ಜಗಳೂರು ತಾಲೂಕು ಸಮಗ್ರ ನೀರಾವರಿಗೆ ಒತ್ತಾಯಿಸಿ ನಡೆದ ಸ್ವಯಂಪೇರಿತ ಬಂದ್ ಯಶಸ್ವಿ

ಸಂಜೆವಾಣಿ ವಾರ್ತೆ
ಜಗಳೂರು.ಏ.೧೩ -: ಹಲವು ದಶಕಗಳಿಂದ ಹೋರಾಟ ಮಾಡಿ ದ್ದರು ಇನ್ನೂ ಬಾರದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಶೀಘ್ರವಾಗಿ ನಡೆಯಬೇಕು ಅದಕ್ಕಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ಅನುದಾನ ಬಿಡುಗಡೆ.ನೀಡಿ ಜಗಳೂರು ತಾಲೂಕಿಗೆ ನೀರು ಹರಿಸಬೇಕು ಎಂದು ವಿವಿಧ ಸಂಘಟನೆ ಗಳು ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಜಗಳೂರು ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟು ಗಳು ಬಂದ್ ಮಾಡಿ ಜನತೆ ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ಸತತ ಹಲವಾರು ವರ್ಷಗಳಿಂದ ಬರ ಇರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಉಂಟಾಗಿದೆ. ರೈತರು ಒಂದು ವರ್ಷ ಸಹ ಬೆಳೆ ಬೆಳೆದಿಲ್ಲ ಪಂಪ್ ಸೆಟ್ ಹಾಗೂ ಬಾವಿಗಳಲ್ಲಿ ಅಂತರ್ಜಲ ಕುಸಿತ ಕಂಡಿದೆ ಇನ್ನಾದರೂ ಭದ್ರಾ ಮೇಲ್ದಂಡೆ ನೀರು ಬರುತ್ತದೆ ಎಂದು ಕನಸು ಕಂಡಿದ್ದ ರೈತರಿಗೆ ಸರ್ಕಾರಗಳು ಪೋಳ್ಳು ಭರವಸೆಯನ್ನು ನೀಡಿವೆ.ಕಾಮಗಾರಿಗೆ ಚಾಲನೆ ನೀಡಿದರು ಆದರೆ ಅನುದಾನ ಬಿಡುಗಡೆ ಮಾಡಿಲ್ಲ ನೆನೆಗುದಿಗೆ ಬಿದ್ದಿರುವ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಗೆ ನೀರು ಹರಿಸಿ ರೈತರ ಜೀವ ಉಳಿಸಿ ಈ ವರುಷ ಬಜೆಟ್ ಅಧಿವೇಶನದಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನವನ್ನು ಸಮರ್ಪಕವಾಗಿ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸ ಬೇಕು ಮತ್ತು ಶೀಘ್ರವೇ ಭದ್ರ ನೀರು ಬರಬೇಕು ಎಂದು ವ್ಯಾಪಕವಾಗಿ ಬಂದ್ ಮಾಡಲಾಯಿತು.ಇದೇ ವೇಳೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀನಿವಾಸ್ ರಾವ್.ಪಿ. ಎಸ್.ಐ ಸಾಗರ್ ಮತ್ತು ಒಂದು ಕೆಎಸ್ಆರ್ ಎರಡು ಡಿ.