ಜಾಮಿಯಾ ಶಾದಿಮಹಲ್ ಗೆ 25 ಲಕ್ಷ ಅನುದಾನ

ಸಂಜೆವಾಣಿ ವಾರ್ತೆ
ಹಿರಿಯೂರು : ಏ.13-ನಗರದ ಜಾಮಿಯಾ ಶಾದಿ ಮಹಲ್ ಕಾಮಗಾರಿಯನ್ನು ನಡೆಸಲು ಕರ್ನಾಟಕ ಸರ್ಕಾರದಿಂದ 25 ಲಕ್ಷ ಅನುದಾನ ಬಿಡುಗಡೆ ಮಾಡಲು ಎಐಸಿಸಿ‌ಕೋ ಆರ್ಡಿನೇಟರ್  ಹೆಚ್.ಎಂ. ಶಕೀಲ್ ನವಾಜ್ ರವರು ವಖ್ಫ್ ಮತ್ತು ವಸತಿ ಸಚಿವರಾದ  ಜಮೀರ್ ಅಹಮದ್ ಖಾನ್ ರವರ ಬಳಿ  ಮನವಿಯನ್ನು ಸಲ್ಲಿಸಿದ್ದರು. ಹೆಚ್.ಎಂ.ಶಕೀಲ್ ನವಾಜ್ ರವರ ಮನವಿಯನ್ನು ಪುರಸ್ಕರಿಸಿ ಹಿರಿಯೂರು ನಗರದ ಜಾಮಿಯಾ ಶಾದಿ ಮಹಲ್  ಗೆ 25ಲಕ್ಷ ಹಣವನ್ನು  ಸಚಿವರು ಬಿಡುಗಡೆ ಮಾಡಿದರು ಆದಕಾರಣ ಜಾಮಿಯಾ ಮಸೀದಿ ಆಡಳಿತ ಮಂಡಳಿ ಸದಸ್ಯರ  ವತಿಯಿಂದ  ಹೆಚ್.ಎಂ.ಶಕೀಲ್ ನವಾಜ್ ಹಾಗೂ ವಕೀಲರಾದ ಹೆಚ್.ಎಂ. ಷಾ ನವಾಜ್ ರವರುಗಳಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಆಡಳಿತ ಮಂಡಳಿಯ ಸದಸ್ಯರುಗಳಾದ ಅಜೀಮ್,  ಎಚ್ ಎಮ್ ಎಸ್ ಅಸ್ಗರ್,  ನೌಶಾದ್, ಷರೀಫ್ ಜಾನ್, ಜರೀಪ್ ಉಲ್ಲಾ ,ಆಪಕ್ ಅಹ್ಮದ್,  ಜಫೃದ್ದೀನ್ ಪಂಟು, ಹೆಚ್.ಬಾಬು, ದರ್ಬಾರ್ ಅಲಿ, ಹಬೀಬ್ ಉಲ್ಲಾ ಚೋಟು, ನೂರ್ ಉಲ್ಲಾ, ಸೇಟು ಹಬೀಬ್, ಮುಸವೀರ್ ಮತ್ತಿತರರು ಉಪಸ್ಥಿತರಿದ್ದರು.