ಏ,೧೪,೧೫ ಎನ್.ಡಿ.ಎ ಅಭ್ಯರ್ಥಿ ಮಲ್ಲೇಶ್ ಬಾಬು ಪ್ರಚಾರ
ಶಿಡ್ಲಘಟ್ಟ.ಏ೧೪:ಕೋಲಾರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಮಲ್ಲೇಶ್ ಬಾಬು ಪರವಾಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶಿಡ್ಲಘಟ್ಟ ಕ್ಷೇತ್ರದ ಜೆಡಿಎಸ್ ಮುಖಂಡರು ಬಿರುಸಿನ ಪ್ರಚಾರ ಕೈಗೊಂಡಿದ್ದೇವೆ, ಅಭ್ಯರ್ಥಿಯ ಗೆಲುವಿಗಾಗಿ ಪಕ್ಷಗಳ ಮುಖಂಡರು, ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಶಾಸಕ ಬಿ.ಎನ್.ರವಿಕುಮಾರ್ ತಿಳಿಸಿದರು.
ತಾಲ್ಲೂಕಿನ ಮೇಲೂರು ಗ್ರಾಮದ ಸ್ವ ಗೃಹದಲ್ಲಿ ಸಂಪಾದಕರ ಹಾಗೂ ವರದಿಗಾರರ ತಂಡಕ್ಕೆ ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು.
ಲೋಕಸಭಾ ಕ್ಷೇತ್ರದ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಜೆಡಿಎಸ್ ಶಾಸಕ ಬಿಎನ್ ರವಿಕುಮಾರ್ ಹಾಗೂ ಬಿಜೆಪಿ ಮುಖಂಡರು ಸೇರಿದಂತೆ ಎನ್ ಡಿಎ ಅಭ್ಯರ್ಥಿ ಪರ ಮತಯಾಚನೆಗಾಗಿ ಹಾಗೂ ಪ್ರಚಾರದ ದಿನಾಂಕನ್ನು ತಿಳಿಸಿ ಅಭ್ಯರ್ಥಿಯ ಗೆಲುವಿಗಾಗಿ ಕ್ಷೇತ್ರದ ಜನತೆ ಬೆಂಬಲಿಸಬೇಕು ಎಂದು ಕೋರಿದರು.
ಮೂರು ವರ್ಷಗಳಲ್ಲಿ ಬಡವರ ಪರ ನೂರಾರು ಯೋಜನೆಗಳನ್ನು ನೀಡಿದ ಪ್ರಧಾನಿಗಳ ಸೇವೆಯನ್ನು ಕೊಂಡಾಡಿದರು. ಪ್ರಧಾನಿಗಳಾದ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ, ಯಡಿಯೂರಪ್ಪ ನೇತೃತ್ವದಲ್ಲಿ ೨೦೨೪ ರ ಲೋಕಸಭಾ ಚುನಾವಣೆಗೆ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆ. ಇನ್ನೂ ರಾಜ್ಯದಲ್ಲಿ ಜೆಡಿಎಸ್ ಪಕ್ಷವನ್ನು ನಿರ್ಣಾಮ ಮಾಡಲು ಕಾಂಗ್ರೆಸ್ ಮುಂದಾಗುತ್ತಿದೆ. ಆದರಿಂದ ನಮ್ಮ ರಾಜ್ಯದಲ್ಲಿ ಕೋಲಾರ,ಮಂಡ್ಯ,ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಮಾಡಲಾಗಿದ್ದು
ಜೆಡಿಎಸ್ ವರಿಷ್ಠರಾದ ದೇವೇಗೌಡರು ಜೆಡಿಎಸ್ ಪಕ್ಷದ ಮುಖಂಡರಿಗೆ ಹಾಗೂ ಕಾರ್ಯಕರ್ತರಿಗೆ ಖಡಕ್ ಸೂಚನೆಯನ್ನು ಕೊಟ್ಟಿದ್ದು ಮೈತ್ರಿ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸುವಂತೆ ಸೂಚನೆ ಕೊಟ್ಟಿದ್ದಾರೆ.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಸೇರಿ ಏಪ್ರಿಲ್ ೧೪ ರಂದು ಚಿಲಕನೇರ್ಪು ದಿಬ್ಬೂರಹಳ್ಳಿ ೧೫ ರಂದು ಶಿಡ್ಲಘಟ್ಟ ನಗರ ಹಾಗೂ ಜಂಗಮಕೋಟೆ ಹೋಬಳಿ ಸೇರಿದಂತೆ ಹಲವೆಡೆ ಮುಖಂಡರು, ಕಾರ್ಯಕರ್ತರರೋಂದಿಗೆ ಸಭೆಯನ್ನು ನಡೆಸಲಾಗುತ್ತಿದ್ದು ಅಭ್ಯರ್ಥಿ ಮಲ್ಲೇಶ್ ಬಾಬು ಪರವಾಗಿ ಮತ ಯಾಚನೆ ಮಾಡಲಾಗುವುದು ಎಂದರು.
ಇನ್ನೂ ದೇಶದಲ್ಲಿ ಮೋದಿ ಅವರ ಸೇವೆ ಕೆಲಸ ಪ್ರತಿಯೊಬ್ಬರು ಕೊಂಡಾಡುತ್ತಿದ್ದಾರೆ. ದೇಶದ ಪ್ರತಿಯೊಬ್ಬ ಪ್ರಜೆಯೂ ಅವರ ಸೇವೆಯನ್ನು ಮೆಚ್ಚಿಕೊಳ್ಳುತ್ತಿದ್ದಾರೆ. ಅದೇ ರೀತಿ ನಾವು ಸಹಾ ಮನೆಮನೆ ಹೋಗಿ ಮೋದಿ ಅವರ ಸೇವೆಯ ಬಗ್ಗೆ ಹೇಳಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕೆಂದು ಶಾಸಕ ರವಿಕುಮಾರ್ ತಿಳಿಸಿದ್ದಾರೆ.