ಚಾ.ನಗರ ತಾಲ್ಲೂಕಿನಾದ್ಯಂತ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಮತಯಾಚನೆ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.14- ನರೇಂದ್ರ ಮೋದಿ ಅವರು ನಾಯಕತ್ವದಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಅವರನ್ನು ಪ್ರಧಾನಿ ಮಾಡಲು ಕ್ಷೇತ್ರದ ಮತದಾರರು ಬಿಜೆಪಿಯನ್ನು ಬೆಂಬಲಿಸುವ ಮೂಲಕ ನಿಮ್ಮೆಲ್ಲರ ಪ್ರತಿನಿಧಿಯಾಗಿ ದೆಹಲಿಗೆ ಹೋಗಲು ನನಗೊಂದು ಅವಕಾಶ ಮಾಡಿಕೊಡಬೇಕೆಂದು ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಮನವಿ ಮಾಡಿದರು.
ತಾಲೂಕಿನ ಮಾದಾಪುರ, ಅಲೂರು, ಚಂದಕವಾಡಿ ಹಾಗೂ ಹರದಹಳ್ಳಿ ಶಕ್ತಿ ಕೇಂದ್ರಗಳಲ್ಲಿ ನಡೆದ ಬಿಜೆಪಿ ಚುನಾವಣೆ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ಕಳೆದ ಚುನಾವಣೆಯಲ್ಲಿ ಆ ಕುಟುಂಬಕ್ಕೆ ಅಧಿಕಾರ ನೀಡಿ ಮಹದೇವಪ್ಪ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದಾರೆ. ಮತ್ತೊಮ್ಮೆ ಅವರ ಕುಟುಂಬದವರಿಗೆ ಮತ ಹಾಕುವುದು ಯಾವ ನ್ಯಾಯ? ಅಪ್ಪ ಸಚಿವರಾಗಿ ಸಾಕಷ್ಟು ಸಂಪಾದನೆ ಮಾಡಿದ್ದಾರೆ. ಇನ್ನು ಮಗನಿಗೂ ಅಧಿಕಾರ ಬೇಕು ಎನ್ನುತ್ತಿದ್ದಾರೆ. ಇವೆಲ್ಲವನ್ನು ಪ್ರಬುದ್ದ ಮತದಾರರು ಅರ್ಥೈಸಿಕೊಂಡಿದ್ದು, ಬಿಜೆಪಿಯನ್ನು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂದರು.
ಸಾಮಾನ್ಯ ಕಾರ್ಯಕರ್ತನಾಗಿ ನಿಮ್ಮ ಸೇವೆ ಮಾಡಲು ಸಿದ್ದನಿದ್ದೇನೆ. ಸದಾ ನಿಮ್ಮೋಂದಿಗೆ ಬೆರತು ಕ್ಷೇತ್ರದ ಅಭಿವೃದ್ದಿಗೆ ದುಡಿಯಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಕಾರ್ಯಕ್ರಮಗಳನ್ನು ಪ್ರತಿ ಹಳ್ಳಿ ಹಳ್ಳಿಗೂ ತಲುಪಿಸಲು ಈ ಬಾರಿ ಬಿಜೆಪಿಗೆ ಅವಕಾಶ ನೀಡಿ. ನನ್ನನ್ನು ಅರ್ಶೀವದಿಸಬೇಕು. ಸಂಸರಾಗಿದ್ದ ನಮ್ಮೆಲ್ಲರ ನಾಯಕರಾದ ವಿ. ಶ್ರೀನಿವಾಸಪ್ರಸಾದ್ ಅವರು ಇನ್ನು ಒಂದುವರೆ ತಿಂಗಳು ನಮ್ಮ ಪಕ್ಷದ ಸಂಸದರಾಗಿರುತ್ತಾರೆ. ಅವರ ಬೆಂಬಲ ಸದಾ ಬಿಜೆಪಿ ಹಾಗೂ ನರೇಂದ್ರ ಮೋದಿ ಅವರಿಗಿದೆ.
ಕಾಂಗ್ರೆಸ್ ಪಕ್ಷದವರಿಗೆ ಸೋಲಿನ ಹತಾಶೆಯಿಂದ ನಿವೃತ್ತಿ ಘೊಷಣೆ ಮಾಡಿರುವ ವಿ.ಶ್ರೀನಿವಾಸಪ್ರಸಾದ್ ಅವರ ಮನೆಗೆ ಹೋಗುತ್ತಿದ್ದಾರೆ. ಈಗಾಗಲೇ ಒಂದಲ್ಲ ನಾಲ್ಕು ಬಾರಿ ನನ್ನ ಬೆಂಬಲ ಪ್ರಧಾನಿ ಮೋದಿಗೆ. ನನ್ನ ಮತ ಬಿಜೆಪಿಗೆ ಎಂದು ಹೇಳಿದ್ದಾರೆ. ಅದರೂ ಸಹ ಮಹದೇವಪ್ಪ ತನ್ನ ಮಗನನ್ನು ಗೆಲ್ಲಿಸಿಕೊಳ್ಳಲು ಹಿಂದೆ ನೀಡಿದ್ದ ಎಲ್ಲಾ ನೋವು, ತೊಂದರೆಗಳನ್ನು ಮರೆತು ಶ್ರೀನಿವಾಸಪ್ರಸಾದ್ ಅವರು ಮುಂದೆ ನಿಂತಿದ್ದಾರೆ. ಸಾಲದು ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಸಾದ್ ಅವರ ಮನೆಗೆ ಕರೆದ್ಯೊಯಿದಿರುವುದು ದುರಂತವೇ ಸರಿ. ಜನರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಹೀಗಾಗಿ ಮೈಸೂರು ಹಾಗೂ ಚಾಮರಾಜನಗರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.
