ಐಕ್ಯೂ ಪಿಯು ಕಾಲೇಜ್: ಅತ್ಯುತ್ತಮ ಫಲಿತಾಂಶ: ಸಿಮಿತ ಸೀಟುಗಳು ಪ್ರವೇಶಕ್ಕೆ ಆಹ್ವಾನ
ಸಂಜೆವಾಣಿ ವಾರ್ತೆ
ಸಿಂಧನೂರು.ಏ.೧೩- ನಗರದಲ್ಲಿನ ಐ.ಕ್ಯೂ ಇಂಟರ್ ನ್ಯಾಶನಲ್ ಪಿ.ಯು ಕಾಲೇಜ್ ದ್ವೀತಿಯ ಪಿಯುಸಿ ಫಲಿತಾಂಶ ಘೋಷಣೆ ಆಗಿದ್ದು, ಅತ್ಯುತ್ತಮ ಫಲಿತಾಂಶ ಪಡೆದು ವಿದ್ಯಾರ್ಥಿಗಳು ಕಾಲೇಜಿನ ಹಾಗೂ ಪಾಲಕರ ಗೌರವವನ್ನು ಹೆಚ್ಚಿಸದ್ದಾರೆಂದು ಸಂಸ್ಥೆಯ ಅಧ್ಯಕ್ಷರಾದ ಕೆ.ಸುಗುಣ ಹೇಳಿದರು.
ಗಂಗಾವತಿ ರಸ್ತೆಯ ಹೊಸಳ್ಳಿ ಇಜೆ ಕ್ರಾಸ್ ನಲ್ಲಿರುವ ಐ.ಕ್ಯೂ ಇಂಟರ್ ನ್ಯಾಶನಲ್ ಪಿ.ಯು ಕಾಲೇಜ್ ನ ವಿದ್ಯಾರ್ಥಿಗಳು ೨೪ ವಿದ್ಯಾರ್ಥಿಗಳು ಶೇ ೯೦ %. ಕ್ಕಿಂತ ಅಧಿಕ ಫಲಿತಾಂಶ ,೫೦- ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ಪ್ರಥಮ ಶ್ರೇಣಿಯಲ್ಲಿ ೧೧೨ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆಂದು ತಿಳಿಸಿದರು.
ವಿಜ್ಞಾನ ವಿಭಾಗದಲ್ಲಿ ಪದ್ಮಾ ತೇಜಸ್ವಿನಿ-ಶೇ.೯೭% ,ಲಕ್ಷ್ಮೀ ಪ್ರಿಯಾಂಕ – ಶೇ.೯೫% ಹಾಗೂ ಎಮ್.ಸಿಂಧು-ಶೇ.೯೪.೫೦% ರಷ್ಟು ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ.
ಸೀಮಿತ ಸೀಟುಗಳು ಲಭ್ಯ : ನುರಿತ ಉಪನ್ಯಾಸಕರಿಂದ ತರಗತಿಗಳು ನಡೆಯುತ್ತಿದ್ದು, ಉತ್ತಮ ಫಲಿತಾಂಶ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಹೆಚ್ಚು ಒತ್ತು ಕೊಡಲಾಗುತ್ತದೆ .ಪ್ರವೇಶಗಳು ಪ್ರಾರಂಭವಾಗಿದ್ದು ಉಜ್ವಲ ಭವಿಷ್ಯ ಕ್ಕಾಗಿ ಪ್ರವೇಶ ಪಡೆಯಿರಿ ಎಂದು ಪತ್ರಿಕೆ ಮೂಲಕ ತಿಳಿಸಿದರು.