ಇದು ನಿಮ್ಮ ವಾಣಿ” ವಿಭಾಗ. ಉಪಯೋಗಕ್ಕೆ ಬಾರದ ಶೌಚಾಲಯ.
ಮಾನ್ಯರೇ,
ಬಳ್ಳಾರಿ ಮಹಾನಗರ ಪಾಲಿಕೆಯ ಈ ಶೌಚಾಲಯ ಇರುವುದು ಈಡಿಗಾ ಹಾಸ್ಟೆಲ್ ಬಿಲ್ಡಿಂಗ್ ಎದುರುಗಡೆ.ಸುಮಾರು ತಿಂಗಳಿಂದ ಇದನ್ನು ಸಾರ್ವಜನಿಕರು ಉಪಯೋಗಿಸುತ್ತಿಲ್ಲ,ಕಾರಣ ಎರಡು ಕಡೆ ಬೀಗಹಾಕಿದೆ.ಈ ಜಾಗದಲ್ಲಿ  ಟ್ರಾಕ್ಸ್..ಟಾಟ ಸುಮೋಗಳು ಬೇರೇ..ಬೇರೆ ಹಳ್ಳಿ ಊರಿಗಳಿಂದ  ಬಂದ ಪ್ರಯಾಣಿಕರ ಇಲ್ಲಿ ಇಳಿಸುತ್ತಾರೆ.ಒಂದು ರೀತಿಯಲ್ಲಿ ಮಿನಿ ತಂಗುದಾಣ ವಾಗಿದೆ. ಈ ಶೌಚಾಲಯ ಬಂದು ಹೋಗವ ಪ್ರಯಾಣಿಕರಿಗೆ ಅನುಕೂಲ ವಾಗಿತ್ತು.ಈಗ ಪರ ಊರುಗಳಿಂದ  ಬರುವ ಮಹಿಳೆಯರಿಗು/ಪುರುಷರಿಗು ಬಹಿರ್ದೆಸೆಗೆ ಹೋಗಬೇಕೆಂದರೆ ಈ ಶೌಚಾಲಯ ಸದ್ಯಕ್ಕೆ ಉಪಯೋಗಕ್ಕೆ ಇಲ್ಲ.ಇನ್ನು ಮಹಿಳೆಯರ ಸ್ಥಿತಿ ಹರೋಹರ. ಪಕ್ಕದಲ್ಲಿ ಒಂದು ಓಣಿಗೆ ಹೋಗಬೇಕೆಂದರೆ ಅಡ್ಡಾದಿಡ್ಡಿ ಅಡ್ಡಾಡುವ ಜನರು.ಗಂಡಸರು ಹೇಗೂ ತಮ್ಮ
ಜಲಬಾದೆ ಲೀಲಾಜಾಲವಾಗಿ ನಿಭಾಯಿಸಿ ಕೊಳ್ಳುತ್ತಾರೆ,ಆದರೆ ಮಹಿಳೆಯ ಸ್ಥಿತಿ ಚಿಂತಾಜನಕ,ಹೇಳಿಕೇಳಿ ಇದು ರಣ ಬಿಸಿಲಿನ ತಿಂಗಳು ಇಂಥಾ ಸಮಯದಲ್ಲಿ ಈ ಶೌಚಾಲಯ ಉಪಯೋಗಕ್ಕೆ ಬಾರದೇ ಇರುವುದು ಜನಸಾಮಾನ್ಯರಿಗೆ ತೊಂದರೆಯಾಗಿದೆ.ನಗರ ಪಾಲಿಗೆ ಆದಷ್ಟು ಬೇಗ ಇತ್ತು ಗಮನ ಹರಿಸಿ ಜನಸಾಮಾನ್ಯರ ಉಪಯೋಗಕ್ಕೆ ಅನುವು ಮಾಡಿ ಕೊಡುತ್ತೀರಿ ಎಂದು ಭಾವಿಸಿದ್ದೇನೆ.
ಧನ್ವಂತರಿ.ಮಾನ್ವಿ.
ಸ.ನಾ.ಪೇಟೆ.ಬಳ್ಳಾರಿ.