ನಿನ್ನೆ ಅಬ್ಬರ ಇಂದು ಶಾಂತಇಬ್ಬರಲ್ಲೂ ಗೆಲುವಿನ ಉತ್ಸಾಹ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.13: ನಗರದಲ್ಲಿ ನಿನ್ನೆ ಲೋಕಸಭಾ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದ ಕಾರಣ ಎರಡು ಪಕ್ಷಗಳ ಕಾರ್ಯಕರ್ತರ ಅಬ್ಬರದ ಪ್ರದರ್ಶನವಿತ್ತು. ಇಂದು ಎರಡನೇ ಶನಿವಾರ ಜೊತೆಗೆ ಹೆಚ್ಚುತ್ತಿರುವ ಬಿಸಿಲಿನಿಂದ ರಾಜಕೀಯ ಚಟುಚಟಿಕೆ ಬಹಿರಂಗವಾಗಿ ಕಾಣದೆ ಸ್ಥಬ್ದವಾದಂತಾಗಿದೆ.
ಆಡಳಿತಾರೂಡ ಕಾಂಗ್ರೆಸ್ ಪಕ್ಷ ನಿನ್ನೆ ನಿರೀಕ್ಷೆಗೂ ಮೀರಿ ಪಕ್ಷದ ಕಾರ್ಯಕರ್ತರು, ಅಭಿನಾನಿಗಳು ಜೊತೆಗೆ ಎಲ್ಲಾ ಚುನಾವಣೆಗಳಂತೆ ಕರೆತಂದವರೂ ಸೇರಿ ಸಾವಿರಾರು ಜನರಿಂದ ನಗರದೆಲ್ಲಡೆ ಕೈ ಚಿನ್ನೆಯ ಭಾವುಟಗಳ ಮಧ್ಯೆ ಪಕ್ಷದ ನಾಯಕರ ಮೆರವಣಿಗೆಯ ಅಬ್ಬರ ಕೈ ಮೇಲೆಂಬಂತೆ ಬಿಂಬಿತವಾಗುವಂತಿತ್ತು.
ಡಿಸಿಎಂ ಶಿವಕುಮಾರ್ ಬರ್ತಾರೆಂಬ ಕಾರಣಕ್ಕೋ ಏನೋ ಒಟ್ಟಿನಲ್ಲಿ ಸೇರಿದ್ದ ಜನಸಂಖ್ಯೆ ಮಾತ್ರ ಪಕ್ಷದ ಅಭ್ಯರ್ಥಿ ಗೆಲುವಿಗೆ ಮುನ್ಸೂಚನೆ ಎಂಬಂತೆ  ಪ್ರದರ್ಶನವಿತ್ತು‌.
ಬಿಜೆಪಿಯಿಂದ:
ಇನ್ನು ಯಾವಾಗಲೂ ಪ್ರಚಾರದಲ್ಲಿ ತಾವು ಮುಂದೆ ಎಂಬುದನ್ನು ಪ್ರತಿಬಿಂಬಿಸುವ ಬಿಜೆಪಿಯಿಂದಲೂ ಸಹ ಸಮಪ್ರದಾಯಿಕ ಕಲಾ ತಂಡಗಳೊಂದಿಗೆ ಪಕ್ಷದ ಕಾರ್ಯಕರ್ತರು ಕಮಲದ ಚಿನ್ಹೆಯ ಬೃಹತ್ ಧ್ವಜ ಹಿಡಿದು.ಮೋದಿ, ಮೋದಿ ಎಂದು ಘೋಷಣೆ ಕೂಗುತ್ತ. ಪಟಾಕಿ ಸಿಡಿಸುತ್ತ ಎಸ್ಪಿ ವೃತ್ತದಿಂದ ಸಾವಿರಾರು ಜನರು ಸಾಗಿ ಬಂದಿದ್ದು ಸಹ ಗಮನ ಸೆಳೆಯಿತು.
ರಾಜ್ಯದಲ್ಲಿ ಆಡಳಿತ ಹೊಂದಿರುವ, ಆರು ಜನ ಶಾಸಕರನ್ನು ಹೊಂದಿರುವ  ಕಾಂಗ್ರೆಸ್ ಗೆ ಸ್ವಂತ ಬಲದ ಜೊತೆಗೆ ಮೋದಿಯ ಹವದಿಂದ ಗೆಲುವಿನ ದಡ ಸೇರುವುದು ಖಚಿತ ಎಂದು ಶ್ರಮಿಸುತ್ತಿರುವ ಶ್ರೀರಾಮುಲುಗೆ. ಜನಾರ್ಧನರೆಡ್ಡಿ ಮತ್ತೆ ಪಕ್ಷಕ್ಕೆ ಬಂದಿರುವುದು, ಸದಾ ಬಿಜೆಪಿಗೆ ಲೀಡು ಕೊಡುವ ಹಗರಿಬೊಮ್ಮಹಳ್ಳಿ ಮತದಾರನ್ನು ಪ್ರತಿನಿಧಿಸುವ ಜೆಡಿಎಸ್ ಶಾಸಕ ಜೊತೆಗಿರುವುದು.  ಆನೆ ಬಲ ಬಂದಾಗಿದೆಂದು. ಜೊತೆಗೆ ಬೃಹತ್ ಲಿಂಗಾಯತ ಸಮಾಜವನ್ನು ಪ್ರತಿಬಿಂಬಿಸುವ ವಿಜಯೇಂದ್ರ ಬಂದು ಹೋಗಿದ್ದು ಗೆಲುವಿನ ಪ್ರಯತ್ನಕ್ಕೆ ಇಂಬು ನೀಡಿದಂತಿದೆ.