ಮುಖಂಡರಾದ ಎಂ. ರಾಮಚಂದ್ರು, ನಾಗಶ್ರೀ ಪ್ರತಾಪ್, ನಿಜಗುಣರಾಜು, ಎನ್‍ರಿಎಚ್ ಮಹದೇವಸ್ವಾಮಿ ಸೇರಿದಂತೆ ಅನೇಕ ಮುಖಂಡರು ಮಾತನಾಡಿ, ಬಿಜೆಪಿ ಗೆಲ್ಲಿಸುವ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕಾಗಿದೆ. ಕ್ಷೇತ್ರದ ಅಭಿವೃದ್ದಿ ಶೂನ್ಯವಾಗಿದ್ದು, ಮುಂದಿನ ದಿನಗಳಲ್ಲಿ ನಮ್ಮಲ್ಲೆ ಆಶೋತ್ತರಗಳನ್ನು ಈಡೇರಿಸಲು ಎಂಪಿ ಅಗತ್ಯವಾಗಿದೆ.ಈ ಸ್ಥಾನವನ್ನು ಬಾಲರಾಜು ಸಮರ್ಥವಾಗಿ ತುಂಬಲಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರಧಾನಿ ಮೋದಿ ಅವರು ಕೈ ಬಲಪಡಿಸಲು ಹಾಗೂ ಕ್ಷೇತ್ರದ ಅಭಿವೃದ್ದಿಗಾಗಿ ಬಾಲರಾಜು ಅವರಿಗೆ ಮತ ನೀಡಿ, ಪ್ರತಿ ಮನೆ ಮನೆಗೆ ಭೇಟಿ ನೀಡಿ, ಬಿಜೆಪಿ ಸಾಧನೆ ತಿಳಿಸಿ. ನಿಮ್ಮ ಬೂತ್‍ನಲ್ಲಿ ಗೆದ್ದರೆ ಇಂಡಿಯಾ ಗೆದ್ದಂತೆ ಎಂದರು.
ಸಭೆಯಲ್ಲಿ ಚಾಮುಲ್ ನಿರ್ದೇಶಕ ಎಚ್.ಎಸ್. ಬಸವರಾಜು, ಸುಂದ್ರಪ್ಪ, ಕೋಡಿಮೋಳೆ ರಾಜಶೇಖರ್, ಚಂದಕವಾಡಿ ಶಕ್ತಿ ಕೇಂದ್ರ ಅಧ್ಯಕ್ಷ ಅಯ್ಯನಪುರ ವಿಜಯೇಂದ್ರ, ಆಲೂರು ಶಕ್ತಿ ಕೇಂದ್ರದ ಅಧ್ಯಕ್ಷ ಶಿವಾನಂದ, ಶಿವಾಂಲಕಾರಪ್ಪ, ಚಿನ್ನಮುತ್ತು, ದಡದಹಳ್ಳಿ ಗೋವಿಂದರಾಜು, ಅರಕಲವಾಡಿ ನಾಗೇಂದ್ರ, ಕಾಗಲವಾಡಿ ಮಹದೇವಸ್ವಾಮಿ, ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜು, ಉಪಾಧ್ಯಕ್ಷ ವಿರಾಟ್ ಶಿವು, ಆನಂದ ಭಗೀರಥ, ಗ್ರಾ.ಪಂ. ಅಧ್ಯಕ್ಷೆ ಶೋಭಾ, ಗ್ರಾಮಾಂತರ ಮಂಡಲದ ಅಧ್ಯಕ್ಷೆ ರಾಜೇಶ್ವರಿ ರವಿ, ಕಿಲಗೆರೆ ಬಸವರಾಜು, ಕೆ. ವೀರಭದ್ರಸ್ವಾಮಿ, ಪ್ರಣಯ್, ಮೂಡ್ನಾಕೂಡು ಪ್ರಕಾಶ್, ಕಾಗಲವಾಡಿ ಕಾರ್ತಿಕ್, ಶಕ್ತಿ ಕೇಂದ್ರದ ಅಧ್ಯಕ್ಷರಾದ ಶಿವನಾಂಕಪ್ಪ, ರಾಜುನಾಯಕ, ಕಪನಿನಾಯಕ,ರಾಜೇಂದ್ರ, ಮಹದೇವಶೆಟ್ಟಿ, ಚಿನ್ನಸ್ವಾಮಿ, ಕುಮಾರ್, ನಂಜುಂಡಸ್ವಾಮಿ, ನಾಗಮಲ್ಲೇಶ್, ಪುಟ್ಟಸ್ವಾಮಿ, ನಾಗಸುಂದರ್, ಮಹದೇವಪ್ರಸಾದ್, ನಂಜುಂಡಸ್ವಾಮಿ, ಶೇಖರ್, ಕಾಳಶೆಟ್ಟಿ, ಗಣೇಶ್, ಶಾಂತರಾಜು ಮೊದಲಾಧವರು ಇದ್ದರು.