ದೈವಿಕ ಭಾವ ಸ್ಫುರಿಸುವ ಭರತನಾಟ್ಯ
ಕಲಬುರಗಿ :ಏ.13:ಭಾರತೀಯ ಶಾಸ್ತ್ರೀಯ ನೃತ್ಯ ಪರಂಪರೆಯ ಪ್ರಮುಖ ಕಲಾಪ್ರಕಾರವಾದ ಭರತನಾಟ್ಯದಿಂದ ದೈವಿಕ ಭಾವ ಮೂಡುತ್ತದೆ ಎಂದು ಪಿಡಿಎ ಇಂಜಿನಿಯರಿಂಗ್ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಪಂಡಿತ ಡಾ.ಶ್ರೀನಿವಾಸಾಚಾರ್ಯ ಪದಕಿ ಹೇಳಿದರು.
ನಗರದ ಡಾ.ಎಸ್.ಎಂ.ಪಂಡಿತ ರಂಗ ಮಂದಿರದಲ್ಲಿ ನೃತ್ಯಪ್ರಿಯಾ ನೃತ್ಯ ಕಲಾಕೇಂದ್ರ ಆಯೋಜಿಸಿದ್ದ 8 ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಭಾರತದ ದೇವಾಲಯಗಳು ಭರತನಾಟ್ಯದ ಪ್ರದರ್ಶನ ಏರ್ಪಡಿಸಿ, ಕಲಾಸೇವೆಗೆ ಅವಕಾಶ ಮಾಡಿಕೊಡುತ್ತಿದ್ದರು ಎನ್ನಲು, ಹಲವಾರು ದೇವಾಲಯಗಳಲ್ಲಿ ನೃತ್ಯ ಭಂಗಿಯ ಶಿಲ್ಪಗಳನ್ನು ಕೆತ್ತಿರುವುದೇ ಸಾಕ್ಷಿಯಾಗಿದೆ. ನೃತ್ಯ ಸೇವೆಯೂ ದೇವರ ಪೂಜೆಯ ಒಂದು ಭಾಗವಾಗಿತ್ತು. ಇದೊಂದು ಪರಮ ಪವಿತ್ರ ಕಲೆಯಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕಲಬುರಗಿ ರಂಗಾಯಣದ ನಿಕಟಪೂರ್ವ ನಿರ್ದೇಶಕ ಪ್ರಭಾಕರ ಜೋಶಿ ಮಾತನಾಡಿ, ಶಾಸ್ತ್ರೀಯ ನೃತ್ಯ ಕಲಿಕೆಯ ಕಾರಣದಿಂದ ದೇಹ, ಬುದ್ದಿ, ಮನಸ್ಸು ಏಕತ್ರಗೊಂಡು ಸಮತೋಲನದಲ್ಲಿ ಇರಲು ಸಾಧ್ಯವಾಗುತ್ತದೆ. ಕಲಬುರಗಿಯಲ್ಲಿ ನೃತ್ಯ ಕಲಿಕೆಗೆ ಹೆಚ್ಚಿನ ಪೆÇ್ರೀತ್ಸಾಹ ಸಿಗುತ್ತಿರುವುದು ಸಂತಸದಾಯಕ ಎಂದರು.
ಅತಿಥಿಗಳಾಗಿದ್ದ ಸಂಸ್ಕøತ ವಿದ್ವಾಂಸರಾದ ಪಂಡಿತ ಗಿರೀಶಾಚಾರ್ಯ ಅವಧಾನಿ, ವೆಂಕಟೇಶ್ವರ ದೇವಸ್ಥಾನದ ಕಾರ್ಯನಿರ್ವಾಹಕ ನಿರ್ದೇಶಕ ಗೋವರ್ಧನ ದೇಶಪಾಂಡೆ, ಶ್ರೀರಾಘವೇಂದ್ರಸ್ವಾಮಿ ಮಠದ ಅಧ್ಯಕ್ಷ ರಮೇಶ ವಕೀಲರು ಮತ್ತು ಅರವಿಂದೋ ಸೊಸೈಟಿ ಅಧ್ಯಕ್ಷ ಶ್ರೀಪಾದರಾವ ಘಂಟೋಜಿ, ವೆಂಕಟೇಶ್ವರ ದೇವಾಲಯದ ಕಾರ್ಯದರ್ಶಿ ಪಿ.ಎನ್.ಜೋಶಿ ಭಾಗವಹಿಸಿದ್ದರು.
ನೃತ್ಯಪ್ರಿಯಾ ನೃತ್ಯ ಕಲಾಕೇಂದ್ರದ ಸ್ಥಾಪಕಿ ಐಶ್ಚರ್ಯ ಆರ್.ಕುಲಕರ್ಣಿ ಅವರ ನಿರ್ದೇಶನದಲ್ಲಿ ಶ್ರೀ ಕೃಷ್ಣ ಲೀಲೆಯ ಇಪ್ಪತ್ತೊಂದು ವಿವಿಧ ನೃತ್ಯ ಪ್ರದರ್ಶನಗಳನ್ನು ಕೇಂದ್ರದ ಅರವತ್ತು ವಿದ್ಯಾರ್ಥಿನಿಯರು ಪ್ರಸ್ತತ ಪಡಿಸಿದರು. ಭಾರತೀಶ ಬೆಳಗುಂದಿ ನಿರೂಪಿಸಿದರು. ರಮೇಶ ಕುಲಕರ್ಣಿ ವಂದಿಸಿದರು. ಕಲಾವಿದರಿಗೆ ಮುಖವರ್ಣಿಕೆ ಮಾಡಿದ ಧಾರವಾಡದ ಸಂತೋಷ ಮಾಹಲೆ ಅವರನ್ನು ಸತ್ಕರಿಸಲಾಯಿತು.