ಬಿಸಿಯೂಟದ ಪ್ರಯೋಜನ ಪಡೆಯಲು ಕರೆ
ಧಾರವಾಡ,ಏ.13: ಏಪ್ರಿಲ್ ಮತ್ತು ಮೇ 2024ರ ಬೇಸಿಗೆ ರಜಾ ಅವಧಿಯಲ್ಲಿ 41 ದಿನಗಳವರೆಗೆ 1 ರಿಂದ 10ನೇ ತರಗತಿ ಸರಕಾರಿ ಹಾಗೂ ಅನುದಾನಿತ ಶಾಲಾ ವಿದ್ಯಾರ್ಥಿಗಳಿಗೆ ಬಿಸಿಊಟವನ್ನು ವಿತರಿಸುವ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ. ಇವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 13 ಗುಲಗಂಜಿಕೊಪ್ಪದಲ್ಲಿ ಮಕ್ಕಳಿಗೆ ಊಟ ಬಡಿಸುವುದರೊಂದಿಗೆ ಉದ್ಘಾಟಿಸಿದರು.
ಜಿಲ್ಲೆಯ ಎಲ್ಲಾ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಮಧ್ಯಾಹ್ನ ಉಪಹಾರ ಯೋಜನೆ ಕಾರ್ಯಕ್ರಮ ಬೇಸಿಗೆ ರಜಾ ಅವಧಿಯಲ್ಲಿ 41 ದಿನಗಳವರೆಗೆ ಏಪ್ರಿಲ್ ಮತ್ತು ಮೇ ರಜಾ ಅವಧಿಯಲ್ಲಿ ನಡೆಯುತ್ತಿದ್ದು, ಎಲ್ಲ ಮಕ್ಕಳು ಕಾರ್ಯಕ್ರಮದ ಸದುಪಯೋಗ ಪಡೆದು ರುಚಿಯಾದ ಊಟವನ್ನು ಸೇವಿಸಬೇಕೆಂದು ಮಕ್ಕಳಿಗೆ ಹೇಳಿದರು.
ಶಾಲೆಯಲ್ಲಿ ಸ್ವಚ್ಛತೆಯನ್ನು ಕಾಪಾಡುವುದು, ಮಕ್ಕಳಿಗೆ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡುವುದು ಕಡ್ಡಾಯ ಎಂದು ಅವರು ಹೇಳಿದರು. ಶಾಲೆಯ ಮುಖ್ಯಸ್ಥರು ಜವಾಬ್ದಾರಿಯಿಂದ ಕಾಳಜಿ ಪೂರ್ವಕವಾಗಿ ಕಾರ್ಯಕ್ರಮದ ಅನು?Á್ಠನ ಮಾಡಬೇಕು. ಮ್ಯಾಪ್ ಮಾಡಿದ ಶಾಲೆಗಳಿಂದ ಒಪ್ಪಿಗೆ ಪತ್ರ ಪಡೆದು ಹಾಜರಾಗುವ ಎಲ್ಲ ಮಕ್ಕಳ ಹಾಜರಾತಿಯನ್ನು ಸಾಟ್ಸ್ ಎಮ್‍ಡಿಎಮ್ (SಂಖಿS ಒಆಒ) ನಲ್ಲಿ ಇಂದೀಕರಿಸಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ ಮಾತನಾಡಿದ ಅವರು ಯಾವುದೇ ಶಾಲೆಯಲ್ಲಿ ಕಾರ್ಯಕ್ರಮದ ಅನು?Á್ಠನದಲ್ಲಿ ಲೋಪದೋ?Àವಾಗಕೂಡದು. ಮಕ್ಕಳ ಹಾಜರಾತಿಗೆ ಅನುಸಾರವಾಗಿ ಬೇಡಿಕೆ ನೀಡಿ ಊಟ ಪಡೆಯಬೇಕು. ಎಸ್.ಓ.