ಕಾಂಗ್ರೆಸ್ ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ
ಸೇಡಂ, ಎ,14: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿಂದು ಸರ್ವರಿಗೂ ಸಮಪಾಲು ಸಮಬಾಳು ಧ್ಯೇಯದೊಂದಿಗೆ,ಜಗತ್ತಿನ ಅತಿದೊಡ್ಡ ಲಿಖಿತ ಸಂವಿಧಾನವನ್ನು ಭಾರತ ದೇಶಕ್ಕೆ ನೀಡಿದ
ಅಧಮ್ಯ ಮಹಾನ್ ಚೇತನ ವಿಶ್ವಜ್ಞಾನಿ ಭಾರತರತ್ನ ಸಂವಿಧಾನ ಶಿಲ್ಪಿ, ಡಾ.ಬಿ.ಆರ್ ಅಂಬೇಡ್ಕರ್ ಅವರ 133ನೇ ಜಯಂತ್ಯೋತ್ಸವದ ಅಂಗವಾಗಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸರಳವಾಗಿ ಆಚರಿಸಿದರು.ಈ ವೇಳೆಯಲ್ಲಿ ಬಸಯ್ಯಸ್ವಾಮಿ, ಬ್ಲಾಕ್ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷರುಗಳಾದ ಜೈ ಭೀಮ್ ಊಡಗಿ, ಜಗನ್ನಾಥ್ ಚಿಂತಪಳ್ಳಿ, ದೇವು ದೊರೆ, ಸತೀಶ್, ಈರಣ್ಣ ರೆಮಣಿ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಯುವಕರು ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.