ಒಳಮೀಸಲಾತಿ ಜಾರಿಗೆ ಅನುಮೋದನೆ ನೀಡದ ರಾಜ್ಯ ಸರ್ಕಾರ; ಎಎಪಿ ಬೇಸರ
ಸಂಜೆವಾಣಿ ವಾರ್ತೆ
ದಾವಣಗೆರೆ.ಸೆ.೨೦: 30 ವರ್ಷಗಳ ಕಾಲ ನಿರಂತರ ಹೋರಾಟದಿಂದ ಒಳ ಮೀಸಲಾತಿ ಜಾರಿ ಕುರಿತು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ ಆದರೆ ಅಂದಿನಿಂದ ಇಂದಿನವರೆಗೂ ಕೂಡ ರಾಜ್ಯ ಸರ್ಕಾರ ಅನುಮೋದನೆ ಮಾಡುವಲ್ಲಿ ವಿಫಲವಾಗಿದೆ ಎಂದು ಆಮ್ ಆದಿ ಪಾರ್ಟಿ ಜಿಲ್ಲಾಧ್ಯಕ್ಷ ಶಿವಕುಮಾರ ಆರೋಪಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಕಡು ಬಡತನದಲ್ಲಿ ಜನಿಸಿದ ಅದೆಷ್ಟೋ ಜನಾಂಗದವರು ಇಂದಿಗೂ ಕೂಡ ಬಡತನದ ರೇಖೆಗಿಂತ ಕೆಳ ವರ್ಗದಲ್ಲೇ ಇದ್ದಾರೆ ಇಂಥವರಿಗೆ ಒಳ ಮೀಸಲಾತಿ ಜಾರಿ ಆಗುವುದರಿಂದ ಅವರ ಆರ್ಥಿಕ ಅಭವೃದ್ಧಿಯು ಸಹ ವೃದ್ಧಿಸಲಿದೆ. ಅಷ್ಟೇ ಅಲ್ಲದೆ ಒಳ ಮೀಸಲಾತಿ ಜಾರಿ ಆಗುವುದರಿಂದ ಅದೆಷ್ಟೋ ಕುಟುಂಬಗಳು ಅರ್ಥಿಕವಾಗಿ ಸದೃಢರಾಗಲು ಸಾಧ್ಯವಾಗುತ್ತದೆ. ಬಹುತೇಕ ರಾಜಕಾರಣಿಗಳು ಮೀಸಲಾತಿಯ ಅವಕಾಶವನ್ನು ಪಡೆದುಕೊಂಡು ಸಾಕಷ್ಟು ಅಬಿವೃದ್ಧಿ ಹೊಂದಿದ್ದಾರೆ ಎಂದು ತಿಳಿಸಿದರು.ಒಳ ಮೀಸಲಾತಿ ಜಾರಿ ಕುರಿತು ಸುಪ್ರಿಂ ಕೋರ್ಟ್ ಸೂಚನೆಯನ್ನು ನೀಡಿದ್ದರು ಸಹ ಇದರ ಬಗ್ಗೆ ಆಯಾ ಸಮುದಾಯದ ಚುನಾಯಿತ ಪ್ರತಿನಿಧಿಗಳು ಇದರ ಬಗ್ಗೆ ಮಾತನಾಡದಿರುವುದು ವಿಪರ್ಯಾಸವಾಗಿದೆ. ಈ ಮೀಸಲಾತಿ ಜಾರಿಯಾದರೆ ಮೀಸಲಾತಿ ಕೈತಪ್ಪುತ್ತದೆ ಎಂಬ ಭಯದಿಂದ ಇದನ್ನು ಜಾರಿ ಮಡಲು ವಿಳಂಬ ಮಾಡುತ್ತಿದ್ದಾರೆ. ನೊಂದವರ ಧ್ವನಿಯಾಗಿ ಆಮ್ ಆದ್ಮ ಪಾರ್ಟಿ ಕೆಲಸ ಮಾಡಲಿದೆ ಅವರ ಪರವಾಗಿ ಹೋರಾಟವನ್ನು ಮಾಡಲಿದೆ. ಸರ್ಕಾರ ಇದನ್ನು ಜಾರಿ ಮಾಡದಿದ್ದರೆ ಮುಂದಿನ ದಿನದಲ್ಲಿ ವಿಧಾನಸೌಧ ಮುತ್ತಿಗೆಯನ್ನು ಸಹ ಹಾಕಲಾಗುವುದು. ಈ ಮೀಸಲಾತಿಯ ಬಗ್ಗೆ ಯಾವುದೇ ರಾಜಕೀಯ ಪಕ್ಷಗಳು ಯಾವ ಮಾತನ್ನು ಸಹ ಹೇಳುತ್ತಿಲ್ಲ ಬರೀ ಮಾತಿನಲ್ಲಿ ಭಾಷಣದಲ್ಲಿ ಹಿಂದುಳಿದವರ ಪರವಾಗಿ ನಾವು ಇದ್ದೇವೆ ಎಂದು ಹೇಳುವ ರಾಜಕೀಯ ಪಕ್ಷದ ಮುಖಂಡ ಇದನ್ನು ಜಾರಿ ಮಾಡಿಸಲು ಮುಂದಾಗಬೇಕಿದೆ ಎಂದು ವಿವಿಧ ರಾಜಕೀಯ ಪಕ್ಷದವರನ್ನು ಶಿವಕುಮಾರಪ್ಪ ಕೆ.ಎಸ್. ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಪಾರ್ಟಿಯ ಆದಿಲ್ ಖಾನ್, ಸುರೇಶ್ ಶಿಡ್ಲಪ್ಪ, ಕೆ.ವಿ.ಪಿ.ವಿಕಾಸ್ ಇದ್ದರು.