಪೂರ ಗ್ರಾಮದ ಭೀಮರಾಯ ತಂದೆ ಕಾಸಿರಾಯ ಸುರಪುರ ಎಂಬ 35 ವಯಸ್ಸಿನ ವ್ಯಕ್ತಿಗೆ ಹಾವು ಕಡಿದು ಸಾವು ಸಂಭವಿಸಿದ ಘಟನೆ ನಡೆದಿದೆ.
ಮುಂಜಾನೆ ಸಮಯದಲ್ಲಿ ತಮ್ಮ ಜಮೀನಿಗೆ ಎತ್ತುಗಳಿಗೆ ಕಣಕಿ (ಮೇವು) ತರಲು ಹೋದಾಗ ಸಾವು ಕಚ್ಚಿದೆ.ತಕ್ಷಣ ಯಡ್ರಾಮಿ ಆಸ್ಪತ್ರೆಗೆ ತರುವ ವೇಳೆಯಲ್ಲಿ ಸಾವಿಗಿಡಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.
ಇವರಿಗೆ ಒಟ್ಟು ಮೂರು ಜನರು ಮಕ್ಕಳಿದ್ದು ಎರಡೂ ಹೆಣ್ಣು ಮಕ್ಕಳು ಮತ್ತು ಒಂದು ಗಂಡು ಮಗು ಇದೆ ಎಂದು ತಿಳಿದು ಬಂದಿದ್ದೆ.
ಈ ಕುರಿತು ಯಡ್ರಾಮಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ ಎಂದು ಪೆÇಲೀಸ್ ಠಾಣೆಯ ಪಿ.ಎಸ್.ಐ ವಿಶ್ವನಾಥ ಮುದರೆಡ್ಡಿ ಅವರು ತಿಳಿಸಿದ್ದಾರೆ.