ಪ್ರಜಾಪ್ರಭುತ್ವ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಿ ಸ್ವೀಪ್ ಸಮಿತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ
ಕಲಬುರಗಿ:ಏ.13:ಲೋಕಸಭೆ ಚುನಾವಣೆ-2024ರ ಹಿನ್ನೆಲೆಯಲ್ಲಿ ಸ್ವೀಪ್ ಸಮಿತಿಯಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಮತದಾನವಾದ 45-ಉತ್ತರ ಗುಲಬರ್ಗಾ ವಿಧಾನಸಭಾ ಮತಕ್ಷೇತ್ರದ ಭಾಗ ಸಂಖ್ಯೆ-50 ಡಾಲ್ಪಿನ ಶಾಲೆ ಮಿಸ್ಬಾನಗರದಲ್ಲಿ ಶನಿವಾರ ಎಲ್ಲರಿಗೂ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲಾಯಿತು.
2024ರ ಮೇ 7 ರಂದು ಮತದಾನ ದಿನದಂದು ಕಡ್ಡಾಯವಾಗಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು. ಮತದಾರರು ತಮ್ಮ-ತಮ್ಮ ಹತ್ತಿರದ ಮತಗಟ್ಟೆ ಕುರಿತು ಮಾಹಿತಿ ಹೊಂದಬೇಕು. ಮತದಾನದಿಂದ ಯಾರೂ ಹೊರಗುಳಿಯಬಾರದು ಲೋಕಸಭಾ ಚುನಾವಣೆಯಲ್ಲಿ ಶೇ.100 ರಷ್ಟು ಮತದಾನ ಮಾಡಬೇಕು. ಯಾರೂ ಕೂಡ ಯಾವುದೇ ಆಸೆ, ಆಮೀಷಕ್ಕೆ ಒಳಗಾಗಬಾರದು. ಎಲ್ಲರೂ ಕಡ್ಡಾಯವಾಗಿ ಮತ ಚಲಾಯಿಸಬೇಕು. 2024 ರ ಪ್ರಜಾಪ್ರಭುತ್ವ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಅರಿವು ಮೂಡಿಸಲಾಯಿತು.
ಕಲಬುರಗಿ ಮಹಾನಗರಪಾಲಿಕೆ ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ರಹೆಮಾನ್, ಕಂದಾಯ ಅಧಿಕಾರಿ ಸಂತೋಷ ಅನಿಶಟ್ಟರ್, ಸಮುದಾಯ ವ್ಯಾವಹಾರಿಕ ಅಧಿಕಾರಿ ವಿಜಯಲಕ್ಷ್ಮೀ, ಮತಗಟ್ಟೆ ಅಧಿಕಾರಿ ಶೇಖ ಶಾ, ಬಿ.ಎಲ್.ಓ. ಕಲ್ಲಯ್ಯ ಸ್ವಾಮಿ, ಆರೋಗ್ಯ ನಿರೀಕ್ಷಕರಾದ ಶರಣು ಟೆಂಗಳಿ, ರಾಘವೇಂದ್ರ ಮನಗೊಳಿ, ಕಂದಾಯ ನಿರೀಕ್ಷಕರಾದ ಜಗದೇವ ಸ್ವಾಮಿ, ರಾಘವೇಂದ್ರ ಕುಲಕರ್ಣಿ, ಮಹೇಶ ವಾಗ್ದಾಳೆ, ಕರವಸೂಲಿಗಾರ ಬಸವರಾಜ ಬುಳ್ಳ, ಬಸವರಾಜ ಪಂಚಕಟ್ಟೆ, ಪಾಲಿಕೆ ಸಿಬ್ಬಂದಿ, ಅಧಿಕಾರಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.