ಚಾಮುಂಡೇಶ್ವರಿಯಲ್ಲಿ ಯಧುವೀರ್ ಮತ ಸಂಚಾರ
ಸಂಜೆವಾಣಿ ನ್ಯೂಸ್
ಮೈಸೂರು:ಏ.14:- ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿ ಬಹುದೊಡ್ಡ ವಿಧಾನ ಸಭಾಕ್ಷೇತ್ರವಾದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಶಾಸಕ ಜಿ.ಟಿ.ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತಯಾಚನೆ ನಡೆಸಿದರು.
ಬೆಳಿಗ್ಗೆ 7ರಿಂದ ಪ್ರಾರಂಭಗೊಂಡ ಮತಯಾಚನೆ ಸಾತಗಳ್ಳಿ, ಗಳಿಗರಹುಂಡಿ ಹಂಚ್ಯಾ, ರಮ್ಮನಹಳ್ಳಿ, ಕಾಮನಕೆರೆಹುಂಡಿ, ಹಳೆ ಕೆಸರೆ, ಬೆಲವತ್ತ, ಕೆ.ಆರ್.ಮಿಲ್, ಸಿದ್ದಲಿಂಗಪುರ, ಕಳಸ್ತವಾಡಿ, ಲಕ್ಷಿ?ಮೀಪುರ, ನಾಗನಹಳ್ಳಿ, ಶ್ಯಾದನಹಳ್ಳಿ, ಮೈದನಹಳ್ಳಿ, ಮೇಗಳಾಪುರ, ಮಲ್ಲೇಗೌಡನಕೊಪ್ಪಲು, ಉಂಡುವಾಡಿ, ಚಿಕ್ಕನಹಳ್ಳಿ, ಆನಂದೂರು, ಕಲ್ಲೂರು ನಾಗನಹಳ್ಳಿ, ಕಲ್ಲೂರು, ಎಡಹಳ್ಳಿ, ರಾಮನಹಳ್ಳಿ, ಸಾಗರಕಟ್ಟೆ, ಹೊಸಕೋಟೆ, ಯಾಚೇಗೌಡನಹಳ್ಳಿ, ದಡದ ಕಲ್ಲಹಳ್ಳಿ, ಹನುಮಂತನಗರ, ಛತ್ರದಕೊಪ್ಪಲು, ಗುಂಗ್ರಾಲ್‍ಛತ್ರ, ಯಲಚಹಳ್ಳಿ, ಈರಪ್ಪಕೊಪ್ಪಲು, ಇಲವಾಲ ಗ್ರಾಮಗಳಲ್ಲಿ ಮತಯಾಚನೆ ನಡೆಸಿದರು. ಗ್ರಾಮದ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಾತ್ರವಲ್ಲದೆ, ಗ್ರಾಮದಲ್ಲಿನ ಅಂಬೇಡ್ಕರ್, ಬಸವ, ಕೆಂಪೇಗೌಡ ಸೇರಿ ಹಲವು ಪ್ರತಿಮೆಗಳಿಗೆ ಮಾಲಾರ್ಪಣೆ ಸಹ ಮಾಡಿದರು.
ಮೈಸೂರು-ಕೊಡಗು ಲೋಕಸಭಾ ಅಭ್ಯರ್ಥಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಕೆಲವೊಬ್ಬರೂ ದಂತಗೋಪರದಲ್ಲಿ ಇರುವ ವ್ಯಕ್ತಿ, ಅರಮನೆ ವಾತಾವರಣದಲ್ಲಿ ಬೆಳೆದಿರುವ ವ್ಯಕ್ತಿ ಹೇಗೆ ಜನರ ಬಳಿಗೆ ಬಂದು ಸಂಕಷ್ಟಕ್ಕೆ ಪರಿಹರಿಸುತ್ತಾರೆ. ಹಳ್ಳಿಗೆ ಬರ್ತಾರಾ, ಗ್ರಾಮಕ್ಕೆ ಬರುತ್ತಾರಾ ಹೇಗೆ ಎಂಬಂತಹ ಎನೇನೋ ಪ್ರಶ್ನೆಗಳು? ಎಲ್ಲಾ ಪ್ರಶ್ನೆಗಳಿಗೂ ಉತ್ತರ ಕೊಡುವ ಅಗತ್ಯವಿಲ್ಲ. ಮುಂದಿನ ದಿನಗಳಲ್ಲಿ ನಾನು ಮಾಡುವ ಕೆಲಸ ಎಲ್ಲದಕ್ಕೂ ಉತ್ತರ ಕೊಡಲಿದೆ ಎಂದು ಭಾವಿಸಿದ್ದೇನೆ. ಇದಕ್ಕೊಂದು ಅವಕಾಶ ಕೊಡಿ ಎಂದು ಕೋರಿದರು.
ಇಂದು ಜೆಡಿಎಸ್ ಹಾಗೂ ಬಿಜೆಪಿ ಅಭಿವೃದ್ಧಿ ಭಾರತಕ್ಕೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮತ್ತೆ ಮಾಡಬೇಕೆಂದು ಮೈತ್ರಿ ಆಗಿದ್ದೇವೆ. ಅದಕ್ಕೆ ಹೆಚ್ಚಿನ ರೀತಿಯಲ್ಲಿ ಜನ ಬೆಂಬಲ ಸಿಗಬೇಕು. ಅದಕ್ಕೆ ನಿಮ್ಮ ಮತಗಳ ಮೂಲಕ ಎದುರಾಳಿಗಳಿಗೆ ಉತ್ತರ ಕೊಡುವ ಕೆಲಸವನ್ನು ಬಿಜೆಪಿಯ ಕಮಲದ ಗುರುತಿಗೆ ಮತ ಹಾಕುವ ಮೂಲಕ ಮಾಡಿ ಎಂದು ಹೇಳಿದರು.
ಮಾಜಿ ಸಚಿವ ಎಸ್.ಎ.ರಾಮದಾಸ್, ಬಿಜೆಪಿ ಮುಖಂಡ ಕವಿಶ್‍ಗೌಡ, ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್ ಕುಮಾರ್‍ಗೌಡ, ಅರುಣ್‍ಕುಮಾರ್‍ಗೌಡ ಸೇರಿ ಇನ್ನಿತರರು ಉಪಸ್ಥಿತರಿದ್ದರು.