ವಿಜಯಪುರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ 4 ಕೋಟಿ ಒಡೆಯಪತಿಗಿಂತ ಪತ್ನಿಯೇ ಶ್ರೀಮಂತೆ
ವಿಜಯಪುರ,ಏ.13:ವಿಜಯಪುರ ಎಸ್.ಸಿ. ಮೀಸಲು ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರು ನಾಲ್ಕು ಕೋಟಿಗಿಂತ ಹೆಚ್ಚು ಶ್ರೀಮಂತರಾಗಿದ್ದಾರೆ. ಆಲಗೂರ ಅವರಿಗಿಂತಲೂ ಅವರ ಪತ್ನಿ ಹೆಚ್ಚು ಶ್ರೀಮಂತರಾಗಿದ್ದಾರೆ.
ರಾಜು ಆಲಗೂರ ಅವರು ನಾಮಪತ್ರ ಸಲ್ಲಿಸುವ ವೇಳೆ ಚುನಾವಣೆ ಆಯೋಗಕ್ಕೆ ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದು, ರಾಜು ಆಲಗೂರ ಅವರ ಪತ್ನಿ ಪತಿಗಿಂತ ಎರಡು ಕೋಟಿ ಹೆಚ್ಚು ಶ್ರೀಮಂತೆ ಆಗಿದ್ದಾರೆ.
ಅಭ್ಯರ್ಥಿ ರಾಜು ಆಲಗೂರ ಆವರ ಹೆಸರಿನಲ್ಲಿ 5 ಲಕ್ಷ ನಗದು, ಬ್ಯಾಂಕ್ ಠೇವಣಿ, ಹೂಡಿಕೆ, ಎರಡು ವಾಹನ, 5.84 ಲಕ್ಷ ರೂ. ಮೌಲ್ಯದ 80 ಗ್ರಾಂ ಚಿನ್ನಾಭರಣ ಸೇರಿದಂತೆ 91,74,326 ರೂ. ಮೌಲ್ಯದ ಚರಾಸ್ಥಿ ಹೊಂದಿದ್ದಾರೆ.
ಕೃಷಿ ಭೂಮಿ, ಕೃಷಿಯೇತರ ಭೂಮಿ, ನಿವೇಶನ, ಮನೆ, ವಾಣಿಜ್ಯ ಕಟ್ಟಡ ಒಳಗೊಂಡಂತೆ ಒಟ್ಟು 4,54,87,500 ರೂ. ಮೌಲ್ಯದ ಸ್ಥಿರಾಸ್ಥಿ ಇದೆ.
ಪತ್ಮಿ ಸಾವಿತ್ರಿ ಹನಮಂತರಾವ ಆಲಗೂರ ಹೆಸರಿನಲ್ಲಿ 2 ಲಕ್ಷ ನಗದು, ಹೂಡಿಕೆ, ಠೇವಣಿ, ಮೂರು ವಾಹನ, 230 ಗ್ರಾಂ ಚಿನ್ನ (16.79 ಲಕ್ಷ) ಸೇರಿದಂತೆ 1,67,80,894 ಮೌಲ್ಯದ ಚರಾಸ್ಥಿ ಹೊಂದಿದ್ದಾರೆ.
ಕೃಷಿ ಭೂಮಿ, ಕೃಷಿಯೇತರ ಭೂಮಿ, ನಿವೇಶನ, ಹೊಟೇಲ್ ಸೇರಿದಂತೆ ಒಟ್ಟು 6,85,25,000 ರೂ. ಮೌಲ್ಯದ ಸ್ಥಿರಾಸ್ಥಿ ಇದೆ.