ಶಿಕ್ಷಣಪ್ರೇಮಿ ನೀಲಕಂಠಗೌಡ ಪಾಟೀಲರಿಗೆ “ರಾಷ್ಟ್ರೀಯ ವೀರಗಣಾಚಾರಿ” ಪ್ರಶಸ್ತಿ ಪ್ರಧಾನ
ಇಂಡಿ:ಏ.14:ಪಟ್ಟಣದ ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು,ಕ್ರೀಯಾಶೀಲ ಯುವ ನಾಯಕರು,ಶಿಕ್ಷಣ ಪ್ರೇಮಿಗಳಾದ ನೀಲಕಂಠಗೌಡ ಪಾಟೀಲ ಅವರಿಗೆ ರಾಷ್ಟ್ರೀಯ ವೀರಗಣಾಚಾರಿ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.
ಶನಿವಾರ ದೇವರ ಹಿಪ್ಪರಗಿಯಲ್ಲಿ ನಡೆದ ಮಡಿವಾಳ ಮಾಚಿದೇವರ ಪ್ರತಿಷ್ಠಾನ ಹಾಗೂ ಕಲೆ ಸಾಹಿತ್ಯ ವೇದಿಕೆ ವತಿಯಿಂದ ಹಮ್ಮಿಕೊಂಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೀ ಶಾಂತೇಶ್ವರ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರು , ದಾನಿಗಳು ಹಾಗು ಶಿಕ್ಷಣ ಪ್ರೇಮಿಗಳು ಆದ ಶ್ರೀ ನೀಲಕಂಠಗೌಡ ಪಾಟೀಲರಿಗೆ ಪರಮ ಪೂಜ್ಯ ಲಿಂಗಾಯತ ಪಂಚಮ ಸಾಲಿ ಪೀಠದ ಪ್ರಥಮ ಜಗದ್ಗುರುಗಳಾದ ಶ್ರೀ ಬಸವ ಮೃತ್ಯುಂಜಯ ಮಹಾಸ್ವಾಮಿಗಳವರು ಪ್ರಶಸ್ತಿ ಪ್ರದಾನ ಮಾಡಿದರು.ಕಾರ್ಯಕ್ರಮದಲ್ಲಿ ನಾಡಿನ ಅನೇಕ ಶರಣರು, ಸಂತರು ಹಾಗು ಪ್ರತಿಷ್ಠಾನದ ಅಧ್ಯಕ್ಷರಾದ ಬಿ. ಎಮ್ .ಪಾಟೀಲ, ಬಿ.ಎಲ್.ಪಾಟೀಲ(ನಾಗರಾಳ ಹುಲಿ), ಹಾಗು ಇಂಡಿ ಪಟ್ಟಣದ ರವಿಗೌಡ ಪಾಟೀಲ, ರಾಜುಗೌಡ ಪಾಟೀಲ, ರಾಜು ಕುಲಕರ್ಣಿ, ಅಮಿತ ಪಾಟೀಲ, ರಾಜುಗೌಡ ಪಾಟೀಲ(ದೇವರ ಹಿಪ್ಪರಗಿ) ಮೊದಲಾದವರು ಈ ಸಂದರ್ಭದಲ್ಲಿ ಇದ್ದರು.