ಕೇಂದ್ರದ ಗ್ಯಾರಂಟಿ ಜನರಿಗೆ ತಲುಪಿಸುತ್ತೇವೆ: ಪುಷ್ಪ ಅಮರನಾಥ್
ಸಂಜೆವಾಣಿ ನ್ಯೂಸ್
ಮೈಸೂರು: ಏ.13:- ಬಡವರ ಬದುಕುರೂಪಿಸುವ, ಶ್ರಮಿಕರ ಕೂಲಿಯನ್ನು ಹೆಚ್ಚಿಸುವ, ಯುವಕರಿಗೆ ಉದ್ಯೋಗ ಖಾತರಿ ನೀಡುವ ಕಾಂಗ್ರೆಸ್‍ಗ್ಯಾರಂಟಿ ಕಾರ್ಡ್ ಅನ್ನು ಮನೆ ಮನೆಗೆ ತಲುಪಿಸಲಾಗುವುದು ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ. ಪುಷ್ಪಾ ಅಮರನಾಥ್ ತಿಳಿಸಿದರು.
ಕಾಂಗ್ರೆಸ್ ಭವನದಲ್ಲಿ ಶುಕ್ರವಾರ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಅನಾವರಣಗೊಳಿಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ನ್ಯಾಯಗಳೊಂದಿಗೆ 25 ಕಾರ್ಯಕ್ರಮಗಳನ್ನು ಒಳಗೊಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ,ನಾಯಕ ರಾಹುಲ್ ಗಾಂಧಿ ಸಹಿ ಮಾಡಿರುವ ಗ್ಯಾರಂಟಿ ಕಾರ್ಡ್ ಅನ್ನು ಪ್ರತಿಯೊಬ್ಬರಿಗೂ ತಲುಪಿಸುತ್ತೇವ ಎಂದರು. ಗೃಹಲಕ್ಷೀ ಹಣದಿಂದ ಓದಲು ಅನುಕೂಲವಾಯಿತು ಎಂದು ದ್ವಿತೀಯ ಪಿಯು ರ್ಯಾಂಕ್ ಪಡೆದ ವಿದ್ಯಾರ್ಥಿಯೊಬ್ಬ ನುಡಿದಿದ್ದಾನೆ. ಗೃಹಲಕ್ಷ್ಮೀ ಹಣದಿಂದ ಬ್ರಿಡ್ಜ್ ಖರೀದಿಸಿರುವುದಾಗಿ ಮಹಿಳೆಯೊಬ್ಬರು ತಿಳಿಸಿದ್ದಾರೆ.
ಗೃಹಲಕ್ಷೀ ಹಣದಿಂದ ಅಡವಿಟ್ಟ ತಾಳಿಯನ್ನು ಬಿಡಿಸಿಕೊಂಡೆ ಎಂದು ಇನ್ನೊಬ್ಬ ಮಹಿಳೆ ನುಡಿದಿದ್ದಾರೆ. ಈ ಹೇಳಿಕೆಗಳನ್ನು ಗಮನಿಸಿದರೆ ಗ್ಯಾರಂಟಿ ಯೋಜನೆಗಳು ಬಡವರ ಬದುಕಿಗೆ ನೆರವಾಗಿರುವುದು ತಿಳಿಯುತ್ತದೆ.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಯುವನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ ಮತ್ತು ಪಾಲುದಾರಿಕೆಯ ನ್ಯಾಯವನ್ನು ಜಾರಿ ಮಾಡಲಿದ್ದೇವೆ. ಯುವಕರಿಗೆ ಉದ್ಯೋಗ ಖಾತರಿ, ಮಹಾಲಕ್ಷ್ಮೀ ಯೋಜನೆಗೆ ಮುಖಾಂತರಕುಟುಂಬಕ್ಕೆ 1 ಲಕ್ಷ ರೂ., ಎಂಎಸ್‍ಪಿ ಜಾರಿ, ಕೃಷಿಯಿಂದ ಜಿಎಸ್‍ಟಿ ತೆಗೆಯುವ ಶಪಥ ಮಾಡಿದ್ದೇವೆ. ದೇಶದ್ಯಂತ ಜಾತಿ ಗಣತಿ ನಡೆಸುತ್ತೇವೆ ಎಂದು ಹೇಳಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಮಾತನಾಡಿ, ನರೇಂದ್ರ ಮೋದಿ ಅವರು ಮಾತಲ್ಲಿ ಮೋಡಿ ಮಾಡಿ ದೇಶವನ್ನು ಹಾಳುಮಾಡಿದರು. ಪಂಚ ಗ್ಯಾರಂಟಿಗಳಿಗೆ ಟೀಕಾ ಪ್ರಹಾರ ನಡೆಸಿದರು. ಖಜಾನೆ ಖಾಲಿಯಾಗುತ್ತದೆಎಂದು ದೂಷಿಸಿದರು. ಆದರೆ, ಸಿದ್ದರಾಮಯ್ಯ ಅವರು ಐದು ಗ್ಯಾರಂಟಿ ಅನುಷ್ಠಾನಮಾಡುವುದಲ್ಲದೇ ಅಭಿವೃದ್ಧಿಗೂ ಒತ್ತು ಕೊಟ್ಟಿದ್ದಾರೆ. ಉದಾಹರಣೆಗೆ ಮೈಸೂರಿಗೆ 500 ಕೋಟಿರೂ. ಅನುದಾನ ಕೊಟ್ಟಿದ್ದಾರೆ ಎಂದು ಹೇಳಿದರು.
ವಸ್ತುಪ್ರದರ್ಶನ ಪ್ರಾಕಾರದ ಅಧ್ಯಕ್ಷ ಅಯೂಬ್ ಖಾನ್ ಮಾತನಾಡಿ, ಜೆಡಿಎಸ್ ಅಸಲಿ ಮುಖ ಜನತೆಗೆ ಗೊತ್ತಾಗಿದೆ.
ಯಾವುದೇಅಲ್ಪಸಂಖ್ಯಾತ ಮುಖಂಡರು ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ಬೆಂಬಲಿಸುವುದಿಲ್ಲ. ಮೈತ್ರಿಬೆಂಬಲಿಸುವ ಮುಸ್ಲಿಂರಿಗೆ ಈಗ ತಿಳವಳಿಕೆ ಬರುತ್ತಿದೆ ಎಂದು ತಿಳಿಸಿದರು.
ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಮಾಡುವುದಾಗಿ ಹೇಳಿದ ನರೇಂದ್ರ ಮೋದಿಅವರು ಪಕೋಡ ಮಾರುವಂತೆ ಹೇಳಿದರು. ಯಾವ ಆಶ್ವಾಸನೆಯನ್ನೂ ಮೋದಿಯವರು ಈಡೇರಿಸಲಿಲ್ಲ. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೊಳಿಸಿದೇಶಕ್ಕೆ ಮಾದರಯಾಯಿತು ಎಂದರು.
ಜಿಪಂ ಮಾಜಿ ಸದಸ್ಯ ಅರುಣ್ ಕುಮಾರ್, ಪುಷ್ಪವಲ್ಲಿ, ಮೋದಾಮಣಿ, ಟಿ.ಬಿ. ಚಿಕ್ಕಣ್ಣ, ಕೈಸರ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು.