ದಾವಣಗೆರೆ ಮೀನುಗಾರಿಕೆ ಇಲಾಖೆಯಲ್ಲಿ ಅಕ್ರಮ; ಕ್ರಮಕ್ಕೆ ಒತ್ತಾಯ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೦: ಮೀನುಗಾರಿಕೆ ಇಲಾಖೆಯು  ಬಡ ಮೀನು ಮಾರಾಟ ಮಾಡುವವರಿಗೆ ಬಂದಂತಹ ಯೋಜನೆಗಳನ್ನು ಶ್ರೀಮಂತರಿಗೆ ಮಾರಿಕೊಳ್ಳುತ್ತಿದ್ದು, ಮೀನುಗಾರರು ಮತ್ತು ಮೀನು ವ್ಯಾಪಾರಿಗಳು ಎಚ್ಚೆತ್ತುಕೊಳ್ಳಬೇಕು ಕೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ಜಿಲ್ಲಾಧ್ಯಕ್ಷ ಎಸ್.ಎಂ. ರಾಜು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಮೀನುಗಾರಿಕೆ ಇಲಾಖೆಯಲ್ಲಿ ಅಕ್ರಮ ನಡೆಯುತ್ತಿದ್ದು, 2015ನೆ ಸಾಲಿನಿಂದ 24ನೇ ಸಾಲಿನವರೆಗೂ ಮೀನು ಮಾರಾಟ ಮಾಡುವ ವ್ಯಕ್ತಿಗಳನ್ನು ಹುಡುಕಿ ಅವರು ಸುಮಾರು ವರ್ಷಗಳಿಂದ ಮೀನು ಮಾರಾಟ ಮಾಡುವುದರಲ್ಲಿ ತೊಡಗಿಕೊಂಡಿದ್ದರೆ, ತಾಲ್ಲೂಕು ಮಟ್ಟದಲ್ಲಿ ಗುರುತಿಕೊಂಡಿದ್ದಲ್ಲಿ, ಅಂತವರನ್ನು ಪ್ರಧಾನ ಮಂತ್ರಿ ಮತ್ಸ್ಯ ಯೋಜನೆ ಅಡಿಯಲ್ಲಿ ಅಕ್ವೇರಿಯಂ, ಕಿಯ್ಸಕೋ ಸೇರಿದಂತೆ ನಿರ್ಮಾಣ ಮಾಡಲೆಂದು ಈ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ ಅದು ಅರ್ಹರಿಗೆ ತಲುಪುತ್ತಿಲ್ಲ ಎಂದು ಆರೋಪಿಸಿದರು.ಈ ಯೋಜನೆಯಡಿ10 ಲಕ್ಷಗಳ ಅನುದಾನವಾಗಿದೆ ಇದರಲ್ಲಿ 6ಲಕ್ಷ ರೂ. ಸರ್ಕಾರದಿಂದ ಸಹಾಯಧನ ಸಬ್ಸಿಡಿ ಕೊಡಲಾಗುತ್ತದೆ. ಆದರೆ ಮೀನು ವ್ಯಾಪಾರಿಗಳಿಗೆ ಮೀನುಗಾರಿಕೆ ಬಹಿರಂಗವಾಗಿ ತಿಳಿಸಲಾಗುತ್ತಿಲ್ಲ. ಇಂತಹ ಯೋಜನೆಗಳನ್ನು ಮೀನುಗಾರಿಕೆ ಇಲಾಖೆ ಗುಟ್ಟಾಗಿ ಇಟ್ಟುಕೊಂಡು ಶ್ರೀಮಂತರಿಗೆ ತಲುಪಿಸುತ್ತಿದೆ.  ಇವರೆ ಶ್ರೀಮಂತರ ದಾಖಲಾತಿಗಳನ್ನು ಸೃಷ್ಟಿ ಮಾಡಲು ಹೇಳಿ ಅನುದಾನ ಬರುವವರೆಗೂ ಒಂದು ವಾರ ಅಥವಾ ಒಂದು ತಿಂಗಳ ಮಟ್ಟಿಗೆ ಅವರಿಗೆ ಮೀನು ಮಾರಲು ತಿಳಿಸಿ ಅವರು ಮೀನು ಮಾರುವ ಪರವಾನಿಗೆ ಪಡೆಯುವವರೆಗೂ ನೋಡಿಕೊಂಡು, 10 ಲಕ್ಷ ರೂ.ಅನುದಾನ ಬಂದ ನಂತರ ಇವರ ಲಂಚದ ಹಣ ತೆಗೆದು ಕೊಂಡು ಅಲ್ಲಿಗೆ ಮೀನು ಮಳಿಗೆಗೆ ಬೀಗ ಹಾಕಿಸುತ್ತಿದ್ದಾರೆ ಎಂದರು.