ತಾರಾನಗರದಲ್ಲಿ ಸಂಭ್ರಮದ ಭವಾನಿ ಶಂಕರ ರಥೋತ್ಸವ
ಸಂಜೆವಾಣಿ ವಾರ್ತೆ
ಸಂಡೂರು: ಏ: 13:  ತಾಲೂಕಿನ ತಾರಾನಗರ ಗ್ರಾಮದಲ್ಲಿ ಶ್ರೀ ಭಾವಾನಿ ಶಂಕರದೇವರ ರಥೋತ್ಸವವು ಸಂಭ್ರಮದಿಂದ ನೆರವೇರಿತು.
ಗ್ರಾಮದ ಎಲ್ಲಾ ಮುಖಂಡರು ಸಕಲವಾದ್ಯಗಳೊಂದಿಗೆ ಮೆರವಣಿಗೆಯ ಮೂಲಕ ಸಾಗಿತು, ಈ ಸಂದರ್ಭದಲ್ಲಿ ಗ್ರಾಮದ ದೇವಸ್ಥಾನದಲ್ಲಿ ಮಠಾಧೀಶ್ವರರು ಅದ ದೊಡ್ಡ ಬಸಯ್ಯನವರು ಪಂಚಾಂಗ ಶ್ರವನ ಮಾಡಿದರು ಈ ಸಂದರ್ಭದಲ್ಲಿ ಈ ವರ್ಷದಲ್ಲಿ ಮಳೆ, ಬೆಳೆ, ಮುಂತಾದ ಅಂಶಗಳನ್ನು ಮನವರಿಕೆ ಮಾಡಿಕೊಂಡರು ಪಂಚಾಂಗದ ಶ್ರವಣವನ್ನು ಮಾಡಿ ಪೂಜೆ ಸಲ್ಲಿಸಿದರು, ಮಠದ ಮಲ್ಲಯ್ಯ ಸ್ವಾಮಿಗಳು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು, ಪಂಚಾಂಗದ ಶ್ರವಣದ ನಂತರ ಶಂಕರ ದೇವರ ರಥೋತ್ಸವವರು ಸಕಲ ಭಕ್ತರ ಸಮ್ಮುಖದಲ್ಲಿ ನೆರವೇರಿತು, ಭಕ್ತರು ರಥೋತ್ಸವದಲ್ಲಿ ಭಾಗವಹಿಸುವುದರ ಮೂಲಕ ರಥವನ್ನು ಎಳೆದು ಹಣ್ಣುಗಳನ್ನು ಸಮರ್ಪಿಸಿದರು.