ಸಂಸ್ಕಾರ ಭಾರತೀ ಜಿಲ್ಲಾ ಶಾಖೆಯಿಂದ ಯುಗಾದಿ ಸಂಭ್ರಮಾಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೧೩; ಸಂಸ್ಕಾರ ಭಾರತೀ ದಾವಣಗೆರೆ ಜಿಲ್ಲಾ ಶಾಖೆ ವತಿಯಿಂದ ಯುಗಾದಿ ಹಬ್ಬದ ಸಂಭ್ರಮಾಚರಣೆಯನ್ನು ಕಲಾ ಪರಿಷತ್ತಿನಲ್ಲಿ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎಂ. ಮಹಾಲಿಂಗಪ್ಪ ವಹಿಸಿದ್ದು, ಯುಗಾದಿ ಆಚರಣೆಯ  ಮಹತ್ವವನ್ನು ಸಾರಿದರು. ಗೌರವ ಕಾರ್ಯದರ್ಶಿ ದಿಳ್ಳೆಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಚಂದ್ರ ದರ್ಶನದೊಂದಿಗೆ ಬೇವು ಬೆಲ್ಲ ಹಂಚಿ, ಸಿಹಿ ವಿತರಿಸಿ, ಪರಸ್ಪರ ಶುಭಾಶಯಗಳ ವಿನಿಮಯವನ್ನು ಮಾಡಿಕೊಳ್ಳಲಾಯಿತು. ಸಂಸ್ಕಾರ ಭಾರತೀಯ ವರ್ಷದ ಕಾರ್ಯಕ್ರಮಗಳಿಗೆ ಚಾಲನೆಯನ್ನು ಕೂಡ ನೀಡಲಾಯಿತು.ಕಾರ್ಯಕ್ರಮದಲ್ಲಿ ಹಿರಿಯ ಸದಸ್ಯರಾದ ಬಾ.ಮ. ಬಸವರಾಜಯ್ಯ, ಪ್ರೊ. ಕೆ.ಆರ್. ಸಿದ್ದಪ್ಪ, ಪರಮೇಶ್ವರಪ್ಪ ಸೇರಿದಂತೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು. ರುದ್ರಾಕ್ಷಿಬಾಯಿ ಧ್ಯೇಯಗೀತೆ ಹಾಡಿದರು. ದಿಳ್ಳೆಪ್ಪ ಸ್ವಾಗತಿಸಿದರು.  ದೇವಿಕ ಸುನೀಲ್ ವಂದಿಸಿದರು.