ಸರಕಾರದ ನೇಮಕಾತಿಯಲ್ಲಿಮೀಸಲಾತಿ ಪರಿಗಣಿಸಿ: ಕಲ್ಲುಕಂಬ ಪಂಪಾಪತಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.20: ಸರಕಾರದ ನಿಗಮ, ಮಂಡಳಿ, ಸಹಕಾರಿ ಬ್ಯಾಂಕ್, ಸರ್ಕಾರಿ ಹಾಸ್ಟಲ್, ಶಾಲೆ, ಕಾಲೇಜುಗಳಿಗೆ ನಾಮ‌ನಿರ್ದೇಶಿತ ಅಧ್ಯಕ್ಷರು, ಸದಸ್ಯರನ್ನು ನೇಮಕ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷದ ಮುಖಂಡ ಕಲ್ಲುಕಂಬ ಪಂಪಾಪತಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಅವರಿಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ, ಪಕ್ಷದ ಹಾಗು ಮುಖ್ಯ ಮಂತ್ರಿ, ಉಪ‌ಮುಖ್ಯ ಮಂತ್ರಿ ಮತ್ತು ಸಚಿವರಿಗೆ ಒತ್ತಾಯದ ಮನವಿ
ರಾಜ್ಯದಲ್ಲಿ 482 ವಿವಿಧ ಸಮಿತಿಗಳಿವೆ. ಅವುಗಳಿಗೆ ತಲಾ ಐದರಂತೆ ನೇಮಕ ಮಾಡಿದರೆ. ರಾಜ್ಯದಲ್ಲಿ ಒಂದು ಲಕ್ಷ ಜನರಿಗೆ ಈ ಅವಕಾಶ ದೊರೆಯಲಿದೆ.
ಇವರಿಗೆ ಸರ್ಕಾರದಿಂದ ಯಾವುದೇ ಗೌರವ ಧನ ಬೇಕಿಲ್ಲ. ಕೇವಲ ಗುರುತಿನ ಕಾರ್ಡು ನೀಡಿದರೆ ಸಾಕು ಎಂದಿದ್ದಾರೆ.
ಹೀಗೆ ನಾಮ‌ನಿರ್ದೇಶನ ಮಾಡುವಾಗ ಪರಿಶಿಷ್ಟರು, ಮಹಿಳೆಯರು, ಪದವೀಧರರು ಎಂದು ಮೀಸಲಾತಿ ಪರಿಗಣಿಸಬೇಕು ಎಮನದ ಅವರು ಹೀಗೆ ಮಾಡಿದರೆ ಬಳ್ಳಾರಿ ಜಿಲ್ಲೆಯ 2,500 ಜನ ಪಕ್ಷದ ಕಾರ್ಯಕರ್ತರಿಗೆ ಅವಕಾಶ ದೊರೆಯಲಿದೆಂದಿದ್ದಾರೆ.
ಪಕ್ಷಕ್ಕಾಗಿ ದುಡಿದವರಿಗೆ ಒಂದು ಸ್ಥಾನಮಾನ ಕಲ್ಪಿಸಲು ಇದು ಸದಾವಕಾಶ ಸರ್ಕಾರ ಕೂಡಲೇ ನಾಮ‌ನಿರ್ದೇಶನ ಮಾಡಿ ಮುಗಿಸಬೇಕು ಎಂದು ಮನವಿ ಮಾಡಿದರು.
ಇನ್ನು ಕೆಲವು ಸಮುದಾಯಗಳಿಗೆ ಮಾತ್ರ ನಗರದಲ್ಲಿ ಸಭಾಂಗಣ ನಿರ್ಮಾಣಕ್ಕೆ ನಿವೇಶನ, ಸಭಾಂಗಣ ನಿರ್ಮಾಣ ಆಗಿದೆ. ಸಣ್ಣ ಸಮುದಾಯಗಳಿಗೆ ಆಗಿಲ್ಲ. ಅದಕ್ಕಾಗಿ  ಒಂದೇ ಕಡೆ ಸಾಮೂಹಿಕ ವೇದಿಕೆ ಮಾಡಿ, ಅಲ್ಲಿ ಎಲ್ಲಾ ಸಮುದಾಯದ ಜನತೆಗೆ ನಿವೇಶನ ನೀಡಿ ಸಭಾಂಗಣಗಳನ್ನು ನಿರ್ಮುಸಿ ಕೊಡಿ ಎಂದು ಸಹ ಅವರು ಮನವಿ ಮಾಡಿದ್ದಾರೆ.