ಆರ್ ಪೊಲೀಸ್ ವಾಹನಗಳು ಹೊರ ಜಿಲ್ಲೆಗಳಿಂದ 50 ಪೊಲೀಸ್ ಸಿಬ್ಬಂದಿಗಳ ನೇತೃತ್ವದಲ್ಲಿ ಬಂದ್ ವೇಳೆ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸ ಲಾಗಿತ್ತು. ಬೆಳಿಗ್ಗೆ 5:30 ಕ್ಕೆ ಹೋರಾಟಗಾರರು ಪಟ್ಟಣದ ಪ್ರಮುಖ ಬೀದಿಗಳಲ್ಲಿ  ಹೋರಾಟಕ್ಕೆ ವ್ಯಾಪಕ ಬೆಂಬಲ ನೀಡಿ ಎಂದು ಅಂಗಡಿ ಮುಗ್ಗಟ್ಟುಗಳ ವ್ಯಾಪಾರಸ್ಥರಿಗೆ ಹೋಟೆಲ್ ಮಾಲೀಕರಿಗೆ ಹೋರಾಟಕ್ಕೆ ಸಹಕರಿಸಬೇಕು ಎಂದು ಹೋರಾಟಗಾರರು ಮನವಿ ಮಾಡಿದರು.” ದಾವಣಗೆರೆಯ ಮುಖ್ಯ ರಸ್ತೆಯಾದ ಎಪಿಎಂಸಿ ಬಳಿ ಚಳ್ಳಕೆರೆ ಟೋಲ್ ಗೇಟ್ ಬಳಿ ವಾಹನ ಸವಾರರು ಸಂಚಾರಕ್ಕೆ ಮುಂದಾ ದಾಗ ಹೋರಾಟಗಾರರು ಸಂಚಾರಕ್ಕೆ ಅವಕಾಶ ಮಾಡಿಕೊಡ ದೆ ಇಂದು ಬಂದ್ ಸಹಕರಿಸ ಬೇಕಾಗಿ ವಾಪಸ್ ಕಳಿಸಿದ ಘಟನೆ ಗಳು ಜರುಗಿದವು. ನಂತರ ಇಟ್ಟಾ ಕಲಾವಿದ ರಾದ ಐರಾಣಿ ಚಂದ್ರು ಅವರಿಂದ ಹೋರಾಟದ ಕ್ರಾಂತಿ ಗೀತೆಗಳ ಆಡುವ ಮೂಲಕ ವಾಹನ ಸವಾರರಿಗೆ ಬಂದ್ ಗೆ ವ್ಯಾಪಕ ಬೆಂಬಲ ನೀಡಿ ಎಂದು ತಿಳಿ ಹೇಳಿದರು.ಹೋರಾಟಕ್ಕೆ ರೈತ ಸಂಘಟನೆಗಳು.ಆಟೋ ಚಾಲಕರು.ಬಸ್ ಮಾಲೀಕರ ಸಂಘ.ಕನ್ನಡ ರಕ್ಷಣಾ ವೇದಿಕೆ. ದಲಿತ ಸಂಘಟನೆ. ವಿಧದ ಪ್ರಗತಿಪರ ಸಂಘಟನೆಗಳು ಭಾಗವಹಿಸಿದ್ದವು.ಇದೇ ಸಂದರ್ಭದಲ್ಲಿ ಭದ್ರ ಮೇಲ್ದಂಡೆ ಯೋಜನೆ ಹೋರಾಟಗಾರರಾದ ಯಾದವ್ ರೆಡ್ಡಿ.ಮಹಾಲಿಂಗಪ್ಪ. ವಕೀಲ ಸಂಘದ ಅಧ್ಯಕ್ಷ ಓಂಕಾರೇಶ್ವರ. ರುದ್ರೇಶ್. ಎನ್ಎಸ್ ರಾಜು. ಶಂಭು ಲಿಂಗಪ್ಪ.ಕಲಾವಿದರಾದ ಐರಾಣಿ ಚಂದ್ರು.ಎಸ್.ಸಿ ಎಸ್.ಟಿ ಪತ್ರಿಕ ವರದಿಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಚಿಕ್ಕಮ್ಮನಟ್ಟಿ ಮಂಜುನಾಥ್. ಹಿರಿಯ ಪತ್ರಕರ್ತ ದೊಣ್ಣೆಹಳ್ಳಿ ಗುರುಮೂರ್ತಿ.ವಕೀಲ ಆರ್ ಓಬಳೇಶ್. ರೈತ ಸಂಘಟನೆಯ ಮುಖಂಡರಾದ ಚಿರಂಜೀವಿ. ರಾಜನಟ್ಟಿ ರಾಜು. ಕುಬೇರಪ್ಪ. ಸತ್ಯಮೂರ್ತಿ.ಲಕ್ಷ್ಮಣ್. ಭರಮಸಮುದ್ರ ರಾಜು.ಸಂಗೇನಹಳ್ಳಿ ಅಶೋಕ್ ಕುಮಾರ್. ನಾಗಲಿಂಗಪ್ಪ. ಮೈಲೇಶ್.ಇಂದಿರಾ ಗುರುಸ್ವಾಮಿ. ಸತೀಶ್. ಗ್ಯಾಸ್ ಓಬಣ್ಣ. ತೋರಣಗಟ್ಟೆ ಬಡಪ್ಪ. ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಮಾಂತೇಶ್.ಲೋಕಣ್ಣ.ರೇವಣ್ಣ. ದೊಣ್ಣೆ ಹಳ್ಳಿ ಲೋಕೇಶ್. ಕೋಳಿ ಅಂಗಡಿ ಮಾಲೀಕರಾದ ಎಂ ಎಸ್ ನಜೀರ್ ಅಹ್ಮದ್. ಸಾರ್ವಜನಿಕರು ಮತ್ತು ರೈತ ಸಂಘಟನೆ ಮುಖಂಡರು ಭಾಗವಹಿಸಿದ್ದರು.