ಹಸುವಿನ ಅರಣ್ಯ ರೋಧನ
ಸಂಜೆವಾಣಿ ವಾರ್ತೆ
ಸಂಡೂರು : ಏ:13:  ಬಿರು ಬೇಸಿಗೆಯಲ್ಲಿ ನೀರಿನ ಕೊರತೆ, ಆಹಾರದ ಸಮಸ್ಯೆ ತಾಲೂಕಿನಲ್ಲಿ ಉಂಟಾಗಿದ್ದು, ಪರಿಣಾಮ ಬಿಡಾಡಿದನಗಳ ಸಂಖ್ಯೆ ಹೆಚ್ಚಾಗಿದ್ದು ಅವು ಕರು ಹಾಕಿದರೂ ಸಹ ಕೇಳುವವರಿಲ್ಲದಂತಹ ದುಸ್ಥಿತಿ ಉಂಟಾಗಿದ್ದು ಪಟ್ಟಣದ ಅಶೋಕ ಕಾಲೋನಿಯಲ್ಲಿ ಕಂಡು ಬಂದಿತು.
ನಿತ್ಯ ದನಗಳು ಮನೆಗಳ ಮುಂದಿನ ತೊಟ್ಟಿಗಳಿಗೆ ದಾಂಗುಡಿ ಇಡುತ್ತಿವೆ, ಕೆಲ ಮಾನವೀಯತೆಯಿಂದ ನೀರನ್ನು ಬಿಟ್ಟು ದನಕರುಗಳು ನೀರು ಕುಡಿಯುವಂತೆ ಮಾಡಿದ್ದಾರೆ, ಇನ್ನೂ ಕೆಲವು ಮನೆಯ ಮುಂದೆ ಸಣ್ಣ ಪುಟ್ಟ ಡಬ್ಬಿಗಳಲ್ಲಿ ನೀರಿನ್ನು ಇಟ್ಟು ಗುಬ್ಬಿಗಳು , ಪಕ್ಷಿಗಳು ಕುಡಿಯುವಂತೆ ಮಾಡಿದ್ದಾರೆ, ಅದರೆ ನಿಜವಾದ ರೈತರು ಇಂದು ತಮ್ಮ ದನಕರುಗಳನ್ನು ಸಾಕುವ ಸ್ಥಿತಿ ಇಲ್ಲದಂತಾಗಿದೆ, ಕಾರಣ ಅವುಗಳಿಗೆ ಮೇವಿನ ಸಮಸ್ಯೆ , ಕಾಡಿನಲ್ಲಿ ಮೇವಿಲ್ಲ, ಕುಡಿಯಲು ನೀರು ಇಲ್ಲ, ಕೆರೆಗಳು ಬತ್ತಿವೆ, ಇರುವ ಶಿವಪುರ ಕೆರೆಯಲ್ಲಿ ನೀರು ಇಲ್ಲವಾಗಿದೆ, ಅಲ್ಲದೆ ಸುತ್ತಲು ಅಪಾಯದಿಂದ ರಕ್ಷಿಸಲು ತಡೆ ಬೇಲಿಯನ್ನು ಹಾಕಲಾಗಿದೆ, ಅದ್ದರಿಂದ ದನಕರುಗಳಿಗೆ ನೀರಿನ ಸಮಸ್ಯೆ ಉಲ್ಬಣವಾಗಿದೆ. ಇದರಿಂದ ಬೇಸತ್ತ ಕೆಲ ರೈತರು ತಮ್ಮ ದನಕರುಗಳನ್ನು ಮನೆಯಿಂದ ಬಿಟ್ಟು ಹೊಡೆಯುತ್ತಿದ್ದಾರೆ.
ಈ ರೀತಿ ಬಿಟ್ಟು ಹೊಡೆದ ದನಕರುಗಳ ಹೆಚ್ಚಾಗಿ ಪಟ್ಟಣದಲ್ಲಿ ಬಿಡಾಡಿದನಗಳ ಕಾಟ ಹೆಚ್ಚಾಗಿದೆ, ಹೋಟಲ್, ಹಣ್ಣಿನ ಅಂಗಡಿ, ತರಕಾರಿ ಮಾರುಕಟ್ಟೆ, ಇನ್ನೂ ತೊಟ್ಟಿಗಳನ್ನು ಇಟ್ಟಿರುವ ಮನೆಗಳ ಹತ್ತಿರ ದನಗಳು ಹೋಗುತ್ತಿರುವುದು ಕಾಣುತ್ತಿವೆ, ರಸ್ತೆಯಲ್ಲಿ ನಿತ್ಯ ಓಡಾಡುವರಿಗೂ ಸಮಸ್ಯೆಯಾಗಿದೆ. ಅಲ್ಲದೆ ಪಟ್ಟಣದ ಅಶೋಕ ಕಾಲೋನಿಯಲ್ಲಿ ಬಿಡಾಡಿ ಹಸು ತನ್ನ ಕರುವಿಗೆ ಜನ್ಮ ನೀಡಿದ್ದು ಅದನ್ನು ನೋಡಿಕೊಳ್ಳುವವರು ಇಲ್ಲದಂತಾಗಿದೆ, ಇದಕ್ಕೆ ಬೀದಿನಾಯಿಗಳು ಮಾಂಸವನ್ನು ಕಿತ್ತು ತಿನ್ನಲು ಅವಣಸುತ್ತಿದ್ದನ್ನು ಇದನ್ನು ತಾಯಿ ಹರ ಸಾಹಸ ಮಾಡಿ ರಕ್ಷಿಸುತ್ತಿರುವ ದೃಶ್ಯ ಕಂಡು ಬಂದಿತು.