ಲೋಕಾರ್ಪಣೆಗೊಂಡ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಏ.೧೩:  ಚಿತ್ರದುರ್ಗ ನಗರದ ಐ.ಯು.ಡಿ.ಪಿ. ಲೇಔಟ್ ಮೇಲ್ಬಾಗ, ಸೂರ್ಯಪುತ್ರ ನಗರದಲ್ಲಿ ನೂತನವಾಗಿ ಶ್ರೀ ಶ್ರೀಶನೇಶ್ವರಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್ ವತಿಯಿಂದ ನಿರ್ಮಾಣವಾಗಿರುವ  ಶ್ರೀಶನೇಶ್ವರಸ್ವಾಮಿಯ ದೇಗುಲ ಲೋಕಾರ್ಪಣೆ  ಮೂರು ದಿನಗಳ ವಿವಿಧ ಧಾರ್ಮಿಕ ಸಮಾರಂಭಗಳ ಮೂಲಕ  ಶ್ರೀಶನೇಶ್ವರಸ್ವಾಮಿಯ ಪ್ರಾಣ ಪ್ರತಿಷ್ಠಾಪನೆ ಮತ್ತು ಗೋಪುರ ಕಳಸಾರೋಹಣ, ಅನ್ನ ಸಂತರ್ಪಣೆ ಪೂಜಾ  ಮಹೋತ್ಸವ ಅರ್ಥಪೂರ್ಣವಾಗಿ ನಡೆಯಿತು. ಶ್ರೀಶನೇಶ್ವರಸ್ವಾಮಿ ಲೋಕ ಕಲ್ಯಾಣ ಟ್ರಸ್ಟ್ ಪೀಠಾಧಿಪತಿಗಳಾಗಿದ್ದ ಲಿಂಗೈಕ್ಯ   ಮೋಹನ್‌ ಕುಮಾರ್ ಸ್ವಾಮೀಜಿ ಕೃಪಾಶೀರ್ವಾದೊಂದಿಗೆ  ಮಹೋತ್ಸವ ನಡೆಯಿತು. ಗಣಪತಿ ಪೂಜೆ, ಪುಣ್ಯಾಹ, ದೇವನಾಂದಿ, ಪಂಚಗವ್ಯ, ರಕ್ಷಾಸೂತ್ರಧಾರಣೆ, ಜಲಾಧಿವಾಸ, ಕ್ಷಿರಾಧಿವಾಸ, ಧಾನ್ಯಾಧಿವಾಸ, ಮಂಗಳಾರತಿ, ಕಲಶಸ್ಥಾಪನೆ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಗಣಪತಿ ಹೋಮ, ರುದ್ರ ಹೋಮ, ಶನೈಶ್ವರ ಹೋಮ,  ಪುರ್ಣಾಹುತಿ, ಮಹಾಮಂಗಳಾರತಿ ಸಂಜೆ  ವಾಸ್ತು ಹೋಮ, ರಾಕ್ಷೆಘ್ನ ಹೋಮ, ಬಲಿಪ್ರಧಾನ ರತ್ನಾಧಿವಾಸ, ಚಿತ್ರಪಟಾಧಿ ವಾಸ, ಫಲಾಧಿವಾಸ, ಶಯ್ಯಧಿವಾಸ ಅಷ್ಟಬಂಧನ ನಡೆದವು.ಶ್ರೀ ಶನೈಶ್ವರಸ್ವಾಮಿಯವರ ಪ್ರತಿಷ್ಠಾಪನ ಕುಂಭಾಭಿಷೇಕ ದೇವತಾ ದರ್ಶನ ಮೂಹೂರ್ತ ಗೋಪುರ ಕಳಸ ಸ್ಥಾಪನೆಯನ್ನು ಬೆಲಗೂರಿನ ಶ್ರೀ ಹನುಮನ್ನದ್ದೂತ ಅವಧೂತರಾದ ಶ್ರೀ ಬಿಂಧುಮಾಧವ ಶರ್ಮಾ ಗುರುಗಳ ಶಿಷ್ಯರಾದ ಶ್ರೀ ವಿಜಯಮಾರುತಿ ಶರ್ಮಾ ಗುರುಗಳ ಅಮೃತ ಹಸ್ತದಿಂದ ಶ್ರೀ ಶ್ರೀಶನೈಶ್ವರಸ್ವಾಮಿಯ ಪ್ರತಿಷ್ಠಾಪನಾ ಮತ್ತು ಕಳಶರೋಹಣ ಕಾರ್ಯಕ್ರಮ ನೆರವೇರಿತು.  ಮೋಹನ್ ಸ್ವಾಮೀಜಿ ಗಳ ಪುತ್ರ ಭಾನುಕುಮಾರ್ ಉಪಸ್ಥಿತರಿದ್ದರು.ಗೋಪುರಕಳಸ ಸ್ಥಾಪನೆ ನಂತರ ಅಭಿಷೇಕ ಭಕ್ತರಿಂದ ತತ್ಯನ್ಯಾಸಾದಿ ಕಲಾಹೋಮ, ಶನೈಶ್ವರ ಮೂಲಮಂತ್ರ ಹೋಮ, ಮಹಾಪೂರ್ಣಹುತಿ ಕುಂಭಾಭಿಷೇಕ, ಪಂಚಾಮೃತ ಅಭಿಷೇಕ, ರುದ್ರಭಿಷೇಕ, ಮಂಗಳದ್ರವ್ಯಗಳ ಅಭಿಷೇಕ, ಅಲಂಕಾರ ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗ, ಅನ್ನ ಸಂತರ್ಪಣೆ ನಡೆದವು.ಕಾರ್ಯಕಾರಿ ಸಮಿತಿ ಅಧ್ಯಕ್ಷರಾದ ಸಿ. ಶಂಕರಮೂರ್ತಿ, ಉಪಾಧ್ಯಕ್ಷರಾದ ಎಂ.ಕೆ. ರಘುನಾಥ್,  ಕಾರ್ಯಾಧ್ಯಕ್ಷರಾದ ಮಂಜುನಾಥ್, ಸಹ ಕಾರ್ಯದರ್ಶಿ ಎಸ್.ಟಿ. ನವೀನ್ ಕುಮಾರ್,  ಖಜಾಂಚಿ, ಸಿ.ಎಸ್. ಶಂಕರ್,, ಚಿಕ್ಕಣ್ಣ, ಜಿ.ಎನ್. ರಾಜೇಶ್ವರಿ,  ಸ್ಥಾನ ಉಸ್ತುವಾರಿ  ಜಿ.ಎನ್. ಮಹೇಶ್ ನಿರ್ದೇಶಕರಾದ  ಎನ್.ಜಿ.ಚಂದ್ರಯ್ಯ ಮಾಸ್ಟರ್, ಬೋರಯ್ಯ, ಜಗದೀಶ್, ಡಿ. ಗೋಪಿ, ಮಾಲತೇಶ್ ಅರಸ್, ಶಿವಕುಮಾರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.