ಪಿ ಪರಿಪಾಲನೆಯೊಂದಿಗೆ ಇಲಾಖಾ ಮಾರ್ಗಸೂಚಿಯನುಸಾರ ಕಾರ್ಯಕ್ರಮ ಅನು?Á್ಠನಗೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಣಾಧಿಕಾರಿಗಳು ಪಿ.ಎಮ್. ಪೆÇೀ?Àಣ್ ಶಕ್ತಿ ನಿರ್ಮಾಣ , ಜಿಲ್ಲಾ ಪಂಚಾಯತಿಯು ಜಿಲ್ಲೆಯಲ್ಲಿ 7 ತಾಲೂಕುಗಳಿದ್ದು, ಒಟ್ಟು 560 ವಿತರಣಾ ಕೇಂದ್ರಗಳ ಜವಾಬ್ದಾರಿಯನ್ನು 560 ಮುಖ್ಯ ಶಿಕ್ಷಕರಿಗೆ ವಹಿಸಲಾಗಿದೆ. ಒಟ್ಟು 59552 ಮಕ್ಕಳು ಇದರ ಸದುಪಯೋಗ ಪಡೆಯುತ್ತಿದ್ದು, ಕಾರ್ಯಕ್ರಮದ ಯಶಸ್ವಿ ಅನು?Á್ಠನಕ್ಕಾಗಿ 983 ಅಡುಗೆ ಸಹಾಯಕರನ್ನು ಪುನ: ರಜಾ ಅವಧಿಯಲ್ಲಿ ಕಾರ್ಯನಿರ್ವಹಿಸಲು ನಿಯೋಜನೆ ಮಾಡಿಕೊಳ್ಳಲಾಗಿದೆ. ಮಕ್ಕಳ ಸಂಖ್ಯೆ 250 ಕ್ಕಿಂತ ಹೆಚ್ಚಿರುವ ಕೇಂದ್ರಗಳಲ್ಲಿ ಕಾರ್ಯಕ್ರಮದ ಯಶಸ್ವಿಗಾಗಿ 36 ಜನ ನೋಡಲ್ ಶಿಕ್ಷಕರನ್ನು ಹೆಚ್ಚುವರಿಯಾಗಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಸರಕಾರದ ಈ ಘನ ಕಾರ್ಯಕ್ರಮದ ಯಶಸ್ವಿ ಅನು?Á್ಠನವನ್ನು ಉತ್ತಮ ರೀತಿಯಿಂದ ಜಿಲ್ಲೆಯಲ್ಲಿ ಎಲ್ಲ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ನಿರ್ವಹಣೆ ಮಾಡಲಾಗುವುದು. ಮಕ್ಕಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ನಿರ್ವಹಣೆ ಮಾಡುವುದು ಎಂದು ತಿಳಿಸಿದರು.
ಧಾರವಾಡ ಶಹರ ವಲಯದಲ್ಲಿ 52 ಕೇಂದ್ರಗಳಿದ್ದು 4367 ವಿದ್ಯಾರ್ಥಿಗಳು ಕಾರ್ಯಕ್ರಮದ ಲಾಭ ಪಡೆಯುತ್ತಿರುವುದಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅಶೋಕ ಸಿಂಧಗಿ ತಿಳಿಸಿದರು. ತಾಲೂಕ ಪಂಚಾಯತ ಸಹಾಯಕ ನಿರ್ದೇಶಕಿ ಲಲಿತಾ ಹರ್ಲಾಪೂರ ಸ್ವಾಗತಿಸಿದರು. ಸುರೇಶ ಮೊರಬ ಸಿ.ಆರ್.ಪಿ. ಕಾರ್ಯಕ್ರಮ ನಿರೂಪಿಸಿದರು. ಮ್ಯಾಪ್ ಮಾಡಿದ ಶಾಲೆಗಳ ಎಲ್ಲ ಶಿಕ್ಷಕರು ಕಾರ್ಯಕ್ರಮದಲ್ಲಿ ಉಪಸ್ಥಿತಿಸಿದ್ದರು.