ಲಲಿತಾ ಬಸಪ್ಪ ಸಿಂಗಾಡಿ ನಿಧನ
(ಸಂಜೆವಾಣಿ ವಾರ್ತೆ)
ಬಳ್ಳಾರಿ ಸೆ.20:ನೆರೆಯ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ರಾಯದುರ್ಗ ತಾಲ್ಲೂಕಿನ  ಡಿ.ಹಿರೇಹಾಳ(ದಂಡಿನ ಹಿರೇಹಾಳ) ಗ್ರಾಮದ ಲಲಿತಾ ಬಸಪ್ಪ ಸಿಂಗಾಡಿ(62) ಸೆ.19 ರಾತ್ರಿ 9 ಗಂಟೆಗೆ ಕಡಿಮೆ ರಕ್ತದೊತ್ತಡದಿಂದಾಗಿ ನಗರದ  ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
ಅವಿವಾಹಿತರಾಗಿದ್ದ ಲಲಿತಾ ಸಿಂಗಾಡಿ ಅವರು, ತಾಯಿ,ಐವರು ಸಹೋದರರು ಹಾಗೂ ಇಬ್ಬರು ಸಹೋದರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ಮೃತರ ಪಾರ್ಥಿವ ಶರೀರದ ಅಂತ್ಯಕ್ರಿಯೆ ಇಂದು  ಮಧ್ಯಾಹ್ನ  ಸ್ವಗ್ರಾಮ ಡಿ.ಹಿರೇಹಾಳದಲ್ಲಿ ಜರುಗಿತು.