ಬಿಜೆಪಿಗೆ ಆಟೋ ಚಾಲಕರು ಸೇರ್ಪಡೆ

ಸಂಜೆವಾಣಿ ವಾರ್ತೆ
ದಾವಣಗೆರೆ.ಏ.೧೩; ವಿಶ್ವ ಮಟ್ಟದಲ್ಲಿ ಭಾರತವನ್ನ ಪ್ರಜ್ವಲಿಸುವಂತೆ ಕೀರ್ತಿ ತಂದ ಮೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರನ್ನ ಮಗದೊಮ್ಮೆ ಪ್ರಧಾನಿಯಾಗಿಸಲು ಪಣತೊಟ್ಟ ನೂರಾರು ಆಟೋ ಚಾಲಕರು ‘ದೇಶಕ್ಕಾಗಿ ಮೋದಿಜೀ ಮೋದಿಜೀಗಾಗಿ ನಾವುಗಳು’ ಎಂದು ಘೋಷವಾಕ್ಯದೊಂದಿಗೆ ಬಿಜೆಪಿ ಸೇರ್ಪಡೆಗೊಂಡರು.ಶುಕ್ರವಾರ ಸಂಸದ ಜಿಎಂ.ಸಿದ್ದೇಶ್ವರ, ಲೋಕಿಕೆರೆ ನಾಗರಾಜ್, ಮಾಜಿ ಮಹಾಪೌರ ಎಸ್.ಟಿ.ವಿರೇಶ್, ಮಾಜಿ ನಗರಸಭಾಧ್ಯಕ್ಷ ಶಿವನಹಳ್ಳಿ ರಮೇಶ್ ನೇತೃತ್ವದಲ್ಲಿ ಇಂಡಸ್ಟ್ರಿಯಲ್ ಏರಿಯಾದ ಶ್ರೀರಾಮನಗರದ ಆಟೋ ಚಾಲಕರ ಸಂಘದ ಅಧ್ಯಕ್ಷ ತಿಮ್ಮಣ್ಣ ಮತ್ತು ಕಲ್ಲೇಶಪ್ಪ ಸಾರಥ್ಯದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.ಇದೇ ಸಂದರ್ಭದಲ್ಲಿ ಶೋಷಿತ ವರ್ಗಗಳ ಮುಖಂಡ ಬಾಡದ ಆನಂದರಾಜ್, ಸಿದ್ದಲಿಂಗಪ್ಪ, ಬಿ.ಟಿ.ಸಿದ್ದಪ್ಪ, ಕೊಳೆನಹಳ್ಳಿ ಸತೀಶ್, ಒಬಿಸಿ ಮೋರ್ಚಾದ ಜಿಲ್ಲಾಧ್ಯಕ್ಷ ಹೆಬ್ಬಾಳು ಮಹೇಂದ್ರ, ಬೇತೂರು ಬಸವರಾಜ್, ಮಯಾಕೊಂಡ ಮಂಜುನಾಥ್, ಕರಾಟೆ ತಿಮ್ಮೇಶ್ ಇನ್ನೂ ಮುಂತಾದವರಿದ್ದರು.