ಗ್ರಾಮೀಣ ಪ್ರದೇಶಗಳ ಸ್ವಚ್ಛತೆಗೆ ಒತ್ತು
ಚನ್ನಮ್ಮನ ಕಿತ್ತೂರು,ಸೆ20: ಸರ್ಕಾರ ಗ್ರಾಮೀಣ ಪ್ರದೇಶಗಳಿಗೆ ಸ್ವಚ್ಛತೆಗೆ ವಿಶೇಷ ಒತ್ತು ನೀಡುತ್ತಿದೆ. ಇದರ ಜೊತೆಗೆ ಗ್ರಾಮಸ್ಥರು ಕೈಜೊಡಿಸಬೇಕೆಂದು ತಾಪಂ ಇಓ ಕಿರಣ ಗೋರ್ಪಡೆ ಹೇಳಿದರು.
ತಾಲೂಕಿನ ದೇವರಶೀಗಿಹಳ್ಳಿ ಗ್ರಾಪಂ ಇವರ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಸ್ವಚ್ಚತೆಗೆ ಹೆಚ್ಚು ಒತ್ತು ಕೊಡುವುದು ಆಯಾ ಗ್ರಾಪಂ ಮತ್ತು ಗ್ರಾಮದ ಜನರ ಕರ್ತವ್ಯವಾಗಿದ್ದು. ನಮ್ಮ ಪರಿಸರ ಸ್ವಚ್ಛವಾಗಿದಾಗ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಸಾಧ್ಯವಾಗುತ್ತದೆ. ತಮ್ಮ ಸುತ್ತಮುತ್ತಲು ಇರುವುದನ್ನು ಸ್ವಚ್ಛವಾಗಿರಿಸಿಕೊಂಡಾಗ ಶಾಲೆ ಊರು ಸ್ವಚ್ಛವಾಗಿರುತ್ತದೆ ಎಂದರು.
ನಂತರ ನಮ್ಮ ಆಸ್ತಿ-ನಮ್ಮ ತೆರಿಗೆ ಕರ ವಸೂಲಿ ಮಾಸಾಚರಣೆಯ ಅರಿವು ಮೂಡಿಸಲು ಮನೆ-ಮನೆಗೆ ತೆರಳಿ ಆಸ್ತಿ ಮಾಲಿಕರು ಕರ ತುಂಬುವಂತೆ ಮನವರಿಕೆ ಮಾಡಿ ಕರ ತುಂಬಿಸಿಕೊಂಡು ಅವರಿಗೆ ರಶೀದಿ ನೀಡಿದರು. ಗ್ರಾಮದ ಎಲ್ಲ ಸಾರ್ವಜನಿಕರು ಕರ ನೀಡಿದರೆ ಗ್ರಾಮ ಅಭಿವೃದ್ಧಿಯಾಗಲು ಸಾಧ್ಯವಾಗುತ್ತದೆ. ಸರ್ಕಾರದ ಸಹಾಯ ಪಡೆಯಲು ಆಸ್ತಿಕರ ರಶೀದಿ ಕೇಳುತ್ತಾರೆ. ಅದು ಸುಗಮವಾಗಬೇಕಾದರೆ ಸರ್ಕಾರಕ್ಕೆ ಕರ ಕಟ್ಟಬೇಕಾಗುತ್ತದೆ ಎಂದು ಸಾರ್ವಜನಿಕರಿಗೆ ತಿಳಿಹೇಳಿದರು.
ಈವೇಳೆ ಅಧ್ಯಕ್ಷೆ ರಾಜೇಶ್ವರಿ ಈರಣ್ಣಾ ಬಡಿಗೇರ, ಉಪಾಧ್ಯಕ್ಷ ವಿಜಯಾ.ಜ. ಹಂಚಿನಮನಿ, ಪ್ರಭಾರಿ ಪಿಡಿಓ ವಿನಯಕುಮಾರ ಕೊರವಿ, ಕಾರ್ಯದರ್ಶಿ ಎಮ್.ಎಸ್.ಕಲಭಾವಿ, ಕ್ಲರ್ಕ್ ಎಸ್.ಬಿ.ಹುಕ್ಕೇರಿ, ಯು.ಆರ್.ಹೈಬತ್ತಿ, ವಾ.ಜೆ.ಬುದ್ನೂರ್, ನಿಂಗಪ್ಪ ಹಟ್ಟಿ ಲಾಲ್‍ಸಾಬ ಸನದಿ, ಕೆ.ಎಂ.ಪೂಜೇರ, ಗ್ರಾಪಂ ಸರ್ವಸದಸ್ಯರು, ಕಸವಿಲೇವಾರಿ ಸಿಬ್ಬಂದಿ ಸಾರ್ವಜನಿಕರಿದ್ದರು.