ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ  ಉದ್ಘಾಟನಾ ಸಮಾರಂಭ
ಸಂಜೆವಾಣಿ ವಾರ್ತೆ
ದಾವಣಗೆರೆ. ಸೆ.೨೦; ನಗರದ ಜಿಎಂ  ವಿಶ್ವವಿದ್ಯಾಲಯದ  ವತಿಯಿಂದ ಕೈಗಾರಿಕೆ/ಸರ್ಕಾರಿ ಪ್ರಾಯೋಜಿತ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ (CIGSRD) ಉದ್ಘಾಟನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.ಉದ್ಘಾಟನಾ  ಸಮಾರಂಭದಲ್ಲಿ ಆರು  ಕಂಪನಿಗಳೊಂದಿಗೆ ಒಡಂಬಡಿಕೆಯನ್ನು ಮಾಡಿಕೊಳ್ಳಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ  ಕುಲಪತಿಗಳಾದ  ಡಾ. ಶಂಕಪಾಲ್ ಎಸ್. ಆರ್ ಮಾತನಾಡಿ, ನಾಳಿನ ಉದ್ಯೋಗಮಾರುಕಟ್ಟೆಯಲ್ಲಿ ಉತ್ಕೃಷ್ಟಗೊಳಿಸಲುಅಗತ್ಯವಿರುವ ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು   ತಯಾರು ಮಾಡುವ ಕಾರ್ಯಕ್ರಮ ಇದಾಗಿದೆ ಎಂದು ತಿಳಿಸಿದರು ಹೆಚ್ಚುವರಿಯಾಗಿ, ಇದು ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಅಧ್ಯಾಪಕರನ್ನು ಬೆಂಬಲಿಸುವ  ಗುರಿಯನ್ನು ಹೊಂದಿದೆ ಎಂದು ತಿಳಿಸಿದರು.ಈ  ಒಪ್ಪಂದದಿಂದ ಇಂಜಿನಿಯರಿಂಗ್ ವಿಭಾಗದ ಎಲ್ಲಾ ವಿದ್ಯಾರ್ಥಿಗಳ  ಮತ್ತು ಫಾರ್ಮಸಿ ವಿಭಾಗದ ವಿದ್ಯಾರ್ಥಿಗಳ ತಾಂತ್ರಿಕ ಗುಣಮಟ್ಟ ಮತ್ತು ಕೈಗಾರಿಕೆಗಳಿಗೆ ತಕ್ಕಂತೆ ತಯಾರುಮಾಡುವ ಜವಾಬ್ದಾರಿಯಾಗಿದ್ದು, ಅನೇಕ ತರಬೇತಿ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಗುಣಮಟ್ಟವನ್ನು ಹೆಚ್ಚಿಸುವುದಾಗಿದೆ  ಎಂದು  ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕರಾದ ಕಟ್ಟಿಮನಿ ಟಿ. ಆರ್  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ತಾಂತ್ರಿಕ ಮತ್ತು ಪ್ರತಿಭೆಯ ಅಭಿವೃದ್ಧಿಯನ್ನು ಹೆಚ್ಚಿಸಲು ಕಂಪನಿ ಮತ್ತು ಶಿಕ್ಷಣ ಸಂಸ್ಥೆಯ ನಡುವಿನ ಸಹಯೋಗವನ್ನು ಬೆಳೆಸುವುದುಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಕೈಗಾರಿಕೆ, ಸರ್ಕಾರಿ  ಪ್ರಾಯೋಜಿತ  ಸಂಶೋಧನೆ  ಮತ್ತು ಅಭಿವೃದ್ಧಿ ಕೇಂದ್ರದನಿರ್ದೇಶಕರಾದ ಡಾ. ರಾಜಕುಮಾರ್ ಡಿ. ಜಿ ತಿಳಿಸಿದರು.ಒಡಂಬಡಿಕೆಯ ಸಮಯದಲ್ಲಿ ಎಕ್ಸ್ ವರ್ಕ್ಸ್ ಕಂಪನಿಯ ಸ್ಥಾಪಕರಾದ . ಅಕ್ಷರ, ಗ್ಲೋಬಲ್ ಗ್ರೀನ್ ಎನರ್ಜಿ ಸಂಸ್ಥಾಪಕರಾದ . ವಿಠಲ್ ರಾವ್  ತೆಲ್ಕರ್, ಉನ್ನತಿ ಫೌಂಡೇಶನ್ ನ ಚೇಂಜ್ ಮೇಕರ್ ಸುಷ್ಮಾ ಹೈ ಮೀಡಿಯಾದ ಹಿರಿಯ ವ್ಯವಸ್ಥಾಪಕ ರಾದ  . ಮೋಹನ್, ಮೆದಿನಿ ಆಟೋ ಡೆಸ್ಕ್ ನ ನಿರ್ದೇಶಕರಾದ  ಹರ್ಷ  ಮತ್ತು ನ್ಯೂ ಜೈಸಾ ಕಂಪನಿಯ  ಸೆಗ್ಮೆಂಟ್ ಹೆಡ್   . ಜಗದೀಶ್ ಡಿ. ಎನ್,  ಉಪಸ್ಥಿತರಿದ್ದರು.ಒಡಂಬಡಿಕೆ ಕಾರ್ಯಕ್ರಮದಲ್ಲಿ ಉಪಕುಲಪತಿಗಳಾದ  ಡಾ. ಎಚ್. ಡಿ ಮಹೇಶಪ್ಪ, ಹಾಗೂ ವಿಶ್ವವಿದ್ಯಾಲಯದ ಡೀನ್ ಆದ ಡಾ. ಕರಿಬಸಪ್ಪ ಮತ್ತು  ವಿವಿಧ  ವಿಭಾಗಗಳ  ಮುಖ್ಯಸ್ಥರುಗಳು ಮತ್ತು ಅಧ್ಯಾಪಕ ವರ್ಗದವರು ಹಾಗೂ ವಿದ್ಯಾರ್ಥಿಗಳ ಭಾಗವಹಿಸಿದ್ದರು.ಕಾರ್ಯಕ್ರಮದ ನೀರೂಪಣೆಯನ್ನು ರೋಬೋಟಿಕ್ಸ್ ಅಂಡ್ ಆಟೋಮ್ಯಾಷನ್ ವಿಭಾಗದ ಅಧ್ಯಾಪಕರಾದ  ಮುದಾಸಿರ್ ಪಾಷ ನಡೆಸಿಕೊಟ್ಟರು. ಕಾರ್ಯಕ್ರಮದ ಉದ್ಘಾಟನೆ ಗೀತೆಯನ್ನು ಕು. ರಚಿತ  ಹಾಡಿದರು. ಸಿ ಐ ಜಿ ಎಸ್ ರ್ ಡಿ ಸಹಾಯಕ ನಿರ್ದೇಶಕ ರಾದ ಡಾ. ಪೂಜಿತ ಬಿ.ಎಸ್, ಸ್ವಾಗತಿಸಿದರು. ಅಧ್ಯಾಪಕರಾದ  ವಿದ್ಯಾ ಜಿ. ಎಚ್. ವಂದಿಸಿದರು.