ಪ್ರಗತಿ ಪಪೂ ಕಾಲೇಜಿಗೆ ಶೇ. ೯೫ ಫಲಿತಾಂಶ
ವಿಜಯಪುರ.ಏ೧೩: ಪಟ್ಟಣದ ದೇವನಹಳ್ಳಿ ರಸ್ತೆಯಲ್ಲಿನ ತಾಲೂಕಿನಲ್ಲಿಯೇ ಹೆಸರುವಾಸಿಯಾದ ಏಕೈಕ ಇಲ್ಲಿನ ಪ್ರಗತಿ ಬಾಲಕಿಯರ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶೇ. ೯೫ರಷ್ಟು ಫಲಿತಾಂಶ ಬಂದಿದ್ದು, ಉತ್ತಮ ಸಾಧನೆಯನ್ನು ತೋರಿರುವುದಕ್ಕೆ ಕಾಲೇಜಿನ ಸಂಸ್ಥಾಪಕ ಅಧ್ಯಕ್ಷರಾದ ಎಮ್ ಸತೀಶ್ ಕುಮಾರ್ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿರುವರು.
ಕಾಲೇಜಿನ ಪ್ರಾಂಶುಪಾಲರಾದ ಕೆ.ಮಧುರವರು ಮಾತನಾಡಿ, ಪ್ರಗತಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಿಂದ ೧೭೭ ಮಂದಿ ಪರೀಕ್ಷೆಗೆ ಕುಳಿತಿದ್ದು, ೫೦ ಮಂದಿ ಅತ್ಯುನ್ನತ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ೧೦೫ ಮಂದಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ, ಒಂಬತ್ತು ಮಂದಿ ದ್ವಿತೀಯ ದರ್ಜೆಯಲ್ಲಿ ಹಾಗೂ ಇಬ್ಬರು ಮಾತ್ರ ಉತ್ತೀರ್ಣ ಅಂಕಗಳನ್ನು ಪಡೆದಿರುವರೆಂದು ತಿಳಿಸಿದರು.
ನೂರ್ ಆಫ್ಸಾ ಖಾನೂಂ, ೯೫.೫%(೫೭೩) ಅಂಕಗಳನ್ನು ಪಡೆದಿದ್ದು, ಎಂ ಕೃತಿಕಾ ಶೇ ೯೫.೧(೫೭೧) ಅಂಕಗಳನ್ನು ಪಡೆದಿದ್ದು, ಶಿಜಾ ಕೌಸರ್ ೯೩.೮೩%(೫೬೩) ಅಂಕಗಳನ್ನು ಪಡೆದಿರುವರೆಂದು, ವಾಣಿಜ್ಯ ವಿಭಾಗದಲ್ಲಿ ಸುಚಿತ್ರ ೯೭.೧೬%(೫೮೩) ಅಂಕಗಳನ್ನು, ಸಿಎಂ ಐಶ್ವರ್ಯ ೯೭%(೫೮೨) ಅಂಕಗಳನ್ನು, ಹರ್ಷಿಯ ಶಫೀನಾ ಶೇ ೯೬.೫(೫೭೯) ಅಂಕಗಳನ್ನು, ಭೂಮಿಕಾ ಶೇ.೯೬(೫೭೬) ಅಂಕಗಳನ್ನು, ಅಹಲ್ಯಾ ಶೇ.೯೨.೫(೫೫೫), ಎಸ್.ನೇತ್ರ ಶೇ.೯೦(೫೩೬) ಅಂಕ ಪಡೆದಿರುವರೆಂದು ತಿಳಿಸಿದರು.
ಆಡಳಿತಾಧಿಕಾರಿಗಳಾದ ಎಸ್.ಕೃಪಾಶಂಕರ್‌ರವರು ಮಾತನಾಡಿ, ಗ್ರಾಮೀಣ ಹೆಣ್ಣು ಮಕ್ಕಳ ಶೈಕ್ಷಣಿಕ ಅಭಿವೃದ್ದಿಗಾಗಿಯೇ ಕಳೆದ ೩ ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಶಿಕ್ಷಣ ಸಂಸ್ಥೆಯಲ್ಲಿ ನೀಟ್ ಹಾಗೂ ಮತ್ತಿತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚುವರಿ ಅಕಾಡಮಿಗಳನ್ನು ನಡೆಸುತ್ತಿದ್ದು, ಇದರಲ್ಲಿಯೂ ತಾಲೂಕಿನಲ್ಲಿಯೇ ನಮ್ಮ ಶಾಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ತೋರಿರುವರೆಂದು ತಿಳಿಸಿದರು.