ರಾಷ್ಟ್ರ ಹಾಗೂ ಧರ್ಮ ರಕ್ಷಣೆಯಲ್ಲಿ ಬದ್ದವಾಗಿರುವ ಬಿಜೆಪಿಯನ್ನು ಬೆಂಬಲಿಸಿ: ವಿಜಯಶಂಕರ್
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ. 14- ರಾಷ್ಟ್ರ ರಕ್ಷಣೆ, ಭದ್ರತೆ ಮತ್ತು ಧರ್ಮ ರಕ್ಷಣೆಯಲ್ಲಿ ವಿಶ್ವ ಶೇಷ್ಟ ಭಾರತವನ್ನಾಗಿಸಲು ಶ್ರಮಿಸುತ್ತಿರುವ ಬಿಜೆಪಿ ನೇತೃತ್ವದ ಪ್ರಧಾನಿ ನರೇಂದ್ರ ಪಕ್ಷಕ್ಕೆ ತಾವೆಲ್ಲರು ಬೆಂಬಲ ನೀಡಬೇಕು ಎಂದು ಮಾಜಿ ಸಚಿವ ವಿಜಯಶಂಕರ್ ಮನವಿ ಮಾಡಿದರು.
ನಗರದ ಜಿ.ಪಂ. ಮಾಜಿ ಸದಸ್ಯ ಬಾಲರಾಜು ಅವರ ನಿವಾಸದಲ್ಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್. ಬಾಲರಾಜು ಅವರನ್ನು ಬೆಂಬಲಿಸುವ ಕುರುಬ ಸಮಾಜದ ಮುಖಂಡರ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ದಿಯಲ್ಲಿ ಪ್ರಾಮಾಣಿಕತೆಯನ್ನು ಹೊಂದಿರುವ ಹತ್ತು ವರ್ಷಗಳ ಭ್ರಷ್ಟಚಾರ ಮುಕ್ತ ಆಡಳಿತ ನೀಡಿರುವ ಮೋದಿ ನಮ್ಮೆಲ್ಲರಿಗೂ ಅಚ್ಚು ಮುಚ್ಚಾಗಿದ್ದಾರೆ. ಅವರು ಮತ್ತೊಮ್ಮೆ ಪ್ರಧಾನಿಯಾದರೆ ದೇಶದ ಅಭಿವೃದ್ದಿ ದಿಕ್ಕೇ ಬದಲಾಗುತ್ತದೆ. ಇದನ್ನು ನಮ್ಮ ಬಂಧುಗಳು ಅರ್ಥ ಮಾಡಿಕೊಳ್ಲಬೇಕು.
ನಮ್ಮೇಲ್ಲರ ಆರಾಧ್ಯ ದೈವ ಭಕ್ತ ಕನಕದಾಸರ ಜಯಂತಿಯನ್ನು ಸರ್ಕಾರಿ ಜಯಂತಿÀಯನ್ನಾಗಿ ಮಾಡಿ, ಸರ್ಕಾರಿ ರಜೆ ಘೋಷಣೆ ಮಾಡಿದ್ದು, ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕಾಗಿನಾಲೆ ಅಭಿವೃದ್ದಿ ಪ್ರಾಧಿಕಾರ ಮಾಡಿದ್ದು ಬಿಜೆಪಿ, ಅಂದು ಕಾಗಿನೆಲೆ ನಾಲ್ಕು ಗುರು ಪೀಠಗಳಿಗೆ ತಲಾ 1 ಕೋಟಿ ರೂ.ಗಳಂತೆ 4 ಕೋಟಿ ರೂ.ಗಳನ್ನು ಸ್ಥಳದಲ್ಲಿ ಮಂಜೂರಾತಿ ನೀಡಿ, ಸ್ವಾಮೀಜಿ ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದು ಇದೇ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಎಂಬುದನ್ನು ನಮ್ಮ ಬಂಧುಗಳು ಅರ್ಥ ಮಾಡಿಕೊಳ್ಳಬೇಕು. ಬಾಲರಾಜು ಒಬ್ಬ ಉತ್ತಮ ಅಭ್ಯರ್ಥಿಯಾಗಿದ್ದಾರೆ. ಸಜ್ಜನ ರಾಜಕಾರಣಿ, ಮಾಜಿ ಶಾಸಕರಾಗಿ ಕ್ಷೇತ್ರದ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾರೆ. ಅವರನ್ನು ಬೆಂಬಲಿಸಿ, ಕೇಂದ್ರದಲ್ಲಿ ನಮ್ಮ ಸಮುದಾಯ ಎಸ್ಟಿಗೆ ಸೇರ್ಪಡೆಯಾಗಬೇಕಾದರೆ ಬಾಲರಾಜು ಇಲ್ಲಿಂದ ಆಯ್ಕೆಯಾಗಿ ಹೋಗಬೇಕು. ನನ್ನಲ್ಲಿರುವ ಈಗಿನ ಮಾಹಿತಿ ಪ್ರಕಾರ ಬಿಜೆಪಿ 403 ಸೀಟುಗಳನ್ನು ಪಡೆದು ಅಧಿಕಾರ ಹಿಡಿಯುತ್ತದೆ. ಕಾಂಗ್ರೆಸ್ 60-70 ಸ್ಥಾನಮಾತ್ರ ಪಡೆದುಕೊಳ್ಳಲು ಸಾಧ್ಯ. ಹೀಗಾಗಿ ನಮ್ಮ ಎಲ್ಲಾ ಕಷ್ಟಗಳಿಗೆ ನೆರವು ನೀಡುವ ಮತ್ತು ಬಿಜೆಪಿಯ ಬದ್ದತೆಗಾಗಿ ನಿಖರವಾದ ಆಡಳಿತಕ್ಕಾಗಿ ನಿಮ್ಮೆಲ್ಲರ ಮತ ಬಿಜೆಪಿಗೆ ಇರಲಿ ಎಂದು ಮನವಿ ಮಾಡಿದರು.
ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್. ಬಾಲರಾಜು ಮಾತನಾಡಿ, ಕುರುಬ ಸಮಾಜದ ಬಂಧುಗಳು ಈ ಬಾರಿ ನನ್ನಗೊಂದು ಅವಕಾಶ ಮಾಡಿ ನಿಮ್ಮೆಲ್ಲರ ಸೇವೆ ಮಾಡುವ ಭಾಗ್ಯವನ್ನು ಕಲ್ಪಿಸಿ, ಈಗಾಗಲೇ ನೀವೆಲ್ಲರು ಮತ ನೀಡಿ, ನಿಮ್ಮವರು ಮುಖ್ಯಮಂತ್ರಿಯಾಗಿದ್ದಾರೆ. ಮತ್ತೊಮ್ಮೆ ಅವರನ್ನೇ ಬೆಂಬಲಿಸುವ ಬದಲು ಮತ್ತೊಬ್ಬ ಹಿಂದುಳಿದ ವರ್ಗಗಳ ನಾಯಕ ನರೇಂದ್ರ ಮೋದಿ ಅವರು ಪ್ರಧಾನಿಯಾಗುವ ಯೋಗ ಇದೆ. ಅವರನ್ನು ತಾವೆಲ್ಲರು ಬೆಂಬಲಿಸಿ, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ದೇಶ, ಸಂವಿಧಾನ ಹಾಗೂ ಭಾರತೀಯರಾದ ನಾವೆಲ್ಲರು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದರು.
ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸೂರ್ಯ ಬಾಲರಾಜ್ ಪ್ರಸ್ತಾವಿಕವಾಗಿ ಮಾತನಾಡಿ ಹಾಲು ಮತಸ್ಥರು ಎಂದರೆ ನಾವೆಲ್ಲರು ಹಾಲು ಕರಯುವರು ಎಂದರ್ಥ. ಹೀಗಾಗಿ ಹಿಂದುಗಳಾದ ನಾವೆಲ್ಲರು ಬಿಜೆಪಿಯನ್ನು ಪ್ರೀತಿಸೋಣ. ಧರ್ಮ, ದೇಶಕ್ಕಾಗಿ ನಮ್ಮೆಲ್ಲರ ಮತ ಬಿಜೆಪಿಗೆ ಎಂಬ ಶಪಥದೊಂದಿಗೆ ತಮ್ಮ ಮನೆಮಂದಿಯ ಓಟು ಹಾಗೂ ಅಕ್ಕಪಕ್ಕದ ಮನೆಯವರ ಮತಗಳನ್ನು ಬಿಜೆಪಿಗೆ ಹಾಕಿಸುವ ಮೂಲಕ ಬಾಲರಾಜು ಗೆಲ್ಲಿಸಿ ಎಂದು ಮನವಿ ಮಾಡಿದರು.
ಸಭೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಎಸ್. ನಿರಂಜನ್‍ಕುಮಾರ್, ಮುಖಂಡರಾದ ನಿಜಗುಣರಾಜು, ಎಂ.ರಾಮಚಂದ್ರ, ಜಿ.ಪಂ.ಮಾಜಿ ಸದಸ್ಯ ಅಮಿತ್ ದೇವಹಟ್ಟಿ, ಕಿಲಗರೆ ಬಸವರಾಜು, ಜಿ.ಪಂ. ಮಾಜಿ ಸದಸ್ಯ ಸಿ.ಎನ್. ಬಾಲರಾಜು, ಎಲ್.ಸುರೇಶ್, ನಗರಸಭಾ ಸದಸ್ಯೆ ಕುಮುದಾ ಕೇಶವಮೂರ್ತಿ, ಮುಖಂಡರಾದ ಪ್ರಣಯ್, ಆನಂದ್ ಭಗೀರಥ, ಜಯಸುಂದರ ಮೊದಲಾದವರು ಇದ್ದರು.