ಪ್ರಗತಿ ಸಂಯುಕ್ತ ಪಪೂ ಕಾಲೇಜಿಗೆ ಶೇ.೯೧ ರಷ್ಟು ಫಲಿತಾಂಶ
ವಿಜಯಪುರ.ಏ೧೪:ಪಟ್ಟಣದ ಪ್ರಗತಿ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ ಶೇ.೯೧ ರಷ್ಟು ಫಲಿತಾಂಶ ಬಂದಿದ್ದು, ಪರೀಕ್ಷೆಗೆ ಕುಳಿತ ೧೬೯ ವಿದ್ಯಾರ್ಥಿಗಳಲ್ಲಿ ೩೪ ಮಂದಿ ಅತ್ಯುತ್ತಮ ಶ್ರೇಣಿಯಲ್ಲಿ, ೯೭ ಮಂದಿ ಪ್ರಥಮ ದರ್ಜೆಯಲ್ಲಿ, ೧೯ ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿಜ್ಞಾನ ವಿಭಾಗದಲ್ಲಿ ಕೆ.ಎನ್.ಲಿಖಿತ್ ಕುಮಾರ್ (೫೮೬ ಅಂಕ)ಶೇ.೯೭.೬೭ ಗಳಿಸಿ, ಕಾಲೇಜಿಗೆ ಕೀರ್ತಿ ತಂದಿರುತ್ತಾನೆ. ಜಿ.ಅಜಯ್ ಕುಮಾರ್ (೫೬೦ ಅಂಕ)ಶೇ.೯೩,೩೩, ಗಜಲಾ ಫಿರ್‌ದೋಸ್(೫೫೮ ಅಂಕ)೯೩%, ಆರ್.ತನುಜ (೫೫೪ ಅಂಕ)೯೨.೩೩%, ಎಂ.ಮಾನ್ಯ(೫೫೧ ಅಂಕ)೯೧.೮೩%, ಎಂ. ಕೀರ್ತನ(೫೪೭ ಅಂಕ)೯೧.೧೭%, (ಅಂಕ)ಬಿ.ಆರ್.ಐಶ್ವರ್ಯ (೫೫೩ ಅಂಕ)೯೨.೧೬%, ಅರ್ಬಿಯಾ ತಾಜ್(೫೪೧ ಅಂಕ)೯೦.೧೬%, ವಾಣಿಜ್ಯ ವಿಭಾಗದ ಇ.ಬಿ.ಎ.ಸಿ(ಎಕನಾಮಿಕ್ಸ್ ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ, ಕಂಪ್ಯೂಟರ್ ಸೈನ್ಸ್) ಯಲ್ಲಿ ವಿ.ಶರಣ್ಯ (೫೭೮ ಅಂಕ)ಶೇ.೯೬.೩೩%, ಎಸ್.ಶ್ರಾವ್ಯ (೫೭೪ ಅಂಕ) ಶೇ.೯೫.೬೭, ಕೆ.ಜನನಿ (೫೫೬ ಅಂಕ) ೯೨.೬೭%, ಮೇಘನಾ ಎಚ್.ಆರ್.(೫೫೨ ಅಂಕ)ಶೇ.೯೨, ಎಂ.ಪುಷ್ಪಾಂಜಲಿ (೫೪೭ ಅಂಕ)ಶೇ.೯೧.೧೭, ವಾಣಿಜ್ಯ ವಿಭಾಗದ ಎಸ್.ಇ.ಬಿ.ಎ(ಸ್ಟ್ಯಾಟಿಸ್ಟಿಕ್ಸ್, ಎಕನಾಮಿಕ್ಸ್ ಬಿಸಿನೆಸ್ ಸ್ಟಡೀಸ್, ಅಕೌಂಟೆನ್ಸಿ,) ಯಲ್ಲಿ ಜಿ.ಮೋನಿಕ (೫೫೬ ಅಂಕ)ಶೇ.೯೨.೬೬, ಜಿ.ನಿಖಿತ (೫೫೦ ಅಂಕ)ಶೇ.೯೧.೬೬, ಗಳನ್ನು ಗಳಿಸಿರುವರೆಂದು ಕಾಲೇಜಿನ ಪ್ರಾಂಶುಪಾಲ ಸುರೇಶ್‌ರವರು ತಿಳಿಸಿದರು.
ಕಾಲೇಜಿನ ಆಧ್ಮಕ್ಷರಾದ ಎಂ.ಸತೀಶ್ ಕುಮಾರ್, ವ್ಯವಸ್ಥಾಪಕ ನಿರ್ದೇಶಕ ಎಸ್. ಕೃವಾಶಂಕರ್ ಹಾಗೂ ಕಾಲೇಜಿನ ಪ್ರಾಂಶುಪಾಲ ಸುರೇಶ್ ಮತ್ತು ಶಿಕ್ಷಕ ವೃಂದ ವಿದ್ಯಾರ್ಥಿ ಲಿಖಿತ್ ಕುಮಾರ್‌ಗೆ ಅಭಿನಂದನೆ ಸಲ್ಲಿಸಿದರು.